ತಾಳಿಕೋಟಿ ತಾಲೂಕಿನ ಕಲಕೇರಿ ಯಿಂದ ಬೆಕಿನಾಳ ಹೋಗುವ ರಸ್ತೆಕೆಸರುಗದ್ದೆ ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು
ತಾಳಿಕೋಟಿ ತಾಲೂಕಿನ ಕಲಕೇರಿ ಯಿಂದ ಬೆಕಿನಾಳ ಹೋಗುವ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ,ವಾಹನಗಳು ಒದ್ದಾಡಲು ತುಂಬಾ ತೊಂದರೆ ಉಂಟಾಗುತ್ತಿದೆ,ವಾಹನಗಳು ಓಡಾಡಲು ಆಗದಷ್ಟು ರಸ್ತೆ ಹದಗೆಟ್ಟಿದೆ . ಇನ್ನೇ ಮಳೆ ಬಂದರಂತೂ ರಸ್ತೆ ಇದೆ ಅನ್ನುವುದನ್ನೇ ಮರೆತುಬಿಡಬೇಕು ಯಾಕೆಂದರೆ ರಸ್ತೆ ಸಂಪೂರ್ಣವಾಗಿ ಕೆಸರು ಗಡ್ಡೆಯಂತಾಗಿರುತ್ತದೆ ,೧೫ ದಿನಗಳ ಹಿಂದೆ ಅಧಿಕಾರಿಗಳಿಗೆ ಹಾಗು ನಮ್ಮ ಭಾಗದ ಶಾಸಕರಿಗೆ ವಿಷಯಗಳನ್ನು ಸಾಕಷ್ಟು ತಿಳಿಸಿದ್ದೇವೆ, ಆದರೆ ಇಲ್ಲಿಯವರಿಗೂ ಅವರು ಯಾವುದೇ ಕ್ರಮ ತೆಗೆದುಕೊಂಡುವುದಿಲ್ಲ , ರವಿವಾರ ಅಂದರೆ ಇಂದು ಬೆಳಿಗ್ಗೆ ಮತ್ತೆ ಬಸ್ಸು ಸಂಚರಿಸುವಾಗ ರಸ್ತೆ ಮದ್ಯದಲ್ಲಿ ಸಿಕ್ಕಿಹಾಕಿಕೊಂಡಿದ್ದು ,ಬೆಕಿನಾಳ ಗ್ರಾಮಸ್ಥರು ಎಲ್ಲರೂ ಸೇರಿಬಸ್ಸನ್ನು ಜೆ ಸಿ ಬಿ ಮೂಲಕ ತೆಗೆಯಲು ಹರಸಾಹಸ ಮಾಡಬೇಕಾಯಿತು .ಯಾವುದೇ ಜೀವ ಹಾನಿ ಆಗಿಲ್ಲಎನ್ನುವುದೇ ಸಮಾಧಾನ, ಈಗಲಾದರೂ ಈ ರಸ್ತೆಗೆ ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಭಾಗದ ಶಾಸಕರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಗ್ರಾಮಸ್ಥರು ತಿಳಿಸಿದರು, ಪಿಡಬ್ಲ್ಯೂಡಿ ಅಧಿಕಾರಿಗಳು ಹಾಗೂ ಈ ಭಾಗದ ಶಾಸಕರು ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಇನ್ನು ಎರಡು ದಿನದಲ್ಲಿ ರಸ್ತೆ ದುರಸ್ತಿ ಮಾಡಲಿಲ್ಲಂದರೆ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಗ್ರಾಮಸ್ಥರು ಹಾಗು ಕರ್ನಾಟಕ ರೈತ ಸಂಘದ ಅಧ್ಯಕ್ಷರು ಶ್ರೀಶೈಲ್ ವಾಲಿಕಾರ್ ಲಕ್ಕಪ್ಪ ಬಡಿಗೇರ್ ಮಾಜಿ ಟಿಪಿ. ರಮೇಶ್ ಗೌಡ ವಡ್ಡಡಗಿ. ನಿಂಗಣ್ಣ ಚಟ್ಟರಿಕಿ. ದೇವರೆಡ್ಡಿ ಬಿರಾದಾರ್. ದೊಡ್ಡಪ್ಪ ಪೂಜಾರಿ. ಅಲ್ಲಾಭಕ್ಷ್ ಎಳ್ಗಾರ್ . ವಿನಯ್ ಕುಮಾರ್ ಚಲವಾದಿ. ಶ್ರೀಶೈಲ ಸಜ್ಜನ್. ಎಲ್ಲರೂ ತಿಳಿಸಿದರು
ಇತರೆ ಸುದ್ದಿಗಳು