ಸರ್ವರ್ ಸಮಸ್ಯೆಯಿಂದ ಗಣತಿ ಕಾರ್ಯಕ್ಕೆ ಅಡಚಣೆ
ಕಡಬಿ (ಯರಗಟ್ಟಿ ತಾ., ಬೆಳಗಾವಿ): ಕರ್ನಾಟಕ ಸರ್ಕಾರ ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ–2025ರ ಅಂಗವಾಗಿ ಇಂದು ಕಡಬಿ ಗ್ರಾಮದಲ್ಲಿ ಗಣತಿ ಕಾರ್ಯ ಪ್ರಾರಂಭಿಸಲಾಯಿತು.
ಗ್ರಾಮದ ಶ್ರೀಶೈಲ ಚಂದ್ರನಾಯಕ ಪಾಟೀಲರ ಮನೆಯಲ್ಲಿ ಸಮೀಕ್ಷಾ ಕಾರ್ಯ ಪ್ರಾರಂಭವಾದಾಗ ಸರ್ವರ್ ತೊಂದರೆಯಿಂದಾಗಿ ಒಂದೇ ಕುಟುಂಬದ ವಿವರಗಳನ್ನು ನೋಂದಣಿ ಮಾಡಲು ಒಂದುರಿಂದ ಎರಡು ಗಂಟೆಗಳ ಕಾಲ ಶಿಕ್ಷಕರು ನಿರೀಕ್ಷಿಸಬೇಕಾದ ಪರಿಸ್ಥಿತಿ ಎದುರಾಯಿತು.
ಈ ಸಂದರ್ಭದಲ್ಲಿ ಶಿಕ್ಷಕರಾದ ಸಂಗಮೇಶ್ ಕಣ್ಣಿ ನಾಯ್ಕರ್ ಹಾಗೂ ತಂಡದವರು “ಸರ್ವರ್ ತೊಂದರೆ ನಿವಾರಿಸಿ ಕಾರ್ಯ ಸುಗಮವಾಗುವಂತೆ ಮಾಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು” ಎಂದು ವಿನಂತಿಸಿದರು.
ಗಣತಿ ಕಾರ್ಯದಲ್ಲಿ ಸ್ಥಳೀಯ ಕುಟುಂಬದಿಂದ ಉತ್ತಮ ಸಹಕಾರ ದೊರಕಿತು. ಕರ್ನಾಟಕ ಶಿಕ್ಷಕರ ಸಂಘ ಪರಿಷತ್ತಿನ ರಾಜ್ಯಾಧ್ಯಕ್ಷ ಸಂಗಮೇಶ್ ಖನ್ನಿನಾಯ್ಕರ್, ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಮಲ್ಲಪ್ಪ ಯರ್ಜರವಿ, ಗಣತಿದಾರರು ಸಿ.ಎಂ. ಹೊಸೂರ ಹಾಗೂ ವಿ.ಎಂ. ನಾಯ್ಕರು ಭಾಗವಹಿಸಿ ಸಮೀಕ್ಷಾ ಕಾರ್ಯ ನಿರ್ವಹಿಸಿದರು.
ಇತರೆ ಸುದ್ದಿಗಳು