ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
06-12-2025
ಭಾರತದ ಶಾಂತಿ ತತ್ವ ಪ್ರತಿಪಾದಿಸಿದ ಪ್ರಧಾನಿ ಮೋದಿ.
ಭಾರತ ಶಾಂತಿಪರವಾಗಿದ್ದು ಶಾಂತಿ ತತ್ವವನ್ನ ಪ್ರತಿಪಾದಿಸುತ್ತದೆ ಎಂದು ನಿನ್ನೆ ಹೈದರಾಬಾದ್ ಹೌಸ್ನಲ್ಲಿ ನಡೆದ ಪುಟಿನ್ ಜೊತೆ ನಡೆದ ಸಂವಾದದಲ್ಲಿ ಪ್ರಧಾನಿ ಮೋದಿ ಹೇಳಿದರು.
ಭಾರತ ತಟಸ್ಥ ದೇಶವಲ್ಲ. ವಿಶ್ವ ಏಕತೆ ಐಕ್ಯತೆ ಮತ್ತು ಶಾಂತಿಯ ಪರವಾಗಿ ನಿಲ್ಲುತ್ತದೆ ಎಂದರು.
ರಷ್ಯಾ ಉಕ್ರೇನ್ ಸಂಘರ್ಷವನ್ನು ರಾಜತಾಂತ್ರಿಕತೆಯ ಮೂಲಕ ಪರಿಹರಿಸಿಕೊಳ್ಳಬೇಕಾಗಿದೆ. ರಾಷ್ಟ್ರಗಳ ಕಲ್ಯಾಣ ಶಾಂತಿಯಲ್ಲಿ ಅಡಗಿದ್ದು ರಷ್ಯಾ ಉಕ್ರೇನ್ ಯುದ್ಧ ನಿಲ್ಲಿಸುವಂತೆ ಪ್ರಧಾನಿ ಮೋದಿ ರಷ್ಯ ಅಧ್ಯಕ್ಷರನ್ನ ಒತ್ತಾಯಿಸಿದರು.
ಭಾರತ ರಷ್ಯ ದ್ವಿಪಕ್ಷೀಯ ಒಪ್ಪಂದಗಳೇನು?
ರಷ್ಯಾದಿಂದ ಭಾರತಕ್ಕೆ ತಡೆರಹಿತ ಇಂಧನ ಪೂರೈಕೆ . ದೂರಸಂಪರ್ಕ ಕ್ಷೇತ್ರದಲ್ಲಿ ರಷ್ಯಾದ ಅನೊ ಟಿವಿ ಜೊತೆ ಭಾರತದ ಪ್ರಸಾರ ಭಾರತಿ ಒಪ್ಪಂದ ಜಾಗತಿಕ ವನ್ಯಜೀವಿ ಸಂರಕ್ಷಣಾ ಒಪ್ಪಂದ ಕಡಲ ರಕ್ಷಣೆ ಭದ್ರತೆ ಮತ್ತು ಬಂದರುಗಳ ಅಭಿವೃದ್ಧಿಗೆ ಸಹಕಾರ . ರಷ್ಯಾ ಪ್ರವಾಸಿಗಳಿಗೆ ಮೊವತ್ತು ದಿನಗಳ ಕಾಲ ಇ-ವಿಸಾ. ರಸಗೊಬ್ಬರ ಪೂರೈಕೆ ಸರಪಳಿಗೆ ಬಲ.
