ವರದಿಗಾರರು :
ಗೌತಮ್ ಸಿ ಎಸ್ ||
ಸ್ಥಳ :
Piriyapattana
ವರದಿ ದಿನಾಂಕ :
05-12-2025
ಗೃಹಲಕ್ಷ್ಮಿಯರಿಗೆ ರೂ. 30 ಸಾವಿರದಿಂದ 3 ಲಕ್ಷದವರೆಗೆ ಪರ್ಸನಲ್ ಲೋನ್ ಭಾಗ್ಯ
ಗೃಹಲಕ್ಷ್ಮಿಯರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ಕೊಟ್ಟಿದೆ. ಇನ್ಮುಂದೆ ಮಹಿಳೆಯರು 30,000ದಿಂದ 3 ಲಕ್ಷದವರೆಗೆ ವೈಯಕ್ತಿಕ ಲೋನ್ ಪಡೆಯಬಹುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಇದನ್ನು ಆರು ಲಕ್ಷಕ್ಕೆ ಹೆಚ್ಚಿಸಲು ಲಕ್ಷ್ಮಿ ಹೆಬ್ಬಾಳ್ಕರ್ ಬ್ಯಾಂಕ್‌ಗಳಿಗೆ ಮನವಿ ಮಾಡಿದ್ದಾರೆ. ಮೊದಲು ರಿಜಿಸ್ಟ್ರೇಷನ್ ಮಾಡಿಕೊಂಡವರಿಗೆ ಲೋನ್ ಸಿಗಲಿದೆ. ರಾಷ್ಟ್ರೀಕೃತ ಬ್ಯಾಂಕುಗಳ ಬಡ್ಡಿ ದರದ ಅನ್ವಯ ಕಡಿಮೆ ದಾಖಲೆಯಲ್ಲಿ ಲೋನ್ ಸಿಗಲಿದೆ. ಕೇವಲ ಆರು ತಿಂಗಳಲ್ಲಿ ವೈಯಕ್ತಿಕ ಲೋನ್ ಸಿಗಲಿದೆ. ತಿಂಗಳಿಗೆ 200 ರೂ.ನಂತೆ ಆರು ತಿಂಗಳು ದುಡ್ಡು ಕಟ್ಟಿದರೆ ಸದಸ್ಯತ್ವ ಸಿಗಲಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
