ವರದಿಗಾರರು :
ಬಸವರಾಜ ಪೂಜಾರಿ ||
ಸ್ಥಳ :
ಬೀದರ
ವರದಿ ದಿನಾಂಕ :
21-11-2025
ಬೀದರದಲ್ಲಿ ಹೊರಗುತ್ತಿಗೆ ನೇಮಕಾತಿ ಅಕ್ರಮ: ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆಯಿಂದ ಜಿಲ್ಲಾಧಿಕಾರಿಗೆ ದೂರು
ಜಿಲ್ಲೆಯಲ್ಲಿ ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲಿ ಗಂಭೀರ ಅಕ್ರಮ ನಡೆದಿದೆ ಎಂದು ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆಯು ಜಿಲ್ಲಾಧಿಕಾರಿಗೆ ದೂರು ನೀಡಿದೆ. ದೂರು ಪ್ರಕಾರ, ಸಮಗ್ರ ಶಿಕ್ಷಣ ಬೀದರ ಕಚೇರಿಯಲ್ಲಿ 22 ಅಕ್ರಮ ನೇಮಕಾತಿಗಳು ನಡೆದಿದ್ದು, ಅದರಲ್ಲಿಯೂ 2 ಮಂದಿಗೆ ಅಗತ್ಯ ವಿದ್ಯಾರ್ಹತೆ ಇಲ್ಲದಿದ್ದರೂ ಉದ್ಯೋಗ ನೀಡಲಾಗಿದೆ. ಸಂಸ್ಥೆಯ ಪದಾಧಿಕಾರಿಗಳು, ಟೆಂಡರ್ ಮೂಲಕ ನೇಮಕಾತಿ ಮಾಡಬೇಕು ಎಂಬ ನಿಯಮವನ್ನು ಉಲ್ಲಂಘಿಸಿ, ‘ಜಿಲ್ಲಾಧಿಕಾರಿಗಳ ಹೆಸರಿನಲ್ಲಿ’ ನೇರ ನೇಮಕಾತಿ ಜರುಗಿದ್ದ ಎಂದು ಆರೋಪಿಸಿದ್ದಾರೆ. ಅವರು 10 ದಿನಗಳ ಗಡುವು ನೀಡಿದ್ದು, ಕ್ರಮಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಧರಣಿ ಮತ್ತು ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ದೂರು ಸಲ್ಲಿಸುವ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಸ್ವಾಮಿದಾಸ್ ಕೆಂಪೆನೋರ್, ಜಿಲ್ಲಾಧ್ಯಕ್ಷ ಸಂಗಮೇಶ ಏಣಕೂರ್, ಜಿಲ್ಲಾ ಸಂಯೋಜಕ ಜೇಮ್ಸ್ ಇಸ್ಲಾಂಪೂರ, ಶಿವರಾಜ ನೇಲವಾಳಕರ್, ಡ್ಯಾನಿಯಲ್, ವಿಲ್ಸನ್ ಕುಡ್ತೆನೋರ್, ಯೋಹಾನ ಅರಮನೆ, ಅಂಬಾದಾಸ ಬೇಲೂರೆ, ಶ್ರೀನಾಥ ದರ್ಗಾ, ಮೋಹನ ಮಾಳಗೆ, ಸ್ವಾಮಿದಾಸ್ ಚಿಲ್ಲರ್ಗಿ, ಎಂ.ಡಿ. ಸೀರಾಜ್ ಪಟೇಲ್ ಸೇರಿದಂತೆ ಅನೇಕರು ಹಾಜರಿದ್ದರು
