ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
06-12-2025
ಪ್ರಸಕ್ತ ವಿದ್ಯಮಾನದ ಮಹತ್ತರ ಬೆಳವಣಿ,ಭಾರತ ಮತ್ತು ರಷ್ಯಾ ನಡುವೆ ಮಹತ್ತರ ಒಪ್ಪಂದ
ರಷ್ಯಾ ಅಧ್ಯಕ್ಷ ಪುಟಿನ್ ಎರಡು ದಿನಗಳ ಕಾಲ ಭಾರತ Slowly ಕೈಗೊಂಡಿದ್ದು 23 ನೆ ಶೃಂಗಸಭೆಯಲ್ಲಿ ಭಾರತ ಮತ್ತು ರಷ್ಯಾ ವ್ಯಾಪಾರ ರಕ್ಷಣಾ ವಲಯಗಳ ಒಪ್ಪಂದಗಳಿಗೆ ಸಹಿ ಹಾಕುವುದರ ಮೂಲಕ ರಷ್ಯಾ ಭಾರತದ ಸಂಬಂಧವನ್ನು ಮತ್ತಷ್ಟು ಸದೃಡಗೊಳಿಸಿದರು. ಸತತ ಏಳು ದಶಕಗಳ ಕಾಲ ರಷ್ಯಾ ಭಾರತದ ಪರಮಾಪ್ತ ಸ್ನೆಹಿತನಾಗಿ ಭಾರತದ ಬೆಂಬಲವಾಗಿ ನಿಂತಿದೆ.
1998 ರಲ್ಲಿ ಭಾರತದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಧಿಕಾರದಿದ್ದ ಸಂದರ್ಭದಲ್ಲಿ ಪೋಖ್ರಾನ್ ಪರಮಾಣು ಪರೀಕ್ಷೆ ನಡೆಸಿತ್ತು ಆಗ ಇಡೀ ವಿಶ್ವ ಭಾರತದ ಈ ಬೆಳವಣಿಗೆಯನ್ನ ಕಂಡು ಮೂಕವಿಸ್ಮಿತಗೊಂಡಿತು.
ಪಾಶ್ಚಿಮಾತ್ಯ ರಾಷ್ಟ್ರಗಳು ಅಮೆರಿಕ ಸಹ ಭಾರತದ ಈ ಪರಮಾಣು ಪರೀಕ್ಷೆಯ ಕುರಿತು ವಿರೋಧ ವ್ಯಕ್ತಪಡಿಸಿತ್ತು ಅಲ್ಲದೇ ಭಾರತಕ್ಕೆ ಆರ್ಥಿಕ ದಿಗ್ಭಂದನ ಹೇರಿತ್ತು. ಆಗ ಭಾರತದ ಪರವಾಗಿ ನಿಂತಿದ್ದೇ ರಷ್ಯಾ . ರಷ್ಯಾ ಆ ಸಂದರ್ಭದಲ್ಕಿ ಭಾರತದ ಪರವಾಗಿ ಧ್ವನಿ ಎತ್ತಿ ಭಾರತ ಹೊಸ ಮೈಲಿಗಲ್ಲು ಸಾಧಿಸಿದೆ. ಪರಮಾಷು ಪರೀಕ್ಷೆ ನಡೆಸಿದ್ದು ಭಾರತ ರಕ್ಷಣೆ ಕುರಿತಾಗಿದ್ದು ಅದು ಅವರ ಆಂತರಿಕ ವಿಚಾರ ಎಂದಿತ್ತು. ಇದರಿಂದ ಎಲ್ಲ ರಾಷ್ಟ್ರಗಳು ಸಹಮತ ನೀಡಿದ್ದವು. ಇದೀಗ ಆಸಂಬಂಧ ಮತ್ತಷ್ಟು ಗಟ್ಟಿಯಾಗಿ ನೆಲೆಗೊಂಡಿದೆ.
ಪುಟಿನ್ ಭಾರತ ಭೇಟಿಯ ಬಳಿಕ ಬದಲಾಗಿದ್ದೇನು?
ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಭಾರತ ಪ್ರಧಾನಿ ಮೋದಿ ವಿಶ್ವನಾಯಕರ ನಡುವಿನ ದ್ವಿಪಕ್ಷೀಯ ಮಾತುಕತೆ ಇಡೀ ವಿಶ್ವದ ದಿಗ್ಗಜರನ್ನೇ ಬೆರಗಾಗಿಸಿದೆ. ಅದರಲ್ಲೂ ವಿಶಷೇವಾಗಿ ಅಮೆರಿಕಾಗೆ ನೇರ ಟಾಂಗ್ ಕೊಟ್ಟ ಪುಟಿನ್ ಭಾರತಕ್ಕೆ ನಿರಂತರವಾಗಿ ರಷ್ಯಾ ತೈಲ ರಪ್ತು ಮಾಡುತ್ತದೆ . ಬಾಹ್ಯಾಕಾಶ ಕ್ಷೇತ್ರ ಹಾ್ಐ ರಕ್ಷಣಾ ವಲಯದಲ್ಲೂ ಉಭಯ ದೇಶಗಳು ಒಟ್ಟಿಗೆ ಕೆಲಸ ಮಾಡುತ್ತದಲ್ಲದೇ, 2030 ಸುಮಾರಿಗೆ ಸುಮಾರು 100 ಬಿಲಿಯನ್ ವ್ಯಾಪಾರ ವಹಿವಾಟು ನಡೆಸಲಿದೆ ಎಂದರು. ಭಯೋತ್ಪಾನೆ ವಿರುದ್ಧ ಸಮರದಲ್ಲಿ ರಷ್ಯ ಭಾರತದ ಪರ ಸದಾ ನಿಲ್ಲಲಿದೆ ಎಂದು ಸ್ಪಷ್ಟಪಡಿಸಿದರು.
