“ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ”
ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ಎಸ್. ಎಮ್. ವ್ಹಿ. ವ್ಹಿ. ಸಂಘದ ಶ್ರೀ ಬಸವೇಶ್ವರ ಕಲಾ ಪದವಿ ಮಹಾವಿದ್ಯಾಲಯದಲ್ಲಿ ಬಿ. ಎ. ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕೋರುವ ಶಾರೀರಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರಿಯುತ. ಜೆ ಎಸ್. ಕಾದಳ್ಳಿ ಯವರು ಸ್ಪರ್ಧಾತ್ಮಕ ಪರೀಕ್ಷೆಗೆ ಹೇಗೆ ತಯಾರಿ ಮಾಡಿಕೊಳ್ಳಬೇಕು. ಮತ್ತು ಅದರ ಜೊತೆಗೆ ಕೌಶಲ್ಯ ಶಿಕ್ಷಣವನ್ನು ಕೂಡಾ ಕಲಿತುಕೊಳ್ಳಬೇಕು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಬಿ. ಜಿ. ಚನಗೊಂಡ ಮತ್ತು ಅತಿಥಿಗಳಾಗಿ ಜೆ. ಬಿ. ಗುಮ ಶೆಟ್ಟಿ, ಬಿ.ಎಸ್. ದೇವರಮನಿ ಹಾಗೂ ಉಪನ್ಯಾಸಕರಾದ ಎಂ.ಎ. ಪಾಟಿಲ್. ಎ.ಜೆ.ಮಳ್ಳಿ , ಎಂ. ಎಚ್. ಬೇನಾಳ. ಆರ್ ಎಂ. ಗುಮಾಶೆಟ್ಟಿ . ಬಿ. ಎಂ ಕುಂಬಾರ ಆರ್ .ವಿ. ಕುಲಕರ್ಣಿ. ಮಾಂತೇಶ್ ಅಗ್ನಿ ಮತ್ತಿತರರು ಉಪಸ್ಥಿತರಿದ್ದರು. ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ಹಾಗು ಸಂಗೀತದಿಂದ ಕಾರ್ಯಮಕ್ಕೆ ಮತ್ತುಷ್ಟು ಮೆರುಗು ತಂದಿತು.
ಇತರೆ ಸುದ್ದಿಗಳು