ನಾರಿ ಶಕ್ತಿಗೆ ಪ್ರೇರಣೆ ನೀಡಿದಂತಹ ಪುಣ್ಯ ಶ್ಲೋಕ ಅಹಲ್ಯಾಬಾಯಿ ಹೋಳ್ಕರ್
ಪುಣ್ಯ ಶ್ಲೋಕ ಅಹಲ್ಯಾಬಾಯಿ ಹೋಳ್ಕರ್ ರಾಣಿಯವರ ಜ್ಯೋತಿಯಾತ್ರೆ ಭಾರತದ ಇತಿಹಾಸದಲ್ಲಿ ಅದರಲ್ಲೂ ಕೂಡ 17ನೇ ಶತಮಾನದ ಕಾಲಘಟ್ಟದಲ್ಲಿ ಇಡೀ ಭಾರತದಾದ್ಯಂತ 12 ಜ್ಯೋತಿರ್ಲಿಂಗಗಳನ್ನು ಜೀರ್ಣೋದ್ಧಾರ ಮಾಡಿ ಮತ್ತು ಮರು ಪ್ರತಿಷ್ಠಾಪನೆ ಮಾಡಿ ಜೀವ ತುಂಬಿದ ಕುರುಬ(ಧನಗರ) ಸಮುದಾಯದ ಮಹಾರಾಣಿ ಅಹಲ್ಯಬಾಯಿ ಹೋಳ್ಕರ್
ಸುಮಾರು 40 ವರ್ಷ ಭಾರತದ ಇತಿಹಾಸದಲ್ಲಿ ಪೂಜೆಗಳಿಯುತ್ತಿರುವಂತಹ ಸುಮಾರು 3120 ದೇವಸ್ಥಾನಗಳನ್ನ ಜೀರ್ಣೋದ್ಧಾರ ಮಾಡಿ ಅವುಗಳಿಗೆ ದಾನ ದತ್ತಿಗಳನ್ನು ನೀಡಿ ಪುಣ್ಯಕ್ಷೇತ್ರಗಳಲ್ಲಿ ಊಟ ಹಾಗೂ ವಸತಿ ಕಲ್ಪಿಸಿ, ಭಾರತ ಸಂಸ್ಕೃತಿಗೆ ಕೊಡುಗೆಯನ್ನು ನೀಡಿದಂತಹ ಮಹಾತಾಯಿ, ಭಾರತದ ಇತಿಹಾಸದಲ್ಲಿ ನಾರಿ ಶಕ್ತಿಗೆ ಪ್ರೇರಣೆ ನೀಡಿದಂತಹ ಮಹಾರಾಣಿ ಪುಣ್ಯ ಶ್ಲೋಕ ಅಹಲ್ಯಾಬಾಯಿ ಹೋಳ್ಕರ್
ಸತಿ ಸಹಗಮನ ಪದ್ಧತಿಯನ್ನು ರದ್ದು ಮಾಡಿ ವಿಧವೆಯರಿಗೆ ಮದುವೆ ಮತ್ತು ಕೈಗಾರಿಕರಣವನ್ನು ಮಾಡಿ ದೇಶದ ಮಹಿಳೆಯರಿಗೆ ಆರ್ಥಿಕ ಸಬಲೀಕರಣ ಮಾಡಿದರು, ಕಾಶಿ, ಗಯಾ, ಸೋಮನಾಥ, ಶ್ರೀಶೈಲಂ, ಅಯೋಧ್ಯ, ಮಥುರಾ, ಹರಿದ್ವಾರ, ಕಂಚಿ, ಅವಂತಿ, ದ್ವಾರಕ ಬದ್ರಿನಾರಾಯಣ, ಕೇದಾರನಾಥ, ರಾಮೇಶ್ವರ ಮತ್ತು ಜಗನ್ನಾಥಪುರಿ ದೇವಸ್ಥಾನಗಳ ನಿರ್ಮಾಣ ಮಾಡಿದರು,
ಕರ್ನಾಟಕದಲ್ಲಿ ಗೋಕರ್ಣ, ಬೇಲೂರು ಬಾದಾಮಿ, ಐಹೊಳೆ, ಲಕ್ಕುಂಡಿ ಮತ್ತು ಪಟ್ಟದಕಲ್ಲುಗಳಲ್ಲಿ ದೇವಸ್ಥಾನಗಳ ನಿರ್ಮಾಣ ಮತ್ತು ಜೀರ್ಣೋದ್ಧಾರ ಕಾರ್ಯವನ್ನು ಮಾಡಿರುತ್ತಾರೆ ಭಾರತದ ಇತಿಹಾಸದಲ್ಲಿ ಮಹಿಳಾ ಶಕ್ತಿಗೆ ಪ್ರೇರಣೆಯಾಗಿ ಸುಮಾರು 56 ವರ್ಷ ಸ್ವತಂತ್ರವಾಗಿ ರಾಜ್ಯವನ್ನು ಆಳ್ವಿಕೆ ಮಾಡಿದಂತಹ ಕುರುಬ ಸಮುದಾಯದ ಭಾರತದ ಎಲಿಜಬೆತ್ ಎಂದೆ ಹೆಸರುವಾಸಿಯಾಗಿರುವ ಲೋಕಮಾತೆ ಅಹಲ್ಯಾಬಾಯಿ ಹೋಲ್ಕರ್
ಕರ್ನಾಟಕದಲ್ಲಿ ಹಿಮ್ಮಡಿ ಪುಲಕೇಶಿ ಕಟ್ಟಿದಂತಹ ದೇವಸ್ಥಾನದ ಜೀವನೋದ್ಧಾರ ಬಾದಾಮಿಯಲ್ಲಿ ಮಾಡಿದ್ದು ಲೋಕ ಮಾತೆ ಅಹಲ್ಯಾಬಾಯಿ ಹೋಲ್ಕರ್ ಅವರು, ಕೈಗಾರಿಕರಣದಲ್ಲಿ ಅದರಲ್ಲೂ ಕೂಡ ಅತ್ತಿ ಉದ್ಯಮ, ಆಹಾರ ಸಂಗ್ರಹಣ, ರೇಷ್ಮೆ ಇವುಗಳನ್ನು ಕೈಗಾರಿಕರಣ ಗೊಳಿಸಿ ಉಜ್ಜಯಿನಿ ಇಂದು ಭೋಪಾಲ್ ಕಂದವ ಮಹೇಶ್ವರಿ ರತ್ನ ಮತ್ತು ನಿಮಂಚ್ ಜಾಗಗಳಲ್ಲ ಕೈಮಗ್ಗಗಳ ಮತ್ತು ಅವುಗಳ ಉದ್ಯಮಗಳನ್ನು ಪ್ರಾರಂಭಿಸಿ ದೇಶದಾದ್ಯಂತ ಸಾವಿರಾರು ಜನಕ್ಕೆ ಉದ್ಯೋಗ ನಿರ್ಮಾಣ ಮಾಡಿದರು.
ಇತರೆ ಸುದ್ದಿಗಳು