ಸಂಸ್ಕೃತಿಯ ಪರಂಪರೆಯೊಂದಿಗೆ ತುಮಕೂರಿನಲ್ಲಿ ಅದ್ದೂರಿ ನವರಾತ್ರಿ ಪೂಜೆ
ತುಮಕೂರು ಜಿಲ್ಲಾಡಳಿತದ ವತಿಯಿಂದ ನಗರದ ನವರಾತ್ರಿ ವೈಭವದ ಅಂಗವಾಗಿ ನಾಲ್ಕನೇ ದಿನದ ತಾಯಿ ಪೂಜೆ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು.
ಈ ಸಂದರ್ಭದಲ್ಲಿ ರಾಜ್ಯದ ಗೃಹಸಚಿವ ಹಾಗೂ ತುಮಕೂರಿನ ಹೆಮ್ಮೆಯ ಪುತ್ರ ಡಾ. ಜಿ. ಪರಮೇಶ್ವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಮಹಾನಗರ ಪಾಲಿಕೆ ಕಮಿಷನರ್ ಆಶ್ವಿಜ್ ಬಿ.ವಿ., ಜೊತೆಗೆ ಪೊಲೀಸ್ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಸಂಸ್ಕೃತಿಯ ಪರಂಪರೆಯ ಉಡುಗೆ ತೊಟ್ಟು ಪೂಜೆಯಲ್ಲಿ ಪಾಲ್ಗೊಂಡರು.
ಸಾಂಸ್ಕೃತಿಕ ಪರಂಪರೆ ಮತ್ತು ಧಾರ್ಮಿಕ ಭಾವನೆಗಳನ್ನು ಹೊತ್ತು ತಂದ ಈ ಕಾರ್ಯಕ್ರಮಕ್ಕೆ ಭಕ್ತರು ಹಾಗೂ ಸಾರ್ವಜನಿಕರಿಂದ ಭಾರೀ ಪ್ರತಿಕ್ರಿಯೆ ದೊರೆಯಿತು.
ಇತರೆ ಸುದ್ದಿಗಳು