ಭಾರತ ಮತ್ತು ಮೆಕ್ಸಿಕೋ ಮುಕ್ತ ಮತ್ತು ಆದ್ಯತೆಯ ವ್ಯಾಪಾರ !!!...
ಭಾರತದ ಆಮದು ಸರಕಿನ ಮೇಲೇ ಅಮೆರಿಕ ವಿಧಿಸಿರುವ ಶೇ 25 ಹೆಚ್ವುವರಿ ಪ್ರತಿಸುಂಕದ ಬೆನ್ನಲ್ಲೇ ಮೆಕ್ಸಿಕೋ ಸಹ ಭಾರತದ ರಪ್ತು ಸರಕಿನ ಮೇಲೆ ಪ್ರತಿಸುಂಕ ವಿಧಿಸಿದೆ.
ಈ ಮುಗ್ಗಟ್ಟಿನಿಂದ ಪಾರಾಗಲೋಸುಗ ಭಾರತ ಹೊಸ ಉಪಕ್ರಮ ಅನುಸರಿಸಲು ಮುಂದಾಗಿದೆ.
ಮೆಕ್ಸಿಕೊ ವಿಧಿಸಿರುವ ಶೇ50 ಪ್ರತಿಸುಂಕದ ಪರಿಣಾಮ ಭಾರದಿಂದ ಭಾರಿ ಪ್ರಮಾಣದಲ್ಲಿ ರಪ್ತಾಗುತ್ತಿದ್ದ ಸರಕುಗಳು ಇಳಿಮುಖಗೊಂಡಿವೆ. ಇದರಿಂದ ಭಾರತ ರಪ್ತು ವ್ಯವಹಾರದಿಂದ ಆಗುವ ನಷ್ಟದಿಂದ ಪಾರಾಗಲು ಆದ್ಯತೆಯ ವ್ಯಾಪಾರ ಒಪ್ಪಂದಗಳ ಕುರಿತು ಪ್ರಸ್ತಾವನೆ ಸಲ್ಲಿಸಿದೆ...
ಏನಿದು ಮುಕ್ತ ಮತ್ತು ಆದ್ಯತೆಯ ವ್ಯಾಪಾರ ಒಪ್ಪಂದ?
ಉಭಯ ದೇಶಗಳು ಮುಕ್ತ ವ್ಯಾಪಾರ ಒಪ್ಪಂದಿಂದ ಇರುವಾಗ ಪಾಲುದಾರರು ಹೆಚ್ವಿನ ಸಂಖ್ಯೆಯ ಸರಕುಗಳ ಮೇಲೆ ಸುಂಕವನ್ನು ಕಡಿಮೆ ಮಾಡುತ್ತಾರೆ.
ಆದ್ಯತೆಯ ವ್ಯಾಪಾರ ಒಪ್ಪಂದಗಳ ವಿಷಯ ಬಂದಾಗ ಅವರ ಸೀಮಿತ ಸರಕುಗಳ ಮೇಲಿನ ಸುಂಕವನ್ನು ಕಡಿಮೆಗೊಳಿಸಲಾಗುತ್ತದೆ. ಇಲ್ಲವೇ ಶೂನ್ಯ ದರಕ್ಕೆ ಇಳಿಸಲಾಗುತ್ತದೆ.
ಮೆಕ್ಸಿಕೋ ಭಾರತ ಆಮದು ರಪ್ತಿನ ಮೇಲೆ ಪ್ರತಿಸುಂಕ ಘೋಷಣೆ ಹಿನ್ನಲೆಯಲ್ಲಿ ಭಾರತ ವ್ಯಾಪಾರ ವಹಿವಾಟಿನ ಪರಿಸ್ಥಿತಿಯನ್ನು ಅಧ್ಯಯನ ಮಾಡುತ್ತಿದೆ
ಭಾರತದಿಂದ ಆಮದಾಗುವ ಸರಕುಗಳೆಂದರೆ ಆಟೋಮೊಬೈಲ್ ಕಬ್ಬಿಣ ಮತ್ತು ಉಕ್ಕು, ವಾಹನಗಳ ಬಿಡಿಭಾಗಗಳು, ಜವಳಿ ಪಾದರಕ್ಷೆಗಳು. ಉಭಯ ದೇಶಗಳ ಗ್ರಾಹಕರು ಮತ್ತು ಉದ್ಯಮಿಗಳಿಗೆ ಅನುಕೂಲ ವಾತಾರವಣ ಕಲ್ಪಿಸಲು ಉಪಕ್ರಮ ಭಾರತ ಸಿದ್ಧವಾಗಿದೆ
ಇತರೆ ಸುದ್ದಿಗಳು