ಬೆಂಗಳೂರಿಗೆ ಎಂಟ್ರಿ ಆಗಿದೆ ಗ್ಲಾಂಡರ್ ವೈರಸ್
ಬೆಂಗಳೂರಿನ ಟರ್ಪ್ ಕ್ಲಬ್ನಲ್ಲಿ ಐದು ಕುದುರೆಗಳಿಗೆ ಮಾರಣಾಂತಿಕ ಗ್ಲಾಂಡರ್ ಸೋಂಕು ಕಾಣಿಸಿಕೊಂಡಿದೆ.
ಈ ಸೋಂಕು ಸಾಮಾನ್ಯವಾಗಿ ಕುದುರೆ, ಕತ್ತೆ ಮತ್ತು ಹೇಸರಗತ್ತೆಗಳಲ್ಲಿ ಕಂಡುಬರುತ್ತವೆ. ಆತಂಕದ ವಿಷಯವೇನೆಂದರೆ ಈ ಸೋಂಕು ಸಾಂಕ್ರಾಮಿಕವಾಗಿದ್ದು ಮನುಷ್ಯರಿಗೂ ಬಾಧಿಸುವ ಅಪಾಯವಿದೆ.
ಬೆಂಗಳೂರಿನ ಟರ್ಪ್ ಕ್ಲಬ್ನಲ್ಲಿ ಒಟ್ಟು ಐನೂರು ಕುದುರೆಗಳಿವೆ. ಅದರಲ್ಲಿ ಐದು ಕುದುರೆಗಳು ಗ್ಲಾಂಡರ್ ಸೋಂಕಿನಿಂದ ಬಳಲುತ್ತಿವೆ. ಸೋಂಕು ಪೀಡಿತ ಕುದುರೆಗಳನ್ನು ಪ್ರತೇಕವಾಗಿ ಇಡಲಾಗಿದೆ.
ಟರ್ಪ್ ಕ್ಲಬ್ ಸಿಬ್ಬಂದಿಗಳಿಗೂ ಆರೋಗ್ಯ ತಪಾಸಣೆ ನಡೆಸಲಾಗುತ್ತಿದ್ದು ಸದ್ಯ ರೇಸ್ ಕುದುರೆಗಳಿಗೆ ವಿರಾಮ ನೀಡಲಾಗಿದೆ. ವೇಗವಾಗಿ ಹರಡುವ ಈ ರೋಗ ಬಾರ್ಖೋಲ್ಪರ್ ಮಲ್ಲಿ ಎಂಬ ಬ್ಯಾಕ್ಟೀರಿಯಾದಿಂದ ಈ ಸೋಂಕು ಬಾಧಿಸುತ್ತದೆ. ಈ ಸೋಂಕಿನಿಂದ ಜ್ವರ ,ಗಂಟಲು ಬೇನೆ, ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಇತರೆ ಸುದ್ದಿಗಳು