ವಿಮಾನದಲ್ಲಿ ತಾಂತ್ರಿಕ ದೋಷ: ತುರ್ತು ಭೂಸ್ಪರ್ಶದಿಂದ ತಪ್ಪಿದ ಅನಾಹುತ
ಭುವನೇಶ್ವರದಿಂದ ರೂರ್ಕೆಲಾಗೆಪ್ರಯಾಣ ಬೆಳೆಸುತ್ತಿದ್ದ ಸಣ್ಣ ವಿಮಾನ ಇಂದು (ಜ.10) ಮಧ್ಯಾಹ್ನ ಧಿಡೀರ್ ಪತನಗೊಂಡಿದ್ದು ಒಟ್ಟು ಆರು ಜನರು ಗಾಯಗೊಂಡಿದ್ದಾರೆ. ಒಡಿಶಾದ ಬಿಜು ಪಟ್ನಾಯಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಈ ಬಗ್ಗೆ ದೃಢಪಡಿಸಿದೆ ಮತ್ತು ಇದಕ್ಕೆ ತಾಂತ್ರಿಕ ದೋಷವೇ ಕಾರಣ ಎನ್ನಲಾಗಿದೆ.
ವಿಮಾನದಲ್ಲಿ ತಾಂತ್ರಿಕ ದೋಷವನ್ನು ಗಮನಿಸಿದ ಪೈಲಟ್, ಕೆಳಭಾಗದಲ್ಲಿ ಹುಲ್ಲುಗಾವಲು ನೋಡಿ ಸಮಯಪ್ರಜ್ಞೆ ಮೆರೆದಿದ್ದು, ಎಲ್ಲಾ ಪ್ರಯಾಣಿಕರ ಜೀವ ಉಳಿಸಿದ್ದಾರೆ. ಆದ್ರೆ ಪೈಲೆಟ್ ಗೆ ಮಾತ್ರ ಗಂಭೀರ ಗಾಯಗಳಾಗಿದೆ.
ಅಪಾಯದ ಅರಿವಿದ್ದ ಪೈಲಟ್ ರನ್‌ವೇಗಿಂತ 10 ಕಿ.ಮೀ ಮೊದಲು ಬಯಲು ಪ್ರದೇಶದಲ್ಲಿ ಕ್ರ್ಯಾಶ್ ಲ್ಯಾಂಡಿಂಗ್‌ಗೆ ಮುಂದಾದರು ಒಡಿಶಾ ಎಂದು ಸಾರಿಗೆ ಸಚಿವ ಬಿಭೂತಿ ಭೂಷಣ್ ಜೆನಾ ಹೇಳಿದ್ದಾರೆ. ವಿಮಾನವು ಸ್ವಲ್ಪ ಕೆಳಕ್ಕೆ ಹೋಯಿತು, ವಿಮಾನಕ್ಕೆ ಸಣ್ಣಪುಟ್ಟ ಹಾನಿಯಾಗಿದೆ ಆದರೆ ರೆಕ್ಕೆಗಳು ಹಾಗೆಯೇ ಇವೆ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಆದ್ರೆ ಹಠಾತ್ ಕಾಣಿಸಿಕೊಂಡ ತಾಂತ್ರಿಕ ದೋಷಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಶೀಘ್ರದಲ್ಲೇ ಈ ಬಗ್ಗೆ ತನಿಖೆ ನಡೆಸಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.
ಇತರೆ ಸುದ್ದಿಗಳು