ಸುದೀರ್ಘ ಸಿ.ಎಂ. ಖ್ಯಾತಿ ಮತ್ತು ಅಧಿಕಾರ ಹಸ್ತಾಂತರ !!!
ಕರ್ನಾಟಕ ರಾಜ್ಯ ರಾಜಕೀಯದಲ್ಲಿ ದಿನಕ್ಜೊಂದು ವಿದ್ಯಮಾನಗಳ ನಡುವೆಯೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸುದೀರ್ಘ ಅವಧಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದು ಈ ಮೂಲಕ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ದಾಖಲೆಯನ್ನ ಸಿದ್ದರಾಮಯ್ಯ ಮುರಿದಿದ್ದಾರೆ.
ಇದು ರಾಜ್ಯ ರಾಜಕೀಯಲ್ಲಿ ಮಹತ್ತರ ಬೆಳವಣಿಗೆ ಪಡೆದುಕೊಂಡ ಬೆನ್ನಲ್ಲೇ ಈಗ ಸಿ.ಎಂ. ಅಧಿಕಾರ ಹಸ್ತಾಂತರದ ಚರ್ಚೆ ಮುನ್ನಲೆಗೆ ಬರುತ್ತಿದೆ.
ಇದಕ್ಕೆ ಪೂರಕವೆಂಬಂತೆ ಹಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧಿಕಾರದ ವಿದಾಯದ ನುಡಿ ಮಾರ್ಮಿಕವಾಗಿ ಹೇಳಿದ್ದು ಚರ್ಚೆಗೆ ಗ್ರಾಸವಾಗಿದೆ
ಅಧಿಕಾರ ಶಾಶ್ವತವಲ್ಲ ಜನರ ಆಶೀರ್ವಾದದಿಂದ ಇಲ್ಲಿಯವರೆಗೂ ಬಂದಿದ್ದೇನೆ ಇನ್ನೂ ಮುಂದೆ ಏನು ಎಂಬ ಬಗ್ಗೆ ಗೊತ್ತಿಲ್ಲ. ಎಷ್ಟು ದಿನ ಅಧಿಕಾರದಲ್ಲಿ ನಾನು ಇರ್ತಿನೋ ಗೊತ್ತಿಲ್ಲ ಎಂದು ಭಾವುಕವಾಗಿ ಮಾಧ್ಯಮದ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಒಂದು ಮೂಲಗಳ ಪ್ರಕಾರ ಸಿ.ಎಂ. ಅಧಿಕಾರ ಹಸ್ತಾಂತರದ ಕುರಿತು ಸಿದ್ಧರಾಮಯದಯನವರಿಗೆ ಕೇವಲ ದಾಖಲೆ ಸೃಷ್ಠಿಸುವದಕ್ಕಾಗಿ ಹೈಕಮಾಂಡ್ ಕಾದು ನೋಡುವ ತಂತ್ರ ಅನುಸರಿಸಿತ್ತೆ? ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ ಎನ್ನಲಾಗುತ್ತಿದೆ.
ಅದಲ್ಲದೇ ಹಾವೇರಿಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಹೇಳಿದ್ದ ವಿಷಯವು ಚರ್ಚೆಗೆ ಕಾರಣವಾಗಿದೆ. ವರ್ಡ್ ಪವರ್ ಇಸ್ ಅ ವರ್ಲ್ಡ್ ಪವರ್ ನಾಯಕನಾದವನು ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಎಂದು ಹಾವೇರಿಯಲ್ಲಿ ನೂತನ ವೈದ್ಯಕೀಯ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಎದುರೇ ಈ ಮಾತು ಹೇಳಿರುವುದು ಅಧಿಕಾರ ಹಸ್ತಾಂತರದ ಪ್ರಕ್ರಿಯೇಗೆ ಮುನ್ನುಡಿ ಬರೆದಂತಾಗಿದೆ.
ಇತರೆ ಸುದ್ದಿಗಳು