ಹನುಮಂತ ಹೊತ್ತು ತಂದ ಪರ್ವತ ನೋಡಿ ಆಶ್ಚರ್ಯಚಕಿತರಾದರು!
ಅಂಗೈಯಲ್ಲೇ ಪರ್ವತ ಹಿಡಿದ ಹನುಮಂತ ರಾಮ-ರಾವಣರ ಯುದ್ಧವಾಗುತ್ತಿತ್ತು. ರಾಮನು ರಾವಣನ ಸೇನೆಯಲ್ಲಿದ್ದ ಅಹಿ -ಮಹಿ ರಾಕ್ಷಸರನ್ನು ಸಂಹರಿಸಿದ. ರಾಮನ ಸೇನೆಯಲ್ಲಿದ್ದವರೆಲ್ಲ ಜೈ ಜೈಕಾರ ಮಾಡಿದರು. ಹನುಮ ಸೇರಿದಂತೆ ಎಲ್ಲರೂ ಸಂತೋಷದಿ ಕುಣಿದರು.ಇದರಿಂದ ರಾವಣನಿಗೆ ಕೋಪ ಬಂದು ತನ್ನ ಎಲ್ಲಾ ರಾಕ್ಷಸ ಬಳಗವನ್ನು ಒಂದೆಡೆ ಸೇರಿಸಿದ. ಘೋರ ಕದನ ನಡೆಯುತ್ತಿದೆ
ವೀರಾವೇಶ ದಿಂದ ರಾಮ ಆ ರಾಕ್ಷಸರ ಮೇಲೆ ಬಾಣ ಗಳನ್ನು ಬಿಟ್ಟು ಅವರನ್ನು ಹಿಮ್ಮೆಟ್ಟಿಸಿದನು. ರಾಮನ ಬಾಣಗಳನ್ನು ರಾಕ್ಷಸರು ಎದುರಿಸಲಾರದೆ ಹತರಾದರು. ಇದನ್ನು ನೋಡಿ, ಪರಾಕ್ರಮಿ, ಯುದ್ಧ ನಿಪುಣ ನಾದ, ಸ್ವತಃ ರಾವಣ ರಥವೇರಿ ಯುದ್ಧಕ್ಕೆ ಬಂದನು. ರಾವಣ ಬಿಡುವ ಬಾಣಕ್ಕೆ ಭೂಮ್ಯಾಕಾಶಗಳೇ ಕಂಪಿಸಿದವು. ರಾಮ ನ ಸೈನ್ಯದಲ್ಲಿ ವಾನರರು ಯಾರಿಗೂ ಕಡಿಮೆಯಿಲ್ಲದಂತೆ ಯುದ್ಧ ಮಾಡುತ್ತಿದ್ದ ರು. ಲಕ್ಷ್ಮಣನಂತು ರಾವಣನ ಮುಂದೆ ನಿಂತು ಕೋಪದಿಂದ ಘರ್ಜಿಸುತ್ತಾ ಯುದ್ಧ ಮಾಡಿ, ರಾವಣನನ್ನು ಪ್ರತಿ ಸಲವೂ ಅವಮಾನಿಸಿದ.
ಲಕ್ಷ್ಮಣನ ಆರ್ಭಟ ಕಂಡು, ರಾವಣಗೆ ವಿಪರೀತ ಕೋಪ ಬಂದಿತು. ಸಿಟ್ಟಿನಿಂದಏ ಲಕ್ಷ್ಮಣ,ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ನನ್ನನ್ನೇ ಅವಮಾನಿಸುತ್ತೀಯಾ?ಈಗ ನೋಡು, ಎಂದು ಪರಮೇಶ್ವರನನ್ನು ಪ್ರಾರ್ಥಿಸಿ, ಶಿವನಾಮ ಜಪಿಸುತ್ತಾ ಮಹಾ ಶಕ್ತಿಶಾಲಿಯಾದ ಅಸ್ತ್ರವನ್ನು ಲಕ್ಷ್ಮಣನ ಮೇಲೆ ಪ್ರಯೋಗ ಮಾಡಿದ. ಇದರಿಂದ ತತ್ತರಿಸಿದ ಲಕ್ಷ್ಮಣ ಭೂಮಿ ಮೇಲೆ ಉರುಳಿ ಬಿದ್ದು ಪ್ರಜ್ಞೆ ತಪ್ಪಿತು.
