ದಾವಣಗೆರೆಯಲ್ಲಿ ದಸರಾ ಮಹೋತ್ಸವ – ನಗರದೇವತೆ ದುರ್ಗಾಂಬಿಕಾ ದೇವಾಲಯದಲ್ಲಿ ಸಾಮೂಹಿಕ ವಿವಾಹ
ದಾವಣಗೆರೆ: ನಗರದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ದಸರಾ ಮಹೋತ್ಸವ ಪ್ರಯುಕ್ತ ಸಾಮೂಹಿಕ ವಿವಾಹ ಕಾರ್ಯಕ್ರಮವು ಭಕ್ತಿಪೂರ್ಣವಾಗಿ ನೆರವೇರಿತು. ಪ್ರತಿವರ್ಷದಂತೆ ಈ ಬಾರಿಯೂ ಸಹ ನವರಾತ್ರಿ ಹಬ್ಬದ ಅಂಗವಾಗಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ 21 ಜೋಡಿಗಳು ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾತನಾಡಿ – “ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ಆಶೀರ್ವಾದದಿಂದ ನವಜೋಡಿಯ ದಾಂಪತ್ಯ ಜೀವನವು ಸುಖ-ಶಾಂತಿ ಮತ್ತು ಸಮೃದ್ಧಿಯಿಂದ ಕೂಡಿರಲಿ” ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಆವರಗೊಳ್ಳ ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳು, ಸಂಸದ ಡಾ. ಪ್ರಭಾ ಮಲ್ಲಿಕಾರ್ಜುನ, ಮಾಜಿ ಉಪ ಮಹಾಪೌರ ಗೋಣೆಪ್ಪ, ಉಮೇಶ್‌ರಾವ್ ಸಾಳಂಕಿ, ಹನುಮಂತರಾವ್ ಸಾವಂತ್, ಬಡಗಿ ರಾಮಕೃಷ್ಣ, ಸೊಪ್ಪಿನ ಗುರುರಾಜ್, ಹನುಮಂತ ಜಾಧವ್, ಶಂಕರರಾವ್ ಸಿಂಧೆ, ಮುದೇಗೌಡ್ರು ವಿಶ್ವನಾಥ, ಜಯಪ್ರಕಾಶ್ ಜೆ.ಕೆ., ಗೌಡ್ರು ಸುರೇಶ್, ಕರಿಗಾರ ಬಸಪ್ಪ, ಬಾಬುರಾವ್ ಸಾಳಂಕಿ, ಕವಿರಾಜ್, ಶ್ರೀನಿವಾಸ್ ಪವಾರ್, ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಪತ್ನಿ ಪಾರ್ವತಮ್ಮ ಅವರ ಜ್ಞಾಪಕಾರ್ಥವಾಗಿ ಅನ್ನಸಂತರ್ಪಣೆ ಕೂಡ ಹಮ್ಮಿಕೊಳ್ಳಲಾಗಿತ್ತು.
ಇತರೆ ಸುದ್ದಿಗಳು