ವರದಿಗಾರರು :
ಕೆ. ಎಸ್. ವೀರೇಶ್, ||
ಸ್ಥಳ :
ಕೂಡ್ಲಿಗಿ
ವರದಿ ದಿನಾಂಕ :
28-11-2025
ಡಾ. ವೀರೇಂದ್ರ ಹೆಗ್ಗಡೆ ಜನ್ಮದಿನದ ಅಂಗವಾಗಿ ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತೆ ಕಾರ್ಯಕ್ರಮ
ಕಾನ ಹೊಸಹಳ್ಳಿ: ಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ 78ನೇ ಜನ್ಮದಿನದ ಪ್ರಯುಕ್ತ, ಕೊಟ್ಟೂರು ಯೋಜನಾ ವ್ಯಾಪ್ತಿಯ ಕಾನ ಹೊಸಹಳ್ಳಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಿದ್ದನ ಗೌಡರು ಕಾರ್ಯಕ್ರಮದ ಬಗ್ಗೆ ಮಾತನಾಡಿ, “ಶ್ರೀ ಪೂಜ್ಯನೀಯ ವೀರೇಂದ್ರ ಹೆಗ್ಗಡೆ ರವರು ಸಮಾಜಮುಖಿ ಕಾರ್ಯಗಳಿಗೆ ಅತ್ಯಧಿಕ ಆದ್ಯತೆ ನೀಡುತ್ತಾರೆ. ಇಂತಹ ಸ್ವಚ್ಛತಾ ಕಾರ್ಯಕ್ರಮಗಳಿಂದ ಧಾರ್ಮಿಕ ಕ್ಷೇತ್ರಗಳ ಭವ್ಯತೆ ಹೆಚ್ಚುತ್ತದೆ,” ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ವಿವಿಧ ಸಂಘ-ಸಂಸ್ಥೆಗಳ ಮೂಲಕ ಕಳೆದ 58 ವರ್ಷಗಳಿಂದ ಪೂಜ್ಯನೀಯ ವೀರೇಂದ್ರ ಹೆಗ್ಗಡೆ ಅವರು ನಡೆಸಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಸಾಂಸ್ಕೃತಿಕ ಸೇವೆಗಳ ನೆನಪಿನೊಂದಿಗೆ, ಇನ್ನಷ್ಟು ಸೇವೆ ಮಾಡುವ ಶಕ್ತಿ ದೇವರಲ್ಲಿ ಪ್ರಾರ್ಥಿಸಿ, ಅವರ 78ನೇ ಜನ್ಮದಿನದ ಶುಭಾಶಯ ಕೋರಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತ ವೇದಿಕೆಯ ಸದಸ್ಯ ಎ. ಚೆನ್ನಬಸಪ್ಪ, ಗ್ರಾಮ ಪಂಚಾಯತಿ ಸದಸ್ಯರು ಗೌರಮ್ಮ ಮತ್ತು ನೇತ್ರಾವತಿ, ವಲಯದ ಮೇಲ್ವಿಚಾರಕ ನಾಗರಾಜ, ಒಕ್ಕೂಟದ ಪದಾಧಿಕಾರಿಗಳು ಮಮತ, ವಲಯದ ಸೇವಾ ಪ್ರತಿನಿಧಿಗಳು, CSC ಸೇವಾದಾರರು ಸುವಿಧಾ ಮತ್ತು ಸಹಾಯಕರು, ಪಾಲುದಾರ ಸಂಘದ ಸದಸ್ಯರು ಉಪಸ್ಥಿತರಿದ್ದರು.
