ವರದಿಗಾರರು :
ಬಸವರಾಜ ಪೂಜಾರಿ, ||
ಸ್ಥಳ :
ಬೀದರ್
ವರದಿ ದಿನಾಂಕ :
05-12-2025
ಬೀದರದಲ್ಲಿ ಡಿಸೆಂಬರ್ 7 ರಂದು ಮಹಿಳೆಯರಿಗಾಗಿ ಕುರ್‍ಆನ್ ಪ್ರವಚನ
ಬೀದರ್: ಜಮಾ ಅತೆ ಇಸ್ಲಾಮಿ ಹಿಂದ್ ಸ್ಥಳೀಯ ಮಹಿಳಾ ವಿಭಾಗದ ವತಿಯಿಂದ ಡಿಸೆಂಬರ್ 7ರಂದು ಬೆಳಿಗ್ಗೆ 11 ಗಂಟೆಗೆ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ‘ಶಾಂತಿ ಮತ್ತು ಸಮೃದ್ಧಿ ಕುರ್‌ಆನಿನ ಬೆಳಕಿನಲ್ಲಿ’ ಎಂಬ ವಿಚಾರಧಾರೆಯಡಿ ಮಹಿಳೆಯರಿಗಾಗಿ ವಿಶೇಷ ಕುರ್‍ಆನ್ ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅನುಪಮ ಮಹಿಳಾ ಮಾಸಿಕದ ಉಪ ಸಂಪಾದಕಿ ಸಬೀಹಾ ಫಾತಿಮಾ ಅವರು ಮುಖ್ಯ ಪ್ರವಚನ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಬಸವ ಮಂಟಪದ ಮಾತೆ ಸತ್ಯದೇವಿ, ಜಮಾ ಅತೆ ಇಸ್ಲಾಮಿ ಹಿಂದ್ ರಾಜ್ಯ ಮಹಿಳಾ ವಿಭಾಗದ ಕಾರ್ಯದರ್ಶಿ ತಷ್ಕೀಲಾ ಖಾನಂ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರತಿಮಾ ಬಜೆನ್‍ಜಿ ದಿವ್ಯ ಉಪಸ್ಥಿತಿ ವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅವರಲ್ಲಿ ಪ್ರಮುಖರು: ಕಾಂಗ್ರೆಸ್ ರಾಜ್ಯ ಮಹಿಳಾ ವಿಭಾಗದ ಉಪಾಧ್ಯಕ್ಷೆ ರಾಜಶ್ರೀ ಶ್ರೀಕಾಂತ ಸ್ವಾಮಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಮಂದೀಪ್ ಕೌರ್ ಮಹಾನಗರ ಪಾಲಿಕೆ ಸದಸ್ಯೆ ಚೇತನಾ ಮೋಹನ್ ಕಾಳೇಕರ್ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಗೀತಾ ಪಂಡಿತ ಚಿದ್ರಿ ಶಾಹೀನ್ ಶಿಕ್ಷಣ ಸಂಸ್ಥೆಗಳ ನಿರ್ದೇಶಕಿ ಮೇಹರ್ ಸುಲ್ತಾನಾ ಹಿರಿಯ ಸ್ತ್ರೀರೋಗ ತಜ್ಞರು ಡಾ. ಶೇಖ ಸುಮಯ್ಯಾ ಕುಲ್‍ಸುಮ್, ಡಾ. ವಿಜಯಶ್ರೀ ಎಸ್. ಬಶೆಟ್ಟಿ, ಡಾ. ಸುಮಯ್ಯ ಫಾತಿಮಾ ಸಾಹಿತಿ ಡಾ. ಸುನಿತಾ ಕೂಡ್ಲಿಕರ್ ಉಪನ್ಯಾಸಕಿಯರಾದ ವಿದ್ಯಾವತಿ ಬಲ್ಲೂರ, ವಿದ್ಯಾವತಿ ಹಿರೇಮಠ ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯೆ ಡಾ. ವಿನಿತಾ ಪಾಟೀಲ ಡಾ. ಅಮಲ್ ಷರೀಫ್, ಐಟಾ ರಾಜ್ಯ ಮಹಿಳಾ ವಿಭಾಗದ ಸಂಚಾಲಕಿ ಬಿಲ್ಕೀಸ್ ಫಾತಿಮಾ ವಿಸ್ಡಂ ಶಿಕ್ಷಣ ಸಂಸ್ಥೆಗಳ ನಿರ್ದೇಶಕಿ ಬುಶ್ರಾ ಜಮಾಲ್ ನಿವೃತ್ತ ಉಪ ಪ್ರಾಚಾರ್ಯೆ ಬುತುಲ್ ಸಯಿದ್ ಫಾತಿಮಾ ಆರ್ಥಿಕ ಚಿಂತಕಿ ಸೌಜನ್ಯ ಶಶಿಕಾಂತ ಎಸ್. ಶೆಂಬೆಳ್ಳಿ ಜಿ.ಐ.ಒ. ಜಿಲ್ಲಾ ಸಂಚಾಲಕಿ ಸೈಕಾ ಸಬಾ ಸ್ಥಳೀಯ ಘಟಕದ ಅಧ್ಯಕ್ಷೆ ಡಾ. ಬುಶ್ರಾ ಐಮನ್ ಕಾರ್ಯಕ್ರಮದ ಅಂಗವಾಗಿ ಕುರ್‍ಆನ್ ಸಂದೇಶ ಪ್ರದರ್ಶನ (Quran Message Exhibition) ಕೂಡ ಜರಗಲಿದೆ.
ಮಹಿಳೆಯರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಜಮಾ ಅತೆ ಇಸ್ಲಾಮಿ ಹಿಂದ್ ಜಿಲ್ಲಾ ಮಹಿಳಾ ವಿಭಾಗದ ಸಂಚಾಲಕಿ ತೌಹೀದ್ ಶಿಂಧೆ ಮತ್ತು ಬೀದರ್ ಘಟಕದ ಸಂಚಾಲಕಿ ಆಸ್ಮಾ ಸುಲ್ತಾನಾ ಮನವಿ ಮಾಡಿದ್ದಾರೆ.
