ತಾಳಿಕೋಟಿಯ ಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ನವರಾತ್ರಿ ಪುರಾಣ ಪ್ರವಚನ ಭವ್ಯ ಉದ್ಘಾಟನೆ
ತಾಳಿಕೋಟಿ ಪಟ್ಟಣದ ಎಸ್.ಕೆ. ನಗರದಲ್ಲಿರುವ ಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಹತ್ತು ದಿನಗಳ ದೇವಿ ಮಹಾತ್ಮೆ ಪುರಾಣ ಪ್ರವಚನ ಕಾರ್ಯಕ್ರಮವು ಸೋಮವಾರ ಭವ್ಯವಾಗಿ ಉದ್ಘಾಟನೆಯಾಯಿತು.
ಈ ಸಂದರ್ಭದಲ್ಲಿ ಪರದೇಸಿ ಮಠ ದೇವರಹಿಪ್ಪರಗಿ ತಟಸ್ಥಲದ ಭ್ರಮ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿ ಭಕ್ತರಿಗೆ ಆಶೀರ್ವಚನ ನೀಡಿದರು.
ಉದ್ಘಾಟನಾ ಸಮಾರಂಭವನ್ನು ಖ್ಯಾತ ನೇತ್ರ ತಜ್ಞರು, ಸಮಾಜ ಸೇವಕರು ಹಾಗೂ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಪ್ರಭುಗೌಡ ಲಿಂಗದಹಳ್ಳಿ ಚೆಬನೂರ್ ನೆರವೇರಿಸಿದರು. ಕಾರ್ಯಕ್ರಮಕ್ಕೆ ಅಧ್ಯಕ್ಷತೆಯನ್ನು ದೇವಸ್ಥಾನ ಸಮಿತಿಯ ಅಧ್ಯಕ್ಷೆ ಶರಣಿ ಕಾಶಿಬಾಯಿ ಬಂಟನೂರು ಅಮ್ಮನವರು ವಹಿಸಿದ್ದರು.
ಪುರಾಣ ಪ್ರವಚನವನ್ನು ತಮ್ಮದಡ್ಡಿಯ ಶರಣ ಶ್ರೀ ರಾಮಣ್ಣ ಕಾಳಪ್ಪ ಪತ್ತಾರ್ ಅವರು ಪ್ರಾರಂಭಿಸಿದರು. ಮುಂದಿನ ಹತ್ತು ದಿನಗಳ ಕಾಲ ದೇವಿ ಮಹಾತ್ಮೆಯ ಪುರಾಣ ಪಾಠ ಹಾಗೂ ಪ್ರವಚನ ನಡೆಯಲಿದೆ.
ಮೊದಲ ದಿನದ ಮಹಾಪ್ರಸಾದ ವ್ಯವಸ್ಥೆಯ ಸಂಪೂರ್ಣ ಜವಾಬ್ದಾರಿಯನ್ನು ಅಧ್ಯಕ್ಷೆ ಕಾಶಿಬಾಯಿ ಬಂಟನೂರು ಅಮ್ಮನವರು ವಹಿಸಿದ್ದರು.
ಈ ಸಂದರ್ಭದಲ್ಲಿ ಸಮಿತಿ ಸದಸ್ಯರು, ಸ್ವಯಂಸೇವಕರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು
ದೇವಸ್ಥಾನ ಸಮಿತಿಯವರು ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಇತರೆ ಸುದ್ದಿಗಳು