ವರದಿಗಾರರು :
ರಾಮಕೃಷ್ಣೇಗೌಡ ||
ಸ್ಥಳ :
ಹುಣಸೂರು
ವರದಿ ದಿನಾಂಕ :
25-11-2025
ದಿ ಟಾಸ್ಕ್” ಸಿನೆಮಾಗೆ ರಾಜ್ಯವ್ಯಾಪಿ ಮೆಚ್ಚುಗೆ – ಹುಣಸೂರಿನಲ್ಲಿ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ರೇಣುಕಮ�
ಡಿ.ವೈ.ಎಸ್.ಪಿ ಪೊಲೀಸ್ ಅಧಿಕಾರಿಗಳಾದ ಎಲ್. ವೈ. ರಾಜೇಶ್ ಅವರ ಪುತ್ರ ಜಯ ಸೂರ್ಯ ಆರ್. ಆಜಾದ್ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿರುವ “ದಿ ಟಾಸ್ಕ್” ಕನ್ನಡ ಚಲನಚಿತ್ರಕ್ಕೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.
ಚಿತ್ರಕ್ಕೆ ಬಂದಿರುವ ಈ ಹರ್ಷಭರಿತ ಪ್ರತಿಕ್ರಿಯೆಯ ನಡುವೆ, ಹುಣಸೂರು ತಾಲೂಕಿನ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ರೇಣುಕಮ್ಮ ಅವರು ತಮ್ಮ ಅಭಿಮಾನಿಗಳೊಂದಿಗೆ ಹುಣಸೂರಿನ ಲೀಲಾ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸಿ, ತಂಡಕ್ಕೆ ಶುಭ ಹಾರೈಸಿದರು. ಈ ಚಿತ್ರವು ಶತ ದಿನಗಳ ಸಂಭ್ರಮಾಚರಣೆಗೆ ಪಾದಾರ್ಪಣೆ ಮಾಡಲಿ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.
