ಕೆಂಪೇಗೌಡ ಯುವಶಕ್ತಿ ವೇದಿಕೆಯ 8ನೇ ವಾರ್ಷಿಕೋತ್ಸವ: ಯಲಿಯೂರಿನಲ್ಲಿ ಸಂಕ್ರಾಂತಿ ಸಂಭ್ರಮ
ಕೆಂಪೇಗೌಡ ಯುವಶಕ್ತಿ ವೇದಿಕೆಯ 8ನೇ ವರ್ಷದ ವಾರ್ಷಿಕೋತ್ಸವ ಮತ್ತು ವಿಶ್ವ ವಿಖ್ಯಾತ ಬೆಂಗಳೂರು ಮಹಾನಗರಕ್ಕೆ ಅಡಿಗಲ್ಲುವಿಟ್ಟ ಈ ಸುಸಂದರ್ಭ ಪ್ರಯುಕ್ತ ವಿಶೇಷ ರಾಸುಗಳ ಫ್ಯಾಷನ್ ಶೋ ಮತ್ತು ಸಂಕ್ರಾಂತಿ ಸುಗ್ಗಿ ಹಬ್ಬ ಯಲಿಯೂರು ಗ್ರಾಮದಲ್ಲಿ ರಾಜ್ಯಾಧ್ಯಕ್ಷರಾದ ಅನಿಲ್ ಗೌಡ್ರು ನೇತೃತ್ವದಲ್ಲಿ ಆಯೋಜಿಸಲಾಗಿತ್ತು
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಲು ಉತ್ಪಾದಕರ ಸಹಕಾರ ಸಂಘದ ಸಂಘದ ಅಧ್ಯಕ್ಷರಾದ ಪ್ರಕಾಶ್ ವಹಿಸಿದ್ದರು ಈ ಕಾರ್ಯಕ್ರಮಕ್ಕೆ ವಿಶೇಷ ತೀರ್ಪುಗಾರರಾಗಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಬಿ.ಎನ್.ಕೃಷ್ಣಪ್ಪ ರವರು ನಿವೃತ್ತ ಶಿಕ್ಷಕರಾದ ಶರಣಯ್ಯ ಹೀರೇಮಠ್ ರವರು ಮತ್ತು ಪಶು ವೈದ್ಯಾಧಿಕಾರಿ ಸುಪ್ರೀತ್ ರವರು ಆಗಮಿಸಿದ್ದರು, ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಈ ವೇದಿಕೆಯಲ್ಲಿ ಮಾತನಾಡಿದ ಅನಿಲ್ ಗೌಡ್ರು ಸಂಕ್ರಾಂತಿ ಹಬ್ಬ ನಮ್ಮ ಸಾಂಸ್ಕೃತಿಕ ಸಂಕೇತ. ರೈತ ದೇಶದ ಬೆನ್ನೆಲುಬು. ರೈತನಿಗೆ ಬೆನ್ನೆಲುಬು ರಾಸುಗಳು ಅವುಗಳನ್ನು ಸಂಭ್ರಮಿಸೊದು ನಮ್ಮ ಧರ್ಮ ಎಂದು ತಿಳಿಸಿದರು ಜೊತೆಗೆ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಶಾಸಕರಾದ ಶರತ್ ಬಚ್ಚೇಗೌಡರವರು ಬಿಜೆಪಿ ದೇವನಹಳ್ಳಿ ತಾಲೂಕು ಅಧ್ಯಕ್ಷರಾದ ಎನ್ ಎಲ್ ಅಂಬರೀಶ್ ಗೌಡ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಸಿ.ಮಂಜುನಾಥ್ ರವರು ಪಕ್ಷಾತೀತವಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಕೇಶವ, ಪ್ರಧಾನ ಕಾರ್ಯದರ್ಶಿ ನಂಜೇಗೌಡ, ತಾಲ್ಲೂಕು ಬಿಜೆಪಿ ಉಪಾಧ್ಯಕ್ಷರಾದ ಆನಂದ್ ಗೌಡ, ಕಸಾಪ ಮುಖಂಡರು ದೇವರಾಜ್, ಗ್ರಾಮ ಪಂಚಾಯಿತಿ ಸದಸ್ಯರಾದ ಆನಂದ್.ಎ, ಕರವೇ ಗೋಕರೆ ಸತೀಶ್, ರಘುವೀರ್, ನಾರಾಯಣಸ್ವಾಮಿ, ಆಂಜೀನಪ್ಪ, ಹರೀಶ್, ಕೆಂಪೇಗೌಡ, ತಿಮ್ಮರಾಯಪ್ಪ, ಜಗದೀಶ್, ಲಕ್ಷ್ಮಿ ನಾರಾಯಣ್, ಇತರರು ಭಾಗವಹಿಸಿದ್ದರು,
ಇತರೆ ಸುದ್ದಿಗಳು