ವರದಿಗಾರರು :
ಧನಂಜಯ ವಿ. ||
ಸ್ಥಳ :
Bengaluru
ವರದಿ ದಿನಾಂಕ :
05-12-2025
ಅನಿಸಿಕೆ ಇದು ನನ್ನ ಮನದಾಳದ ಮಾತು
ಇದು ಮಾಹಿತಿ ಯುಗ ! ದಿನದಿಂದ ದಿನಕ್ಕೆ ತಂತ್ರಜ್ಞಾನ ಎಲ್ಲೇ ಮೀರಿ ದಾಪುಗಾಲು ಇಡುತ್ತಿದೆ.
ಸಂವಹನ, ಬಾಹ್ಯಾಕಾಶ ವ್ಯಾಪಾರ ಮತ್ತು ದೈನಂದಿನ ಚಟುವಟಿಕೆಗಳ ಪ್ರಧಾನ ಪಾತ್ರ ಈ ತಂತ್ರಜ್ಞಾನದ್ದು. ಒಂದು ಕ್ಷಣ ಈ ತಂತ್ರಜ್ಞಾನ ಗತಿಯಲ್ಲಿ ಏರುಪೇರಾದರು ಇಡಿ ವಿಶ್ವವೇ ದಂಗಾಗಿ ಬಿಡುತ್ತವೆ. ಅಷ್ಟರ ಮಟ್ಟಿಗೆ ಈ ತಂತ್ರಜ್ಞಾನ ಮಾನವನ ನಾಡಿ ಮಿಡಿತವನ್ನೇ ನಿಯಂತ್ರಿಸುವಷ್ಟು ಆಗಾಧವಾಗಿ ಬೆಳೆದು ನಿಂತಿವೆ.
ಇತ್ತೀಚೆಗೆ ಎಐ ದಿಗ್ಗಜ ಎಲಾನ್ ಮಸ್ಕ್ ಮತ್ತು ಝರೋಧಾ ಸಂಸ್ಥಾಪಕ ನಿಖಿಲ್ ಕಾಮತ್ ನಡುವಿನ ಸಂದರ್ಶನ ಇಡೀ ವಿಶ್ವ ಸಮುದಾಯವನ್ನೇ ಬೆರಗಾಗಿಸಿದ್ದು ಸುಳ್ಳಲ್ಲ. ಎಲಾನ್ ಮಸ್ಕ್ ಸಂದರ್ಶನದಲ್ಲಿ ಒಂದು ವಿಷಯವನ್ನ ಬಹಿರಂಗಪಡಿಸಿದರು.
ಅದೇನೆಂದರೆ ಮುಂದಿನ ಹತ್ತು ಹದಿನೈದು ವರ್ಷಗಳಲ್ಲಿ ಜನರು ಕೆಲಸವೇ ಮಾಡುವ ಅವಶ್ಯಕತೆ ಇಲ್ಲ ಕೆಲಸ ಒಂದು ಐಚ್ಚಿಕ ಕ್ಷೇತ್ರವಾಗಿ ಉಳಿಯಲಿದೆ. ಎಐ ರೋಬೋ ತಂತ್ರಜ್ಞಾನಣ್ಣ ಎಲ್ಲ ಕೆಲಸ ಕಾರ್ಯವನ್ನ ನಿರ್ವಹಿಸುತ್ತಾನೆ. ಆತ ಮನುಷ್ಯನಿಗಿಂತ ನೂರು ಪಟ್ಟು ಹೆಚ್ಚು ಬಲಶಾಲಿ ಬುದ್ಧಿಶಾಲಿ. ಎಐ ರೋಬೋ ಬಂದ ಮೇಲಂತೂ ಮನುಷ್ಯರು ದುಡಿಮೆ ಮಾಡುವ ಅಗತ್ಯವೇ ಇಲ್ಲ?? ಅರೇ ವಾ...!!! ಎಂತ ಅದ್ಭುತ ಕಲ್ಪನೆಯಲ್ಲವೇ.
ಹಿಂದೊಮ್ಮೆ ನಾವು ರಜನಿಕಾಂತ್ ನಟನೆಯ ರೋಬೋ ಸಿನೆಮಾ ನೋಡಿ. ಖುಷಿ ಪಟದಟಿದ್ದೇವು. ಅದು ಒಂದು ಮನರಂಜನೆ ಸಿನೆಮಾ. ಈಗ ಅದು ಅಕ್ಷರಶಃ ನಿಜ ಸ್ವರೂಪ ತಾಳುವ ಹಂತದಲ್ಲಿದೆ.
