ಗ್ರೇಟರ್ ಬೆಂಗಳೂರು ಪ್ರಾಧಿಕಾರದ 369 ವಾರ್ಡ್ ಗಳ ಅಧಿಕೃತ ಪಟ್ಟಿ ಬಿಡುಗಡೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ 369 ವಾರ್ಡಗಳ ಹೆಸರಿನ ಅಧಿಕೃತ ಪಟ್ಟಿಯನ್ನು ಬಿಡಿಗಡೆಗೊಳಿಸಿದೆ.. .ಈ ಮೊದಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಿಬಿಎಂಪಿ ಹೆಸರನ್ನು ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜಿಬಿಎ ಎಂದು ಬದಲಾಯಿಸಲಾಗಿದೆ.
ನೂತನವಾಗಿ ರಚಿಸಲಾದ ಜಿಬಿಎ ಹೊಸ ಆಡಳಿತ ಸಂಸ್ಥೆಯಾಗಿ ಬೆಂಗಳೂರು ಪ್ರದೇಶಗಳಲ್ಲಿ ಪ್ರಮುಖ ಯೋಜನೆಗಳನ್ನು ಅನುಷ್ಠಾನಗೊಳಿಸುವ ಜವಬ್ದಾರಿ ಹೊಂದಿದೆ. ಜಿಬಿಎ. 5 ಪಾಲಿಕೆಗಳನ್ನ ಹೊಂದಿದ್ದು ಆಡಳಿತದಲ್ಲಿ ಪಾರರ್ಶಕತೆ ಮತ್ತು ಯೋಜನೆಗಳ ಕಾಮಗಾರಿಯ ಗುಣಮಟ್ಟ ಮತ್ತು ಕೆಲಸದ ವೇಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿವೆ.
ಒಟ್ಟು ಐದು ಪಾಲಿಕೆಗಳ 369 ವಾರ್ಡ್ಗಳಲ್ಲಿ ಕೆಲ ವಾರ್ಡಗಳ ಹೆಸರಿನಲ್ಲಿ ಬದಲಾವಣೆ ತರಲಾಗಿದೆ. ಬೆಂಗಳೂರು ಉತ್ತರ ಪಾಲಿಕೆಯ ವಾರ್ಡ ಹೆಸರು ಮೊದಲು ಆಕಾಶ್ ಎಂದು ಇಡಲಾಗಿತ್ತು. ಇದಕ್ಜೆ ವಿರೋದ ವ್ಯಕ್ತವಾದ ಹಿನ್ನಲೆಯಲ್ಲಿ ಇದೀಗ ಆಕಾಶ್ ಎಂಬ ಹೆಸರನ್ನು ಬದಲಾಯಿಸಿ ಏರೋಸಿಟಿ ಎಂದು ಮರುನಾಮಕರಣ ಮಾಡಲಾಗಿದೆ.
ಇತರೆ ಸುದ್ದಿಗಳು