ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
04-12-2025
ಡಿಸೆಂಬರ್ 4 ಭಾರತೀಯ ನೌಕಾಪಡೆಯ ದಿನ
ಭಾರತ ದೇಶದ ಬೆನ್ನೆಲುಬಾಗಿರುವ ಕಡಲ ಗಡಿಯನ್ನು ರಕ್ಷಿಸುತ್ತಿರುವ ನಮ್ಮ ನೌಕಾಪಡೆಯ ವೀರ ಯೋಧರ ಸಾಹಸಗಾಥೆಯ ದಿನವನ್ನು ಇಂದು ಭಾರತೀಯ ನೌಕಾಪಡೆಯ ದಿನವನ್ನಾಗಿ ಆಚರಿಸಲಾಗುತ್ತಿದೆ. ..
1971 ರ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದಲ್ಲಿ ಭಾರತೀಯ ನೌಕಾಪಡೆ ಮಹತ್ವದ ಪಾತ್ರ ನಿರ್ವಹಿಸಿತ್ತು. ಅದೇ ಸಂದರ್ಭದಲ್ಲಿ ಪಾಕಿಸ್ತಾನವು ಭಾರತದ ನೌಕಾಪಡೆಯ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ನೌಕಾಪಡೆಯು ಅಪರೇಷನ್ ಟ್ರೈಡೆಂಟ್ ಹೆಸರಿನ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ಮೇಲೆ ಪ್ರತಿದಾಳಿ ನಡೆಸಿ ವಿಜಯ ಪತಾಕೆ ಹಾರಿಸಿತ್ತು. ಈ ಕಾರ್ಯಾಚರಣೆಯಲ್ಲಿ ಹೋರಾಡಿದ ಭಾರತೀಯ ನೌಕಾಪಡೆಯ ವೀರ ಯೋಧರ ಧೈರ್ಯ, ಸಾಹಸವನ್ಮು ಸ್ಮರಿಸುವ ನಿಟ್ಟಿನಲ್ಲಿ ಡಿಸೆಂಬರ್ 4 ರಂದು ಭಾರತೀಯ ನೌಕಾಪಡೆಯ ದಿನವನ್ನಾಗಿ ಆಚರಿಸಲಾಗುತ್ತಿದೆ.