ಯಾಕೆ ಈ ತಂತ್ರಜ್ಞಾನದ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳೊದು ಅಂತ ನಿಮಗನಿಸ್ತಿದೆಯಾ? ಹೌದು ಸ್ವಾಮಿ ತಲೆ ಕೆಡಿಸಿಕೊಳ್ಳಲೇ ಬೇಕಾದ ವಿಷಯ ಇದು. ಹೇಳಿದ್ದನ್ನು ಮಾಡಿಯೇ ತೀರುವ ಮಾನವನ ಅವತಾರಲ್ಲಿರುವ ರೋಬೋ ಅಂದ್ರೆ ಅವನೆ ಎಲಾನ್ ಮಸ್ಕ್. ಒಂದು ಗಾದೆ ಮಾತಿದೆ ಕೆಲಸವಿಲ್ಲದವನ ತಲೆ ದೆವ್ವದ ಮನೆ.!! ಈ ಗಾದೆ ಮಾತು ಒಂದು ಲೋಕಾರೂಢಿಯ ಮಾತು ಆಗಿತ್ತು. ಇದೀಗ ಆ ಲೋಕಾರೂಢಿಯ ಮಾತು ಲೋಕದ ರೂಢಿಯೊಂದಿಗೆ ಬದಲಾಗುವ ಕಾಲ ಬಂದುಬಿಟ್ಟಿದೆ. ಮಸ್ಕ್ ಈಗಾಗಲೇ ಅಪ್ರತಿಮ ಸಾಧನೆಗಳನ್ನ ಮಾಡಿಬಿಟ್ಟಿದ್ದಾನೆ. ಭೂಮಿಯಿಂದ ಜಿಗಿದ ರಾಕೇಟ್ ಪುನಃ ಭೂಮಿಗೆ ತಂದು ಇಳಿಸಿದ ಭೂಪ ಈತ.
ಭೂಮಂಡಲದಿಂದ ಜನರನ್ನು ಮಂಗಳ ಗ್ರಹಕ್ಕೆ ಕಳುಹಿಸುವ ಮಾಂತ್ರಿಕನೀತ. ಇವೆಲ್ಲ ಸರಿ ಸ್ವಾಮಿ...ಆದ್ರೆ ನಮ್ಮಂತ ಜನಸಾಮಾನ್ಯರ ಪಾಡೇನು ?
ಅಲ್ವ..ನಾವು ದುಡಿದು ತಿಂಗಳ ಸಂಬಳಕ್ಕೆ ಕಾಯುತ್ತಿರುವ ಮಂದಿ. ಅದನ್ನೆಲ್ಲ ತಂತ್ರಜ್ಞಾನ ನುಂಗಿಬಿಟ್ಟರೆ ನಮ್ ಗತಿ ಏನು ಸ್ವಾಮಿ. ...
ವಿಜ್ಞಾನ ತಂತ್ರಜ್ಞಾನ ಅಭಿವೃದ್ಧಿ ಎಲ್ಲ ಓಕೆ. ಈಗಾಗಲೇ ಬಂದಿರುವ ಸಾಕಷ್ಟು ತಂತ್ರಾಂಶಗಳು ಜನರನ್ನ ನಿರುದ್ಯೋಗಿಗಳನ್ನಾಗಿ ಮಾರ್ಪಡಿಸಿವೆ. .
ನಾವು ಶಾಲೆಯಲ್ಲಿ ಓದುವಾಗ ನಮ್ಮ ಕೈಬರಹ ದುಂಡಾಗಿರಲಿ ಅಂತ ಅದೆಷ್ಟೋ ಬಾರಿ ಶಿಕ್ಷಕರಿಂದ ಬೈಗುಳ ,ಪೆಟ್ಟು ತಿಂದಿದ್ದಿದೆ. ಆದರೆ ಇಂದು ಕೈಬರಹಕ್ಕೆ ಕವಡೆಕಾಸು ಕಿಮ್ನತ್ತಿಲ್ಲ ಎಲ್ಕವೂ ಗಣಕಯಂತ್ರ ನುಂಗಿಬಿಟ್ಟಿದೆ. ಇದೇ ರೀತಿ ಮುಂದೆ ರೋಬೋ ಮಹಾಶಯನ ಎಂಟ್ರಿಯಿಂದ ಕಥೆ ಏನು?? ಮನುಷ್ಯ ಮನುಷ್ಯನ ನಡುವೆ ಭಾವನೆಗಳ ಸಂಬಂಧ ಸೇತು ಕುಸಿಯತೊಡಗಿವೆ. ಅತ್ಯಧಿಕ ಜನಸಂಖ್ಯೆ ಇರುವಂತ ನಮ್ಮ ದೇಶದಲ್ಲಿ ಕ್ಷಿಪ್ರ ಬೆಳವಣಿಗೆ ಕಾಣುತ್ತಿರುವ ತಂತ್ರಜ್ಞಾನದಿಂದ ಸಂಭವಿಸಬಹುದಾದ ಅನಾಹುತಗಳೇನು? ತಂತ್ರಜ್ಞಾನ ಬೇಡವೇ ಬೇಡ ಅಂತ ನನ್ನ ಅನಿಸಿಕೆಯಲ್ಲ. ಆದರೆ ಅದರಿಂದ ಮನುಕುಲ ನಶಿಸಿಹೋಗಬಾರದೆಂಬುದು ನನ್ನ ಕಳವಳ. ತಂತ್ರಜ್ಞಾನದ ಸುಳಿಯಲ್ಲಿ ಮಾನವನ ಅಸ್ತಿತ್ವವೇ ಅಳಿದುಹೋಗಬಾರದಲ್ಕವೇ.. ನೀವು ಏಂತೀರಿ????
