ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
05-12-2025
ಭಾರತ ರಷ್ಯಾ 23 ನೇ ಶೃಂಗ ಸಭೆ. ಭರತನಾಟ್ಯ ಪ್ರದರ್ಶನದ ಮೂಲಕ ರಷ್ಯಾಧೀಶರಿಗೆ ಸ್ವಾಗತ.
ಬಹು ನೀರಿಕ್ಷಿತ ರಷ್ಯ ಆಧ್ಯಕ್ಷ ವ್ಲಾದಿಮರ್ ಪುಟಿನ್ ಭಾರತ ಭೇಟಿಯ ಕುರಿತು ಸಾಕಷ್ಟು ಆಶಯಗಳು ಗರಿಗೆದರಿವೆ. ಉಭಯ ದೇಶಗಳ ಸ್ನೇಹ ಸಂಬಂಧ ಮೊದಲಿನಿಂದಲೂ ಗಟ್ಟಿಯಾಗಿ ಬೆಳೆದು ಬಂದಿವೆ.
ನಾಲ್ಕು ವರ್ಷಗಳ ನಂತರ ಪುಟಿನ್ ಭಾರತ ಪ್ರವಾಸ ಕೈಗೊಂಡಿರುವು ಜಾಗತಿಕ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿವೆ .
ನಿನ್ನೆ ಗುರುವಾರ ಸಂಜೆ ಏಳು ಗಂಟೆಯ ಸುಮಾರಿಗೆ ರಷ್ಯಾ ಅಧ್ಯಕ್ಷ ಪುಟಿನ್ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು . ಪ್ರಧಾನಿ ನರೇಂದ್ರ ಮೋದಿ ಆತ್ಮೀಯ ಗೆಳೆಯನಿಗೆ ಅಪ್ಪುಗೆ ಹಾಕಿ ಭಾರತಕ್ಕೆ ಬರಮಾಡಿಕೊಂಡರು. ತದನಂತರ ವಿಶೇಷ ಕಾರ್ಯಕ್ರಮದಲ್ಲಿ ಭರತನಾಟ್ಯ ಪ್ರದರ್ಶನ ಕಂಡು ರಷ್ಯ ಅಧ್ಯಕ್ಷರು ಪುಳಕಿತರಾದರು.
ನಿನ್ನೆ ರಾತ್ರಿ ಭಾರತ ರಕ್ಷಣಾ ಸಚಿವ ರಾಜನಾಥ ಸಿಂಗ್ ಮತ್ತು ರಷ್ಯ ರಕ್ಷಣಾ ಸಚಿವ ಆಂಡ್ರೆ ಬೆಲ್ಸೌವ್ ರಕ್ಷಣಾ ವಲಯದ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಿದರು. ಪ್ರಮುಖವಾಗಿ ಸುಧಾರಿತ ಎಸ್ 400 ಕ್ಷಿಪಣಿ, ಸುಖೋಯ್ -30 MIK ಯುದ್ಧ ವಿಮಾನ ಹಾಗೂ ನಾಗರಿಕ ಅಣುಶಕ್ತಿ ಕ್ಷೇತ್ರದಲ್ಲಿ ಭಾರತದ ಜೊತೆಗೆ ಸಹಕಾರ ಒಪ್ಪಙದಗಳ ಕುರಿತು ಚರ್ಚಿಸಿದರು. ಇಂದು ರಕ್ಷಣಾ ವಲಯದ ಕುರಿತು ನಡೆಸಿದ ಮಾತುಕತೆಗೆ ಇಂದು ಉಭಯ ನಾಯಕರುಗಳು ಅಧಿಕೃತ ಸಹಿ ಹಾಕುವ ನಿರೀಕ್ಷೆ ಇದೆ.
ಇಂದು ಪ್ರಧಾನಿ ಮೋದಿ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್ ನಡುವೆ ಮಹತ್ವದ ಮಾತುಕತೆ ನಡೆಯಲಿದೆ. ಇದು ಜಾಗತಿಕ ವಲಯದಲ್ಲಿ ತೀವ್ರ ಕುತೂಹಲಕ್ಜೆ ಕಾರಣವಾಗಿದೆ.
ಭಾರತ ಪ್ರವಾಸದಲ್ಲಿರುವ ಪುಟಿನ್ ಅಮೆರಿಕ ಕಳವಳ !!!!!
ಈ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಮತ್ತು ರಷ್ಯ ನಡುವಿನ ವ್ಯಾಪಾರ ಒಪ್ಪಂದ ನಡೆಸದಂತೆ ಎಚ್ಚರಿಕೆ ನೀಡಿದ್ದರು. ಭಾರತ ರಷ್ಯಾದಿಂದ ತೈಲ ಖರೀದಿಸುವುದನ್ನ ವಿರೋಧಿಸಿ ಭಾರತದ ಮೇಲೆ ಹೆಚ್ಚಿನ ಸುಂಕ ವಿಧಿಸಿ ತಮ್ಮ ಆಕ್ರೋಷ ವ್ಯಕ್ತಪಡಿಸಿದ್ದರು. ಟ್ರಂಪ್ ಎಚ್ಚರಿಕೆಗೆ ಮಣಿಯದ ಭಾರತ ರಷ್ಯಾದೊಂದಿಗೆ ವ್ಯಾಪಾರ ವ್ಯವಹಾರ ಮುಂದುವರೆಸಿತ್ತು. ಇದೀಗ ಪುಟಿನ್ ಭಾರತ ಭೇಟಿಯಿಂದ ಮತ್ತೆ ಅಮೆರಿಕ ಅಧ್ಯಕ್ಷ ಟ್ರಂಪ್ ನಿದ್ದೆಗೆಡುವಂತಾಗಿದೆ.
ರಷ್ಯ ಅಧ್ಯಕ್ಷ ಪುಟಿನ್ ಎರಡು ದಿನಗಳ ಕಾಲ ಭಾರತ ಪ್ರವಾಸ ಉಭಯ ದೇಶಗಳ ನಡುವೆ ಮಹತ್ತರ ಬೆಳವಣಿಗೆಗೆ ಕಾರಣವಾಗಲಿದೆ
