ವರದಿಗಾರರು :
ಗಜೇಂದ್ರ ಡಿ.ಪಿ ||
ಸ್ಥಳ :
ದೇವನಹಳ್ಳಿ
ವರದಿ ದಿನಾಂಕ :
02-12-2025
ಸಕಾಲದಲ್ಲಿ ಸಾಲ ಮರುಪಾವತಿಸಿದರೆ ಮಾತ್ರ ಸಹಕಾರಿ ಸಂಘಗಳು ಉಳಿಯಲು ಸಾಧ್ಯ: ಮಾಜಿ ಸಚಿವ ಕೆ.ಎನ್. ರಾಜಣ್ಣ
ದೇವನಹಳ್ಳಿ: ಸಹಕಾರಿ ಸಂಘಗಳು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು. ಅಗತ್ಯಕ್ಕೆ ತಕ್ಕಂತೆ ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಿದಾಗ ಮಾತ್ರ ಈ ಸಂಘಗಳು ದೀರ್ಘಕಾಲ ಉಳಿದು, ಜನಸೇವೆಯನ್ನು ಮುಂದುವರಿಸಲು ಸಾಧ್ಯ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ. ದೇವನಹಳ್ಳಿ ಹಳೆ ಬಸ್ ನಿಲ್ದಾಣದ ಬಳಿಯ ಕೆ.ವಿ.ಎನ್. ಕಾಂಪ್ಲೆಕ್ಸ್‌ನಲ್ಲಿ ವಾಲ್ಮೀಕಿ ಗ್ರಾಮೀಣ ಸಹಕಾರ ಸಂಘವನ್ನು ಉದ್ಘಾಟಿಸಿ, ಬಳಿಕ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾನು ಸಹಕಾರಿ ಸಂಘಗಳ ಮೂಲಕವೇ ಬೆಳೆಯಲಾದವನು. ಬ್ಯಾಂಕಿನ ಮೆಟ್ಟಿಲೇ ಹತ್ತದ ಗ್ರಾಮೀಣ ಪ್ರದೇಶದ ಸಾಮಾನ್ಯ ವ್ಯಕ್ತಿಗೂ ನೇರವಾಗಿ ಸಾಲ ಸೌಲಭ್ಯ ಒದಗಿಸಿ, ಅವರನ್ನು ಮೇಲಕ್ಕೆತ್ತುವ ಕೆಲಸ ಸಹಕಾರಿ ಸಂಘಗಳು ಮಾಡುತ್ತವೆ,” ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರದ ವಾಲ್ಮೀಕಿ ಪೀಠದ ಬ್ರಹ್ಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ನಾರಾಯಣಸ್ವಾಮಿ, ನಿಸರ್ಗ ಜಿ. ಚಂದ್ರಣ್ಣ, ಸಿ. ಅಶ್ವತ್ಥನಾರಾಯಣ್, ಎಲ್.ಎನ್. ಅಂಬರೀಶಗೌಡ, ಬಿ. ರಾಜಣ್ಣ, ದೇಸೂ ನಾಗರಾಜ್, ಬಿ.ಕೆ. ನಾರಾಯಣಸ್ವಾಮಿ, ಮುನಿಕೃಷ್ಣ ತಮ್ಮಯ್ಯ, ರಾಧಾಕೃಷ್ಣ, ಶ್ರೀನಿವಾಸ್, ಎ.ಬಿ. ವೀರಭದ್ರಪ್ಪ, ತಿಮ್ಮರಾಜು, ರೇಣುಕಾ, ನವೀನ್ ರಾಯಸಂದ್ರ, ಲೋಕೇಶ್, ನವೀನ್ ಕೋರಮಂಗಲ, ನಾರಾಯಣಸಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
