ವೈಕುಂಠ ಏಕಾದಶಿ, ಪಾಪ ವಿಮೋಚನೆ
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಈ ಮಾರ್ಗಶಿರ ಮಾಸದ ಮಹತ್ವನ್ನು ಹೇಳುತ್ತಾನೆ.
ಪದ್ಮಪುರಾಣದಲ್ಲಿ ಉಲ್ಲೇಖಿಸಿದಂತೆ ಈ ದಿನ ಮುರಾ ಎಂಬ ರಾಕ್ಷಸನನ್ನು ಸಂಹರಿಸಿದ ದಿನವಾಗಿದೆ. ಈ ಸಂಹಾರದಿಂದ ಏಕಾದಶಿ ಎಂಬ ದೇವಿ ಜನ್ಮತಾಳುತ್ತಾಳೆ. ಏಕಾದಶಿ ದೇವಿಯೂ ಶ್ರೀ ವಿಷ್ಣುವಿನಲ್ಲಿ ಬೇಡಿಕೊಳ್ಳುತ್ತಾಳೆ.
ಯಾರು ತನ್ನನ್ನು ಭಕ್ತಿಪೂರ್ವಕವಾಗಿ ಪೂಜಿಸುತ್ತಾರೋ ಅವರ ಸಕಲ ಪಾಪ ಕರ್ಮಗಳು ನಾಶವಾಗಿ ಅವರು ಮೋಕ್ಷವನ್ನು ಹೊಂದಲಿ ಎಂದು ವರ ಬೇಡುತ್ತಾಳೆ ವಿಷ್ಣುವು ಏಕಾದಶಿ ದೇವಿಗೆ ಅನುಗ್ರಹಿಸುತ್ತಾನೆ . ಇದರಿಂದ ವೈಕುಂಠ ಏಕಾದಶಿ ವೃತದ ಆಚರಣೆಯಿಂದ ಭಕ್ತರು ಪಾಪವಿಮೋಚನೆಗೊಂಡು ಮೋಕ್ಷ ಪಡೆಯುತ್ತಾರೆ ಎಂಬ ಪ್ರತೀತಿ ಇದೆ.
ವೈಕುಂಠ ಏಕಾದಶಿಯ ಆಚರಣೆ ಹೇಗೆ ಮಾಡುತ್ತಾರೆ.
ವೈಕುಂಠ ಏಕಾದಶಿಯ ಆಚರಣೆಯಲ್ಲಿ ಉಪವಾಸಕ್ಜೆ ಹೆಚ್ಚಿನ ಪ್ರಾಧ್ಯಾನತೆ ನೀಡಲಾಗಿದೆ. ಈ ದಿನದ ಉಪವಾಸದಿಂದ ಜನ್ನಜನ್ಮಾಂತರ ಪಾಪ ಕರ್ಮಗಳು ನಾಶವಾಗಿ ದೇಹ ಮತ್ತು ಮನಸ್ಸು ಶುದ್ಧತೆ ಹೊಂದುತ್ತವೆ. ಇದರಿಂದ ಆತ್ಮಾವಲೋಕನ ಮತ್ತು ಆಧ್ಯಾತ್ಮೀಕ ಬೆಳವಣಿಗೆ ವೃದ್ಧಿಸಿ ಭಕ್ತರು ಜನನ- ಮರಣಗಳ ಬಂಧನಗಳಿಂದ ಮುಕ್ತಿ ಪಡೆಯುತ್ತಾರೆ ಎಂಬ ನಂಬಿಕೆಯಿದೆ.
ಈ ದಿನ ಪವಿತ್ರ ದಿನವಾಗಿದ್ದು ವಿಷ್ಣುವಿನ ನಾಮಸ್ಮರಣೆ ,ಆರಾಧನೆ ಮತ್ತು ದಾನ ಧರ್ಮಗಳಿಂದ ಪುಣ್ಯವನ್ನ ಪಡೆಯಬಹುದಾಗಿದೆ.
ಇತರೆ ಸುದ್ದಿಗಳು