*ದೆಹಲಿ ಹೈಕೋರ್ಟ್ ಜಡ್ಜ್ ವರ್ಮಾ ವಜಾಕ್ಕೆ ಶಿಫಾರಸ್ಸು*
*ನವದೆಹಲಿ:* ಪ್ರಜಾಕಿರಣ.ಕಾಮ್ : ದೆಹಲಿ ಹೈಕೋರ್ಟ್ ಜಡ್ಗ ಯಶವಂತ್ ವರ್ಮಾ ಅವರ ಮನೆಯಲ್ಲಿ ಸುಟ್ಟ ಸ್ಥಿತಿಯಲ್ಲಿ ಸಿಕ್ಕಂತೆ ನೋಟುಗಳ ಪ್ರಕರಣದ ತನಿಖೆಗಾಗಿ ಸುಪ್ರೀಂಕೋರ್ಟ್ ರಚಿಸಿದ್ದ ಮೂವರು ಹೈಕೋರ್ಟ್ ನ್ಯಾಯಮೂರ್ತಿಗಳ ಸಮಿತಿ ವರದಿ ಈಗ ಬಹಿರಂಗಗೊಂಡಿದೆ.
ರಾಶಿ ರಾಶಿ ಕಂತು ಕಂತು ಗಟ್ಟಲೆ ಹಣ ಇತ್ತು, ನೋಟುಗಳು ಅರೆಬರೆ ಸುಟ್ಟಿದ್ದ ವಿಡಿಯೋ ದೃಶ್ಯಗಳು ಕೂಡ ಇವೆ ಎಂದು ಅನೇಕರು ತನಿಖಾ ಸಮಿತಿಯ ಮುಂದೆ ಸಾಕ್ಷ್ಯ ಹೇಳಿದ್ದಾರೆ. ಅಲ್ಲದೆ, ಇಷ್ಟೆಲ್ಲಾ ಅವಾಂತರ ಆದರೂ ವರ್ಮಾ ಅವರು ಪೊಲೀಸರಿಗೆ ದೂರು ನೀಡಿಲ್ಲ. ನ್ಯಾಯಾಂಗದ ಉನ್ನತಾಧಿಕಾರಿಗಳಿಗೂ ದೂರು ನೀಡಿಲ್ಲ. ಹೀಗಾಗಿ ಅವರ ನಡೆ ಅನುಮಾನದಿಂದ ಕೂಡಿದ್ದು, ಆ ಜಡ್ಜ್ ಹುದ್ದೆಯಿಂದ ಯಶವಂತ್ ವರ್ಮಾರನ್ನು ತೆಗೆದು ಹಾಕಬೇಕು ಎಂದು ಸುಪ್ರೀಂಕೋರ್ಟ್‌ಗೆ ಸಮಿತಿ ಶಿಫಾರಸ್ಸು ಮಾಡಿದೆ.
ಸಮಿತಿಯು ಒಟ್ಟು 55 ಸಾಕ್ಷಿಗಳನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿದ್ದು ಹಣದ ರಾಶಿ ಇದ್ದ ಕೊಠಡಿಗೆ ಬೆಂಕಿ ಬಿದ್ದಾಗ ಮನೆಯಲ್ಲಿದ್ದ ಜಸ್ಟೀಸ್ ಯಶವಂತ್ ವರ್ಮಾ ಮಗಳ ಹೇಳಿಕೆ ಸಾಕ್ಷಿಯಾಗಿ ದಾಖಲಿಸಿಕೊಳ್ಳಲಾಗಿದೆ. ಜೊತೆಗೆ ಮನೆಯ ಸ್ಟೋರ್ ರೂಮ್ ನಲ್ಲಿ 500 ರೂಪಾಯಿ ಮುಖಬೆಲೆಯ ನೋಟುಗಳ ರಾಶಿಯೇ ಇತ್ತು ಎಂದು ಅಗ್ನಿಶಾಮಕ, ಪೊಲೀಸ್ ಇಲಾಖೆಯ ಸಿಬ್ಬಂದಿಯೂ ತನಿಖಾ ಸಮಿತಿಯ ಮುಂದೆ ಹೇಳಿಕೆ ನೀಡಿದ್ದಾರೆ. ವಿಡಿಯೋ ಮತ್ತು ಪೋಟೋದಲ್ಲಿ ಕಂಡು ಬಂದಿದ್ದನ್ನು ಸಾಕ್ಷಿಗಳ ಹೇಳಿಕೆಯು ಪುಷ್ಟಿಕರಿಸಿದೆ ಎಂದು ತನಿಖಾ ಸಮಿತಿ ವಿವರಿಸಿದೆ.
ಇತರೆ ಸುದ್ದಿಗಳು