ವಿಜಯಪುರ ಸಿದ್ದಸಿರಿ ಸೌಹಾರ್ದ ಸಹಕಾರಿ ಬ್ಯಾಂಕ್ ಇಂದ 25 ಲಕ್ಷ ರೂ ದೇಣಿಗೆ :
ವಿಜಯಪುರ : ನಗರದ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಸಂಚಾರ ಕಮಾಂಡ್ ಕೇಂದ್ರ ಸ್ಥಾಪಿಸಲು ನಗರ ಶಾಸಕರಾದ ಬಸನಗಳ ಪಾಟೀಲ್ ಯತ್ನಾಳ ಅವರ ಅಧ್ಯಕ್ಷತೆಯ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘ ನಿಯಮಿತದಿಂದ ರೂ 25 ಲಕ್ಷ ಇದೇಣಿಗೆ ಚೆಕ್ಕನ್ನು ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಅವರಿಗೆ ಹಸ್ತಾಂತರಿಸಲಾಯಿತು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಹಾಗೂ ಸಿದ್ದಸಿರಿ ಸೌಹಾರ್ದ ಸಹಕಾರಿ ನಿ. ನಿರ್ದೇಶಕರಾದ ರಾಮನಗೌಡ ಪಾಟೀಲ್ ಯತ್ನಾಳ ರವರು ಬಿಜಾಪುರ ನಗರವು ಬೃಹತ್ ಆಗಿ ಬೆಳೆದಿದೆ ಮತ್ತು ವರ್ಷದಿಂದ ವರ್ಷಕ್ಕೆ ಎಲ್ಲ ದಿಕ್ಕಿನಲ್ಲಿಯೂ ಬೆಳೆಯುತ್ತಿದೆ ಅದಕ್ಕೆ ಅನುಗುಣವಾಗಿ ವಾಹನಗಳ ಸಂಖ್ಯೆಯು ಹೆಚ್ಚಾಗಿರುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತದೆ.
ಸುರಕ್ಷತೆಯಿಂದ ಈ ಸಂಚಾರ ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸಲು ಅಪಘಾತಗಳನ್ನು ತಡೆಯಲು ಸುಧಾರಿತ ಸಂಚಾರ ಕಣ್ಗಾವಲು ವ್ಯವಸ್ಥೆಗಳು ಪ್ರಮುಖ ವ್ಯಕ್ತಿಗಳ ಮೇಲ್ವಿಚಾರಣೆ ಸ್ವಯಂ ಚಾಲಿತ ನಂಬರ್ ಪ್ಲೇಟ್ ಗುರ್ತಿಸುವಿಕೆ ಮತ್ತು ಸಂಯೋಜನೆ ಸಂಹನ ಸೌಲಭ್ಯ ಒಳಗೊಂಡ ಸಂಚಾರ ಕಮಾಂಡ್ ಕೇಂದ್ರವನ್ನು ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಸ್ಥಾಪಿಸಲು ಆರ್ಥಿಕ ನೆರವು ಕೋರಿ ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದ್ದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ರೂ 25 ಲಕ್ಷ ದೇಣಿಗೆ ನೀಡಲಾಗಿದೆ ಎಂದರು. ಸಿದ್ಧ ಸಿರಿ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಗಳಾದ ಪ್ರಭುಗೌಡ ದೇಸಾಯಿ, ಜಗದೀಶ್ ಕ್ಷತ್ರಿಯ ವ್ಯವಸ್ಥಾಪಕ ನಿರ್ದೇಶಕರಾದ ಜ್ಯೋತಿಬಾ ಖಂಡಾಗಳೆ ಮಹಾಪ್ರಬಂದಕರು ಉಮೇಶ್ ಹಾರಿವಾಳ ಇತರರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು