ಸುಸ್ಥಿರ ಸಮಾಜಕ್ಕೆ ಕರ್ನಾಟಕ ಮಠಗಳ ಕೊಡುಗೆ ಅಪಾರ:- ರಾಷ್ಟ್ರಪತಿ ಮುರ್ಮು
ಇಂದಿನ ಅಸ್ಥಿರ ಅನಿಶ್ಚಿತತೆ ಕಾಲಘಟ್ಟದಲ್ಲಿ ಯುವಸಮೂಹಕ್ಕೆ ಮಾರ್ಗದರ್ಶನ ಹಾಗೂ ನೈತಿಕ ಮೌಲ್ಯಧಾರಿತ ನಾಯಕತ್ವ ಗುಣಗಳು ಮೂಡಿಸುವಲ್ಲಿ ಮಠಗಳ ಪಾತ್ರ ಶ್ಲಾಘನೀಯ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅಭಿಮತ ವ್ಯಕ್ತಪಡಿಸಿದರು.
ಮಳವಳ್ಳಿ ತಾಲೂಕಿನ ಸುತ್ತೂರು ಮಠದ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1066 ನೇ ಜಯಂತ್ಯೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಸಧೃಢ ಭಾರತಕ್ಕಾಗಿ ಯುವ ಸಮೂಹದಲ್ಲಿ ಮಠಗಳು ಸ್ಪೂರ್ತಿ ತುಂಬಬೇಕು. ಕರ್ನಾಟಕ ಮಠಗಳ ಕೊಡುಗೆ ಸಮಾಜಕ್ಕೆ ಅಪಾರವಾಗಿದೆ ಎಂದು ರಾಷ್ಟ್ರಪತಿ ಮರ್ಮು ಮೆಚ್ಚುಗೆ ವ್ಯಕ್ತಪಡಿಸಿದರು.
ಸುತ್ತೂರು ಸಂಸ್ಥಾನದ ಮಠ ಆರೋಗ್ಯ, ಧರ್ಮ ಮತ್ತು ಶೈಕ್ಷಣಿಕ ಕ್ಷೇತ್ರಗಳ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದೆ ಎಂದ ಅವರು ಜೆ.ಎಸ್ ಎಸ್ ಮಹಾವಿದ್ಯಾಪೀಠವು ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದ್ದು ವಿದೇಶಗಳಲ್ಲಿಯೂ ಆರೋಗ್ಯ ,ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದೆ ಅದೇ ಪರಂಪರೆಯನ್ನು ಮಠದ ಪೀಠಾಧ್ಯಕ್ಷರಾದ ಶಿವರಾತ್ರಿ ದೇಶಿ ಕೇಂದ್ರ ಸ್ವಾಮಿಜಿ ಇಂದಿಗೂ ಮುಂದುವರೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮಕ್ಕೂ ಮೊದಲು ಮಳವಳ್ಳಿ ಹತ್ತಿರದಲ್ಲಿರುವ ಮಾರೇನಹಳ್ಳಿಯಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ರಾಷ್ಟ್ರಪತಿಗಳನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್ , ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹಾಗೂ ಸುತ್ತೂರು ಶ್ರೀಗಳು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.
ಇತರೆ ಸುದ್ದಿಗಳು