ವರದಿಗಾರರು :
ದರ್ಶನ್ ಎಂ.ಎನ್ ||
ಸ್ಥಳ :
ದಾವಣಗೆರೆ
ವರದಿ ದಿನಾಂಕ :
25-11-2025
ಜಿಲ್ಲಾ ಮಟ್ಟದ ಪಿಯುಸಿ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಶ್ರೀ ಸಿದ್ಧಗಂಗಾ ಪಿಯುಸಿ ಕಾಲೇಜು ಚಾಂಪಿಯನ್
ದಾವಣಗೆರೆ: ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ನಡುವೆ ನಡೆದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜು ಒಟ್ಟಾರೆ ಚಾಂಪಿಯನ್ ಪಟ್ಟ ಕೈಸೇರಿಸಿಕೊಂಡಿದೆ. ಈ ಸ್ಪರ್ಧೆಗಳಿಗೆ ಕಾಲೇಜಿನ ನಿರ್ದೇಶಕ ಡಾ. ಜಯಂತ್ ಡಿ.ಎಸ್. ಅವರು ಚಾಲನೆ ನೀಡಿದರು. ಉಪನಿರ್ದೇಶಕ ಡಿ. ಪಳನಿವೇಲು ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯರ ಸಂಘದ ಅಧ್ಯಕ್ಷ ಎನ್. ಓಹಿಲೇಶ್ವರ, ಕಾರ್ಯದರ್ಶಿ ಜೆ. ಶಿವಪ್ಪ, ಪ್ರಾಚಾರ್ಯ ಆರ್. ಸುರೇಶ ಹಾಗೂ ವಾಣಿಶ್ರೀ ಉಪಸ್ಥಿತರಿದ್ದರು.
ಪ್ರಥಮ ಹಾಗೂ ದ್ವಿತೀಯ ಪಿಯುಸಿ ಹಂತದ 11 ವಿಭಾಗಗಳ ಸ್ಪರ್ಧೆಗಳಲ್ಲಿ ದಾವಣಗೆರೆ ಜಿಲ್ಲೆಯ 41 ಪದವಿ ಪೂರ್ವ ಕಾಲೇಜುಗಳಿಂದ ಸುಮಾರು 580 ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು. ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಪಳನಿವೇಲು, ವಿದ್ಯಾರ್ಥಿಗಳಿಗೆ ಸರ್ಕಾರ ಒದಗಿಸಿರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಭವಿಷ್ಯ ನಿರ್ಮಾಣಕ್ಕಾಗಿ ಶ್ರಮಿಸಬೇಕೆಂದು ಸಲಹೆ ನೀಡಿದರು. ವಿಜೇತರು ಹಾಗೂ ವಿಭಾಗ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ತಯಾರಿ ಕುರಿತು ಮಾರ್ಗದರ್ಶನ ನೀಡಿ, ಬಹುಮಾನಗಳನ್ನು ವಿತರಿಸಲಾಯಿತು. ಡಿ.ಎಸ್. ಹೇಮಂತ್, ಗಾಯತ್ರಿ ಚಿಮ್ಮಡ್, ವಾಣಿಶ್ರೀ, ಸುರೇಶ್ ಆರ್, ಶಿವಪ್ಪ ಜೆ, ಭೀಮಕುಮಾರ ಜೆ.ವಿ. ಅವರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಶುಭ ಹಾರೈಸಿದರು.
ವಿಜೇತ ವಿದ್ಯಾರ್ಥಿಗಳ ಸಾಧನೆ – ಶ್ರೀ ಸಿದ್ಧಗಂಗಾ ಪಿಯುಸಿ ಕಾಲೇಜು ದ್ವಿತೀಯ ಪಿಯುಸಿ ಹಂತ ಭಾವಗೀತೆ (ಪ್ರಥಮ): ವರುಣ ಎಂ ಜಾನಪದ ನೃತ್ಯ (ಪ್ರಥಮ): ಉಷಾರಾಣಿ ಎಂ ಏಕಪಾತ್ರಾಭಿನಯ (ದ್ವಿತೀಯ): ಕವನ ಕೆ.ಎನ್ ಆಂಗ್ಲ ಪ್ರಬಂಧ (ದ್ವಿತೀಯ): ಸಿಂಧು ಡಿ.ಜಿ ಆಂಗ್ಲ ಚರ್ಚೆ (ತೃತೀಯ): ಅನುಷಾ ಕೆ.ಎಸ್ ರಸಪ್ರಶ್ನೆ (ತೃತೀಯ): ಪ್ರಣವ್ ದಿಗ್ಗಾವಿ, ಅನಂತಸೇನ ಬಿ.ಎಂ ಪ್ರಥಮ ಪಿಯುಸಿ ಹಂತ ಜಾನಪದ ನೃತ್ಯ (ಪ್ರಥಮ): ಎಂ. ನಾಡಿಗರ್ ಏಕಪಾತ್ರಾಭಿನಯ (ಪ್ರಥಮ): ಶಶಾಂಕ ಈರಪ್ಪ ತೆಪ್ಪದ್ ಕನ್ನಡ ಚರ್ಚೆ (ಪ್ರಥಮ): ವೇದ ಪ್ರಕಾಶ್ ಅಜ್ಜಂನವರ್ ಆಂಗ್ಲ ಚರ್ಚೆ (ಪ್ರಥಮ): ಹುಸ್ನ ಎನ್ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಡಾ. ಧನಂಜಯಪ್ಪ ಬಿ.ಎನ್, ಸದಾಶಿವ ಹೊಳ್ಳ, ಸಂತೋಷ್ ಎಸ್ ಹಾಗೂ ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ ಸಹಕಾರ ನೀಡಿದರು.
