ತಿಳಗೂಳ ಗ್ರಾಮದಲ್ಲಿ ಭಗವಾನ ವಿಶ್ವಕರ್ಮ ಜಯಂತಿ ಆಚರಣೆ
ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ತಿಳಗೂಳ ಗ್ರಾಮದಲ್ಲಿ ಭಗವಾನ ವಿಶ್ವಕರ್ಮ ಜಯಂತಿ ಆಚರಿಸಲಾಯಿತು. ವಿಶ್ವಕರ್ಮ ಸಮುದಾಯದ ಹಿಂದೂ ಪುರಾಣಗಳಲ್ಲಿ ದೈವಿಕ ವಾಸ್ತುಶಿಲ್ಪಿ ಮತ್ತು ಇಂಜಿನಿಯರ್ ಭಗವಾನ ವಿಶ್ವಕರ್ಮನ ವಂಶಸ್ಥರು ಎಂದು ನಂಬುವ ಕುಶಲಕರ್ಮಿಗಳು ಮತ್ತು ತಂತ್ರಜ್ಞರ ಸಮುದಾಯವಾಗಿದೆ ಎಂದು ದೇವಿಯ ಅರ್ಚಕರು ಮುತ್ತು ಬಡಿಗೇರ ಮಾತನಾಡಿದರು.
ಇದೆ ಸಂರ್ಭದಲ್ಲಿ ಊರಿನ ಹಿರಿಯರಾದ ಎಮ್. ಪಿ.ಕಾಸರ ಗುರುಗಳು ಈ ಸಮುದಾಯದ ಐದು ಮುಖ್ಯ ಉಪಗುಂಪುಗಳನ್ನು ಒಳಗೊಂಡಿದೆ ಕಮ್ಮಾರನು (ಮನು ). ಬಡಗಿಗಳು (ಮಾಯಾ ). ಅಕ್ಕಸಾಲಿಗರು ( ವಿಶ್ವಜ್ಞ)ತಾಮ್ರಗಾರರು (ತ್ವಷ್ಟ )ಮತ್ತು ಶಿಲ್ಪಿಗಳು (ಶಿಲ್ಪಿ )ಅವರು ತಮ್ಮ ಕೌಶಲ್ಯ ಮತ್ತು ಸೃಜಶೀಲತೆಗೆ ಹೆಸರುವಾಸಿಯಾಗಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ತಿಳಗುಳ ಗ್ರಾಮಸ್ಥರು ಇದ್ದರು
ಇತರೆ ಸುದ್ದಿಗಳು