ರಾಜ್ಯ ಬಜೆಟ್ ಸಿದ್ದತೆಗೆ ಮೊದಲೇ ಸಿಎಂ ಕುರ್ಚಿ ವಿಚಾರ ತ್ವರಿತವಾಗಿ ಬಗೆಹರಿಯಲಿ ಜಿ. ಪರಮೇಶ್ವರ್
ಮುಖ್ಯಮಂತ್ರಿ ಗಾದಿ ವಿಚಾರವಾಗಿ ಸಿಎಮ್ ಸಿದ್ದರಾಮಯ್ಯ ಮತ್ತು ಡಿಸಿಎಮ್ ಡಿಕೆ ಶಿವಕುಮಾರ್ ನಡುವೆ ಕುರ್ಚಿ ಹಗ್ಗಜಗ್ಗಾಟದ ತೀರ್ಮಾನ ರಾಜ್ಯ ಸರ್ಕಾರ ಫೆಬ್ರವರಿಯಲ್ಲಿ ಮಂಡಿಸಲಿರುವ ಬಜೆಟ್ಗೂ ಮೊದಲೇ ತೀರ್ಮಾನವಾಗಲಿ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಆಗ್ರಹಿಸಿದ್ದಾರೆ.
ಬಜೆಟ್ ಸಿದ್ದತೆ ಫೆಬ್ರವರಿಯಲ್ಲಿ ಆರಂಭವಾಗಲಿದ್ದು ಇನ್ನೇನೂ ಕೇವಲ ಒಂದು ತಿಂಗಳೋಳಗೆ ಹೈಕಮಾಂಡ್ ರಾಜ್ಯ ರಾಜಕೀಯದ ನಾಯಕತ್ವದ ಗೊಂದಲವನ್ನು ಬಗೆಹರಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದಲ್ಲಿ ಕೆಲವರು ನಿಮ್ಮನ್ನು ಸಿ ಎಂ ಮಾಡುವಂತೆ ಕೆ.ಸಿ ವೇಣುಗೋಪಾಲ್ ಅವರಿಗೆ ಮನವಿ ಮಾಡಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜಿ ಪರಮೇಶ್ವರ್ ಹೈಕಮಾಂಡ್ ಎಲ್ಲ ಮಾಹಿತಿಯನ್ನ ಪಡೆದಿರುತ್ತದೆ. ಯಾವ ಸಮಯದಲ್ಲಿ ಏನು ನಿರ್ಧಾರ ತಗೆದುಕೊಳ್ಳಬೇಕು ಅದನ್ನ ಹೈಕಮಾಂಡ್ ತಗೆದುಕೊಳ್ಳುತ್ತದೆ ಎಂದರು
ಇತರೆ ಸುದ್ದಿಗಳು