ವರದಿಗಾರರು :
ಅಜಯ್ ಚೌಧರಿ ||
ಸ್ಥಳ :
ರಾಯಚೂರು.
ವರದಿ ದಿನಾಂಕ :
28-11-2025
ಅಂಧತೆಯಿಂದ ಚಾಮ್ಪಿಯನ್‌ವರೆಗೆ: ಮೈಲಾರಿ ವಗ್ಗರ್ ಸಾಧನೆ
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಗೊಡಚಿ ಗ್ರಾಮದ ಮೈಲಾರಿ ವಗ್ಗರ್, ಹುಟ್ಟಿನಿಂದಲೇ ಅಂಧನಾಗಿದ್ದರೂ, ಯೋಗ ಮತ್ತು ಮಲ್ಲಕಂಬದಲ್ಲಿ ಅತ್ಯುತ್ತಮ ಸಾಧನೆ ತೋರಿಸುತ್ತಿದ್ದಾರೆ. ಮೈಲಾರಿ 9ನೇ ತರಗತಿಯಲ್ಲಿ ಓದುತ್ತಿದ್ದಾರೆ. ಅವರು ತಮ್ಮ ಬಾಲ್ಯದಲ್ಲಿ ತಂದೆ ವಿಠಲ್ ಮತ್ತು ತಾಯಿ ರುಕ್ಮವ್ವ ಅವರನ್ನು ಕಳೆದುಕೊಂಡಿದ್ದಾರೆ. ಮಹತ್ವಪೂರ್ಣ ತಿರುವು ಆಗಿದ್ದು, 9ನೇ ವಯಸ್ಸಿನಲ್ಲಿ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಹೊಳೆಆಲೂರಿನ ಜ್ಞಾನ ಸಿಂಧು ಅಂಧ ಮಕ್ಕಳ ವಸತಿ ಶಾಲೆಗೆ ಮೂರನೇ ತರಗತಿಯಲ್ಲಿ ಸೇರಿದಾಗ. ಶಾಲೆಯಲ್ಲಿ ಯೋಗ ಮತ್ತು ಮಲ್ಲಕಂಬವನ್ನು ಕಲಿತ ಮೈಲಾರಿ, 2023 ರ ಮೈಸೂರು ದಸರಾ ಯೋಗ ಸ್ಪರ್ಧೆಯಲ್ಲಿ 10 ವರ್ಷದ ಒಳಗಿನವರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಮುಂದಿನ ವರ್ಷ, 2025 ಸೆಪ್ಟೆಂಬರ್ 13ರಂದು ರಾಜ್ಯಮಟ್ಟದ ಪ್ಯಾರಾ ಒಲಂಪಿಕ್ ನಲ್ಲಿ ಪಾಲ್ಗೊಂಡು ರಾಜ್ಯಕ್ಕೆ ಪ್ರಥಮ ಸ್ಥಾನ ತಂದುಕೊಟ್ಟಿದ್ದಾರೆ. ನಂತರ, ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಪ್ಯಾರಾ ಯೋಗ ಒಲಂಪಿಯನ್ ನಲ್ಲಿ ಪಾಲ್ಗೊಂಡಿದ್ದಾರೆ. ಮೈಲಾರಿ ವಿವಿಧ ಉತ್ಸವಗಳಲ್ಲಿ ಸಹ ಯಶಸ್ವಿಯಾಗಿ ಭಾಗವಹಿಸಿದ್ದಾರೆ: 2024 & 2025 ಜಿಲ್ಲಾ ಮಟ್ಟದ ಊಟದ ಸ್ಪರ್ಧೆ – ಪ್ರಥಮ ಸ್ಥಾನ ಜಿಲ್ಲಾ ಮಟ್ಟದ ಬಾಲಭವನ ನಾಟ್ ಯೋಗ – ಪ್ರಥಮ ಸ್ಥಾನ, ನಂತರ ರಾಜ್ಯಮಟ್ಟಕ್ಕೆ ಆಯ್ಕೆ 2025 ನವೆಂಬರ್ 18ರಂದು ಬೆಂಗಳೂರು ಬಾಲಭವನ ಆವರಣದಲ್ಲಿ ನಡೆದ ರಾಜ್ಯಮಟ್ಟದ ಕಲಾ ಶ್ರೀ ಪ್ರಶಸ್ತಿ – ಕಣ್ಣಿದ್ದವರೊಂದಿಗೆ ಸ್ಪರ್ಧೆ ಮಾಡಿ ಪ್ರಶಸ್ತಿ ಪಡೆದಿದ್ದಾರೆ ಮೈಲಾರಿ ಯೋಗ ಮತ್ತು ಮಲ್ಲಕಂಬವನ್ನು ತಮ್ಮ “ಪಂಚಪ್ರಾಣ”ವೆಂದು ಪರಿಗಣಿಸುತ್ತಾರೆ. ಅವರು ಅಂತರಾಷ್ಟ್ರೀಯ, ರಾಷ್ಟ್ರಮಟ್ಟದ ಯೋಗ ಸಮ್ಮೇಳನಗಳು ಮತ್ತು ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದು, 2023 ರ ರಾಷ್ಟ್ರಮಟ್ಟದ ಕಲಾ ಶ್ರೀ ಸಮಾರಂಭದಲ್ಲಿ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದರು. ಅವನ ಈ ಅಮೋಘ ಸಾಧನೆಯನ್ನು ಕರ್ನಾಟಕ ಸರ್ಕಾರದ ಬಾಲಭವನದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ 28 ರಂದು ಕಲಾ ಶ್ರೀ ಪ್ರಶಸ್ತಿಯಿಂದ ಗೌರವಿಸಲಿದ್ದಾರೆ. ಜ್ಞಾನ ಸಿಂಧು ಶಾಲೆಯ ಆಡಳಿತ ಮಂಡಳಿ ಮತ್ತು ಗ್ರಾಮೀಯ ಗುರುಗಳು ಮೈಲಾರಿ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
