ತಾಳಿಕೋಟಿ ತಾಲ್ಲೂಕಿನ ಕಲಕೇರಿ ಬಸ್ ನಿಲ್ದಾಣದಲ್ಲಿ ಶೌಚಾಲಯ ಸಮಸ್ಯೆ
ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ಬಸ್ ನಿಲ್ದಾಣದಲ್ಲಿ ಶೌಚಾಲಯ ಇದ್ದರೂ ಒಂದು ವರ್ಷದಿನಿಂದ ಕಾರ್ಯರಹಿತವಾಗಿದೆ. ಪ್ರಯಾಣಿಕರು, ವಿಶೇಷವಾಗಿ ಮಹಿಳೆಯರು, ದೊಡ್ಡ ಮಟ್ಟದಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ.
ಕಲಕೇರಿ ಡಿ.ಎಸ್.ಎಸ್. ವಲಯ ಶಾಖೆಯ ಸಂಚಾಲಕರಾದ ಚಂದ್ರಕಾಂತ್ ಬಡಿಗೇರ್ ಅವರು ಸ್ಥಳಕ್ಕೆ ಭೇಟಿ ನೀಡಿ ಶೌಚಾಲಯದ ನೀರಿನ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಿದರು. ಅಲ್ಲಿ ಬೋರ್‌ವೆಲ್‌ನಲ್ಲಿ ನೀರು ಇರುವುದನ್ನು ದೃಢಪಡಿಸಿದ ಅವರು, “ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿದ್ದರೆ ಶೌಚಾಲಯ ಈಗಾಗಲೇ ಕಾರ್ಯನಿರ್ವಹಿಸುತ್ತಿತ್ತು” ಎಂದು ಆರೋಪಿಸಿದರು.
ಅವರು ಮುಂದುವರೆದು, “ಇನ್ನು ಮುಂದೆ ಕೂಡಾ ಅಧಿಕಾರಿಗಳು ಗಮನ ಹರಿಸದಿದ್ದರೆ, ತೀವ್ರ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಸಿದರು. ಕಲಕೇರಿ ಗ್ರಾಮ ಮಾತ್ರವಲ್ಲ, ಸುತ್ತಮುತ್ತಲಿನ 30ಕ್ಕೂ ಹೆಚ್ಚು ಹಳ್ಳಿಗಳ ಜನರು ಈ ಬಸ್ ನಿಲ್ದಾಣವನ್ನು ಬಳಸುತ್ತಿರುವುದರಿಂದ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಅವರು ಒತ್ತಾಯಿಸಿದರು.
ಇತರೆ ಸುದ್ದಿಗಳು