ವರದಿಗಾರರು :
ದರ್ಶನ್ ಎಂ. ಎನ್ ||
ಸ್ಥಳ :
ದಾವಣಗೆರೆ
ವರದಿ ದಿನಾಂಕ :
01-12-2025
ಓಪನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ದಾವಣಗೆರೆಯ ಶ್ರೀರಾಮಕೃಷ್ಣ ಇಂಟರ್ ನ್ಯಾಷನಲ್ ಸ್ಕೂಲ್ ಮೊದಲ ಸ್ಥಾನ
ದಾವಣಗೆರೆ: ಬೆಂಗಳೂರಿನಲ್ಲಿ ನಡೆದ ಓಪನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ದಾವಣಗೆರೆಯ ಶ್ರೀರಾಮಕೃಷ್ಣ ಇಂಟರ್ ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಗಳು ಅದ್ಭುತ ಪ್ರದರ್ಶನ ನೀಡಿದ್ದು, ಹಲವು ವಿಭಾಗಗಳಲ್ಲಿ ಪ್ರಥಮ ಸ್ಥಾನಗಳನ್ನು ಗಳಿಸಿದ್ದಾರೆ. ಕರಾಟೆ ಸ್ಪರ್ಧೆಯಲ್ಲಿ ಡಿ.ಕೆ. ಪ್ರಥಮ, ಎನ್. ಖುಷಿ, ಎನ್. ಕಾರುಣ್ಯ, ಟಿ. ಸಾನ್ವಿ, ಎಸ್. ತನುಶ್ರೀ, ಹೆಚ್. ಶ್ರಾವಣಿ, ಪಿ.ಯು. ಯಶಸ್, ಎಸ್.ಹೆಚ್. ಸೋಹನ್, ವಿ. ರಾವ್ ಭರತ್, ಪಿ. ಹೃದಯ್, ಎಂ. ಅರ್ಜುನ್, ಎಲ್. ಹೃತ್ವಿಕ್, ಆರ್. ರೋಹನ್, ಆರ್. ಶರಣ್ಯ, ಎನ್. ಭುವನ್, ಎನ್.ಎಂ. ವಂಶಿಕಾ, ಬಿ.ಜಿ. ಯಶಸ್ವಿನಿ, ಕೆ. ಕುಶಾಲ್, ಕೆ.ಎಂ. ಅಂಕುಶ್ ಹಾಗೂ ಸ್ನೇಹಾ ಬಾಗಲಕೋಟೆ ಮೊದಲ ಸ್ಥಾನಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳಿಗೆ ಸನ್‌ಸೈ ಸಿ. ಹನುಮಂತ, ಸಮೀರ್ ಮತ್ತು ಕಿರಣ್ ತರಬೇತಿ ನೀಡಿದರು.