ಇತ್ತು ರಾವಣನ ಕಡೆ ಸೇನೆಯವರು ರಾವಣಗೆ ಜಯ ಜಯಕಾರ ಕೂಗಿದರು. ಅಲ್ಲಿಗೆ ಅಂದಿನ ಯುದ್ಧ ಮುಗಿಯಿತು. ಲಕ್ಷ್ಮಣ ಎಚ್ಚರ ತಪ್ಪಿ ಬಿದ್ದ ಸುದ್ದಿ ವಾನರ ಸೇನೆಯಲ್ಲಿ ಹರಡಿ ಗುಲ್ಲೆದ್ದಿತು. ಹನು ಮಂತ ಲಕ್ಷ್ಮಣನನ್ನು ಎತ್ತಿಕೊಂಡು ಪರ್ಣಕುಟೀರಕ್ಕೆ ಬಂದು ಮಲಗಿಸಿದನು. ತನ್ನ ಪ್ರೀತಿಯ ಸಹೋದರನ ಇಂಥ ಅವಸ್ಥೆಯನ್ನು ಕಂಡು ರಾಮ ಮಮ್ಮುಲ ಮರುಗಿದನು. ಲಕ್ಷ್ಮಣ ಎಚ್ಚರ ತಪ್ಪಿ ಮಲಗಿದ್ದ ಅವನ ದೇಹದಿಂದ ರಕ್ತ ಹೋಗುತ್ತಿ ತ್ತು. ಇದನ್ನು ಕಂಡ ರಾಮ ನೋವಿನಿಂದ ಲಕ್ಷ್ಮಣಾ, ಲಕ್ಷ್ಮಣಾ ನನ್ನ ಪ್ರೀತಿಯ ಸಹೋದರ ಎದ್ದೇಳು ಏಳು ಎಂದು ದುಃಖದಿಂದ ಕೂಗಿದ.
ಆದರೆ ಲಕ್ಷ್ಮಣ ಏಳಲಿಲ್ಲ. ರಾಮ ಜೋರಾಗಿ ಅಳತೊಡಗಿದ. ಇದನ್ನು ಕಂಡು ವಾನರ ಸೇನೆ ದುಃಖದಲ್ಲಿ ಮುಳುಗಿತು. ಎಲ್ಲಾ ಕಡೆ ಸ್ಮಶಾನ ಮೌನ ಆವರಿಸಿತು. ಅದಾಗಲೆ ಹನುಮಂತನು ಒಳ್ಳೆಯ ವೈದ್ಯರು ಯಾರಿದ್ದಾರೆ ಎಂದು ವಿಭೀಷಣನನ್ನು ವಿಚಾರಿಸಿ ದಾಗ ಲಂಕಾ ಪಟ್ಟಣದಲ್ಲಿ "ಸುಷೇಣ" ನೆಂಬ ಅಪ್ರತಿಮ ವೈದ್ಯನಿದ್ದಾನೆ ಅವನನ್ನು ಹೇಗಾದರೂ ಮಾಡಿ ಕೂಡಲೇ ಕರೆದು ಕೊಂಡು ಬಾ ಎಂದನು. ಹನುಮಂತ ನೇರವಾಗಿ ಲಂಕಾ ನಗರಕ್ಕೆ ಬಂದು, ಸುಷೇಣನ ಮನೆಯನ್ನು ಹುಡುಕಿ, ಕರೆದರೆ, ನಾನು ಶತ್ರು ಪಕ್ಷದವರ ಉಪಚಾರ ಮಾಡುವುದಿಲ್ಲ ಎಂದಾಗ ಸುಷೇಣನ ಮನೆಯಲ್ಲಿರುವ ಅಗತ್ಯ ಔಷಧಿ ವಸ್ತು ಗಳು ತುಂಬಿದ ಪೆಟ್ಟಿಗೆ ಸಮೇತ ಸುಷೇಣ ನನ್ನು ಹೊತ್ತುಕೊಂಡು ಲಕ್ಷ್ಮಣನಿದ್ದಲ್ಲಿಗೆ ಬಂದನು. ಸುಷೇಣ ಬಂದವನೇ, ರಾಮನ ನ್ನು, ವಿಭೀಷಣನನ್ನು ನೋಡಿ ಭಕ್ತಿಯಿಂದ ಕೈ ಮುಗಿದು ಎಲ್ಲರಿಗೂ ಧೈರ್ಯವನ್ನು ಹೇಳಿದನು. ನಂತರ ಲಕ್ಷ್ಮಣನನ್ನು ಪರೀಕ್ಷಿ ಸಿದಾಗ ವೈದ್ಯರ ಮುಖದಲ್ಲಿ ಗೆಲುವಿನ ಗೆರೆ ಮೂಡಿದವು. ರಾಮನ ಕಡೆ ತಿರುಗಿ ಲಕ್ಷ್ಮಣ ಜೀವಂತವಾಗಿದ್ದಾನೆ. ಆದ ಗಾಯಗಳಿಂದ ಎಚ್ಚರ ತಪ್ಪಿದ್ದಾನೆ ಅಷ್ಟೇ ಎಂದಾ ಗ ರಾಮನ ಆತಂಕ ದೂರವಾಗಿ ಪ್ರಸನ್ನ ಗೊಂಡನು. ಖಂಡಿತವಾಗಿಯೂ ನನ್ನ ತಮ್ಮ ಜೀವಂತವಾಗಿದ್ದಾನೆಯೇ, ಹಾಗಾದರೆ ಗುಣವಾಗುತ್ತಾನೆಯೇ ಎಂದು ಕೇಳಿದ. ವೈದ್ಯರು, ಹೌದು ಚೇತರಿಸಿ ಕೊಳ್ಳಬೇಕಾದರೆ ನಾನೊಂದು ಔಷಧಿಯನ್ನು ಹೇಳುತ್ತೇನೆ ಅದನ್ನು ತರಬೇಕು ಎಂದನು.
ಅಲ್ಲೇ ಇದ್ದ ಹನುಮಂತ ನೀವು ಯಾವು ದೇ ಔಷಧಿ ಹೇಳಿದರೂ ನಾನು ತರುತ್ತೇನೆ ಎಂದನು. ಲಕ್ಷ್ಮಣ ಬೇಗನೆ ಪ್ರಜ್ಞೆ ಬರಲು ಸಂಜೀವಿನಿ ಎಂಬ ಹೆಸರಿನ ವನಸ್ಪತಿ ಔಷಧಿ ಬೇಕು. ಅದು ಇರುವುದು ಉತ್ತರ ದ ದ್ರೋಣಗಿರಿ ಪರ್ವತದಲ್ಲಿ. ಈಗ ಕತ್ತ ಲಾಗಿದೆ ನಾಳೆ ಬೆಳಿಗ್ಗೆ ಸೂರ್ಯೋದಯ ವಾಗುವುದರೊಳಗೆ ಆ ಸಸ್ಯ ಬೇಕು ಆದರೆ ಇದು ಬಹಳ ಕಷ್ಟಕರವಾದ ಕೆಲಸ ಯಾರು ಮಾಡುತ್ತೀರಿ ಎಂದು ಸುಷೇಣ ಕೇಳಿದಾಗ ಥಟ್ಟನೆ ಹನುಮಂತ ನಾನು ಮಾಡುತ್ತೇನೆ ಎಂದನು.
ಸುಷೇಣನಿಗೆ ಖುಷಿಯಾಯಿತು. ಆ ಪರ್ವತಕ್ಕೆ ಹೇಗೆ ಹೋಗಬೇಕು ಮತ್ತು ದಾರಿ ಎಲ್ಲಿದೆ ಎಂಬುದನ್ನು ತಿಳಿಸಿದರು. ಹನುಮನು ಬೀಸುವ ಗಾಳಿಯ ಕಡೆ ಕೈ ಎತ್ತಿ ಆಕಾಶಕ್ಕೆ ನೆಗೆದ. ವೈದ್ಯರು ಹೇಳಿದ ಔಷಧಿಯ ಹೆಸರನ್ನು ಮರೆಯಬಾರ ದೆಂದು ದಾರಿಯಲ್ಲಿ ಹೋಗುವಾಗ, ಸಂಜೀವಿನಿ, ವಿಶಲ್ಯಕರ್ಣ, ಸಾವಳ್ಯ ಕರ್ಣಿ, ದಿವ್ಯ ಔಷಧಿ, ಹೀಗೆ ಬಾಯಲ್ಲಿ ಹೇಳುತ್ತಾ ಆಕಾಶದಲ್ಲಿ ಹಾರುತ್ತಿದ್ದ.ಬಹಳ ಬೇಗ ಹಿಮಾಲಯ ಪರ್ವತ ತಲುಪಿದ. ವೈದ್ಯರು ಹೇಳಿದ ದ್ರೋಣಗಿರಿ ಪರ್ವತ ಕಂಡಿತು ಅಲ್ಲಿ ಇಳಿದ. ವನಸ್ಪತಿ ಎಲ್ಲಿದೆ ಎಂದು ಹುಡುಕುವ ಭರಾಟೆಯಲ್ಲಿ ವನಸ್ಪತಿ ಹೆಸರುಗಳನ್ನೇ ಮರೆತನು. ಏನು ಮಾಡಿದರೂ, ಎಷ್ಟು ಯೋಚಿಸಿದರೂ ನೆನಪಾಗಲಿಲ್ಲ. ಸಮಯವಾಗುತ್ತಿದೆ ಕೊನೆಗೆ ತಡ ಮಾಡದೆ ದ್ರೋಣಗಿರಿ ಪರ್ವತವನ್ನೆ ಅಂಗೈಲಿ ಹಿಡಿದು ವೇಗವಾ ಗಿ ಹಾರುತ್ತಾ ಸೂರ್ಯೋದವಿರಲಿ, ಅರುಣೋದಯಕ್ಕೆ ಮುಂಚೆಯೇ ಬಂದನು. ಹನುಮಂತನಿಗಾಗಿ ದಾರಿ ಕಾಯುತ್ತಿದ್ದ ಎಲ್ಲರೂ, ಹನುಮಂತ ಹೊತ್ತು ತಂದ ಪರ್ವತವನ್ನು ನೋಡಿ ಆಶ್ಚರ್ಯ ಚಿಕಿತ ರಾದರು. ಅವನದು ಎಂತಹ ಶಕ್ತಿ ಎಂದುಕೊಂಡರು. ವೈದ್ಯರು,ಇದೇನು ಹನುಮಂತ ಔಷಧಿ ಸಸ್ಯ ತೆಗೆದು ಕೊಂಡು ಬಾ ಎಂದರೆ ಪರ್ವತವನ್ನೇ ತಂದಿದ್ದೆಯಲ್ಲ ಏಕೆ ಎಂದರು. ನನಗೆ ಔಷಧಿ ಸಸ್ಯದ ಹೆಸರು ಮರೆತು ಹೋಯಿತು ಅದಕ್ಕೆ ಪರ್ವತವನ್ನೆ ತಂದೇ ಎಂದ. ತಕ್ಷಣ ವೈದ್ಯರು ಪರ್ವತವನ್ನು ಹತ್ತಿ ತಮಗೆ ಬೇಕಾದ ವನಸ್ಪತಿ ತೆಗೆದುಕೊಂಡು ಬಂದು ಲಕ್ಷ್ಮಣನಿಗೆ ಔಷಧಿ ಮಾಡಿದರು. ಗುಣಮುಖನಾದ ಲಕ್ಷ್ಮಣ ಸ್ವಲ್ಪ ಹೊತ್ತಿಗೆ ಕಣ್ಣು ತೆರೆದನು.
ರಾಮನು ಲಕ್ಷ್ಮಣನ ಹತ್ತಿರವೇ ಕುಳಿತಿದ್ದ. ಕಣ್ಣು ಬಿಟ್ಟ ಲಕ್ಷ್ಮಣ ಅಣ್ಣಾ ಎಂದು ಕರೆದಾಗ, ರಾಮನ ಆನಂದಕ್ಕೆ ಪಾರವೇ ಇರಲಿಲ್ಲ. ಸ್ವಲ್ಪ ಹೊತ್ತು ಲಕ್ಷ್ಮಣ ಮೇಲೆದ್ದು ಕೂತನು ರಾಮ ಲಕ್ಷ್ಮಣನನ್ನು ಬಿಗಿದಪ್ಪಿದ. ಇದನ್ನು ಕಂಡ ಹನುಮಂತನಿಗೆ ಆನಂದ ದಿಂದ ಕಣ್ಣಿನಲ್ಲಿ ನೀರು ಬಂದಿತು. ಎಲ್ಲರಿಗೂ ಹರ್ಷವಾಯಿತು. ರಾಮನ ಸೇನೆಗೆ ಬಂದಿದ್ದ ದೊಡ್ಡ ಕಂಠಕ ಕಳೆಯಿತು.ಎಲ್ಲರೂ ಊಟ ಮಾಡಿ ಮಲಗಿ ಮರು ದಿನದ ಯುದ್ಧಕ್ಕೆ ಹೊಸ ಉತ್ಸಾಹ, ಉಲ್ಲಾಸದಿಂದ ತಯಾರಿ ಮಾಡಿದರು.
ಇತರೆ ಸುದ್ದಿಗಳು