ಲಚ್ಯಾಣದಲ್ಲಿ ಸಿದ್ಧಲಿಂಗ ಮಹಾರಾಜರ 98ನೇ ಪುಣ್ಯಾರಾಧನೆ: ವಿಶೇಷ ರೈಲು ನಿಲುಗಡೆ ಸೌಲಭ್ಯ
ಲಚ್ಯಾಣದಲ್ಲಿ ಸಿದ್ಧಲಿಂಗ ಮಹಾರಾಜರ 98ನೇ ಪುಣ್ಯಾರಾಧನೆ: ವಿಶೇಷ ರೈಲು ನಿಲುಗಡೆ ಸೌಲಭ್ಯ ಇಂಡಿ ತಾಲ್ಲೂಕಿನ ಲಚ್ಯಾಣದಲ್ಲಿ ಸೆಪ್ಟೆಂಬರ್ 13 ಮತ್ತು 14ರಂದು ನಡೆಯಲಿರುವ ಸಿದ್ಧಲಿಂಗ ಮಹಾರಾಜರ 98ನೇ ಪುಣ್ಯಾರಾಧನೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಭಕ್ತರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ವಿಶೇಷ ಸೌಲಭ್ಯ ಕಲ್ಪಿಸಿದೆ. ಅಧಿಕಾರಿಗಳ ಪ್ರಕಾರ, ಸೋಲಾಪುರ–ಬಾಗಲಕೋಟೆ ಮಾರ್ಗದ ಬಸವ ಎಕ್ಸ್‌ಪ್ರೆಸ್ ವಿಜಯಪುರ–ಪಂಢರಾಪುರ ಮಾರ್ಗದ ಗೋಳಗುಂಬಜ್ ರೈಲು ಇವುಗಳು ಲಚ್ಯಾಣ ರೈಲು ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ಬೆಳಿಗ್ಗೆ ಮತ್ತು ಸಂಜೆ ನಿಲ್ಲಲಿದೆ. ಮಠಕ್ಕೆ ಆಗಮಿಸುವ ದೂರದ ಯಾತ್ರಾರ್ಥಿಗಳ ಸೌಲಭ್ಯಕ್ಕಾಗಿ ಬಂಥನಾಳದ ವೃಷಭಲಿಂಗೇಶ್ವರ ಶ್ರೀಗಳ ವಿನಂತಿಯ ಮೇರೆಗೆ, ಅಮೇರಿಕಾ ಪ್ರವಾಸದಲ್ಲಿದ್ದ ನಿಕಟ ಪೂರ್ವ ದೆಹಲಿಯ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ ಅವರು ದೂರವಾಣಿಯಲ್ಲಿ ಸಚಿವ ವಿ. ಸೋಮಣ್ಣ ಅವರನ್ನು ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿ ಸಚಿವರ ಸೂಚನೆಯ ಮೇರೆಗೆ ರೈಲ್ವೆ ಇಲಾಖೆ ಈ ನಿರ್ಧಾರ ಕೈಗೊಂಡಿದೆ ಎಂದು ಸಚಿವರ ಸಹಾಯಕ ಮಂಜುನಾಥ ವಂದಾಲ ತಿಳಿಸಿದ್ದಾರೆ
ಇತರೆ ಸುದ್ದಿಗಳು