ಉರಿವ ಬೆಂಕಿಗೆ ಉಪ್ಪು.. ಬೆಂಕಿಯಾದರೂ ಎಲ್ಲಿ.??
ರಾಜ್ಯ ರಾಜಕೀಯದ ವಿದ್ಯಮಾನ ದಿನಕ್ಕೊಂದು ತಿರುವು - ಮುರುವು ಪಡೆದುಕೋಳ್ಳುತ್ತಲೇ ಇವೆ.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬಿಸಿ ಬಿಸಿ ಚರ್ಚೆಗಳೇ ಕೇಳಿಬರ್ತಿವೆ.
ಒಂದಾನುವೇಳೆ ಸಮ್ಮಿಶ್ರ ಸರ್ಕಾರ ಇದ್ದರೂ ಸಹ ಈ ರೀತಿಯ ವ್ಯತಿರಿಕ್ತ ಹೇಳಿಕೆಗಳು ಬರ್ತಿರಲಿಲ್ಲವೇನೋ?? ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ನಡೆಸುತ್ತಿರುವ ಪಕ್ಷದ ಆಂತರಿಕ ಕಾದಾಟ ದಿನೇ ದಿನೇ ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಲ್ಲೆ ಇದೆ.
ಜನ ನಮ್ಮ ಪಕ್ಷಕ್ಕೆ ಆಶೀರ್ವದಿಸಿದ್ದಾರೆ ನಾನೇ ಐದು ವರ್ಷ ಮುಖ್ಯ ಮಂತ್ರಿ ಎಂದು ಕರಾರುವಕ್ಕಾಗಿ ಗುಡುಗಿರುವ ಸಿಎಮ್ ಸಿದ್ಧರಾಮಯ್ಯ ನಾಯಕತ್ವ ಬದಲಾವಣೆ ಕುರಿತ ವಿಚಾರಕ್ಕೆ ಉರಿವ ಬೆಂಕಿಗೆ ಉಪ್ಪು ಸುರಿಬೇಡಿ ಅಂತ ಗದರಿದ್ದಾರೆ.
ವಿಪಕ್ಷ ನಾಯಕ ಆರ್ ಅಶೋಕ್ ಹಾಗಾದರೆ ಬೆಂಕಿ ಅಂತೂ ಇದೆ ಎಂದಾಯ್ತು ಎಂದು ಪ್ರತ್ಯುತ್ತರ ಮೂಲಕ ಸಿ.ಎಮ್ ಅವರನ್ನ ಕುಟುಕಿದರು.
ನಾಯಕತ್ವ ಬದಲಾವಣೆ ಅಂತ ಹೇಳಿ ಸುಮ್ನೆ ಯಾಕೆ ಬೆಂಕಿಗೆ ಉಪ್ಪು ಹಾಕ್ತಿರಾ ಪ್ತತಿಪಕ್ಷಗಳಿಗೆ ಇದೊಂದೆ ಕೆಲಸಾನಾ ಅಂತ ಸಿ ಎಮ್ ಕಿಡಿಕಾರಿ ನಮ್ಮಲ್ಲಿ ನೂರಾನಲವತ್ತು ಶಾಸಕರಿದ್ದಾರೆ ಎಲ್ಲರೂ ಒಗ್ಗಟ್ಟಿನಿಂದಿದ್ದಾರೆ. ನೀವೇಕೆ ಹುಳಿ ಹಿಂಡುವ ಕೆಲಸ ಮಾಡುತ್ತಿರಿ ಎಂದು ಪ್ರತಿಪಕ್ಷದ ವಿರುದ್ಧ ಹರಿಹಾಯ್ದರು.
ಒಹ್ ಹಾಗಾದ್ರೆ ನೀವೇ ಐದು ವರ್ಷ ಮುಖ್ಯಮಂತ್ರಿ ಸ್ಥಾನದಲ್ಲಿರ್ತಿರಿ ಅಂತಾಯ್ತು ಎಂದು ಆರ್ ಅಶೋಕ್ ಕಿಚಲಾಯಿಸಿದರು
ಇತರೆ ಸುದ್ದಿಗಳು