ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ಸಿಎಂ - ಡಿಸಿಎಂ ಕಿತ್ತಾಟದಿಂದ ಅಭಿವೃದ್ಧಿ ಹಿನ್ನಡೆ: ಸಂಸದ ಶೆಟ್ಟರ್
ವರದಿಗಾರರು : ಬೆಳಗಾವಿ | ಸ್ಥಳ : ಬಸವರಾಜ್ | ದಿನಾಂಕ : 01-12-2025

ಸಿಎಂ - ಡಿಸಿಎಂ ಕಿತ್ತಾಟದಿಂದ ಅಭಿವೃದ್ಧಿ ಹಿನ್ನಡೆ: ಸಂಸದ ಶೆಟ್ಟರ್

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ನಡುವೆ ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಕಿತ್ತಾಟದಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಶೀಘ್ರವೇ ಕಾಂಗ್ರೆಸ್ ಸರ್ಕಾರ ಪತನವಾಗಲಿದ್ದು, ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬರಲಿದೆ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಕ್ಕೆಜೋಳ, ಹೆಸರು, ಉದ್ದು ಬೆಳೆ ಖರೀದಿ ಕೇಂದ್ರ ಆರಂಭ ಆಗಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ. ಭ್ರಷ್ಟಾಚಾರ ‌ಮೀತಿ ಮೀರಿದೆ. ಸಿದ್ದರಾಮಯ್ಯ ತಮ್ಮ ಆಡಳಿತದ ಬಿಗಿ ಕಳೆದುಕೊಂಡಿದ್ದಾರೆ. ರಾಜ್ಯದ ಖಜಾನೆಯಲ್ಲಿ ಹಣ ಇಲ್ಲ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾಮಗಾರಿ ಕುಂಠಿತವಾಗಿವೆ. ಸರ್ಕಾರ ಜೀವಂತ ವ್ಯವಸ್ಥೆಯಲ್ಲಿ ಇಲ್ಲ. ಸರ್ಕಾರ ಆವೃತ್ತ ನಿಧಿಯಲ್ಲಿ ಹಣವನ್ನು ಇಡಬೇಕಾಗುತ್ತದೆ. ಆದರೆ, ಸದ್ಯದ ಸ್ಥಿತಿ ನೋಡಿದರೆ ಆವೃತ್ತ ನಿಧಿಯಲ್ಲಿ ಹಣ ಇಲ್ಲವೇ? ಮೆಕ್ಕೆಜೋಳ, ಉದ್ದು ಹೆಸರು ಬೆಳೆಗೆ ಬೆಂಬಲ ಬೆಲೆ ನೀಡದಿರುವುದರಿಂದ ರೈತರು ಬೀದಿಗೆ ಬಿದ್ದಿದ್ದಾರೆ. ಇದು ಸರ್ಕಾರದ ಬೇಜವಾಬ್ದಾರಿಯ ಪರಮಾವಧಿ ಆಗಿದೆ. ಕಬ್ಬಿನ ಬೆಲೆ ನಿಗದಿ ವಿಚಾರದಲ್ಲಿ ಕೇಂದ್ರದ ಮೇಲೆ ಬೊಟ್ಟು ಮಾಡಿ ತೋರಿಸುವ ರಾಜ್ಯ ಸರ್ಕಾರಕ್ಕೆ ಬೆಲೆ ನಿಗದಿ ಅಧಿಕಾರ ಇಲ್ಲ ಎನ್ನುವ ಸಕ್ಕರೆ ಸಚಿವರು, ಎಸ್‌ಎಪಿ ಕಾನೂನನ್ನು ಅರಿಯಬೇಕಿದೆ. ಎಫ್‌ಆರ್‌ಪಿ ನಿಗದಿಯನ್ನು ಕೇಂದ್ರ ಸರ್ಕಾರ ಮಾಡುತ್ತದೆ ನಿಜ. ಆದರೆ, ಎಸ್‌ಎಪಿಯನ್ನು ರಾಜ್ಯ ಸರ್ಕಾರ ಮಾಡಬೇಕು. ಈ ಕಾನೂನು ರಾಜ್ಯ ಸರ್ಕಾರಕ್ಕೆ ಗೊತ್ತಿಲ್ಲವೇ? ಸರ್ಕಾರ ಅಂಧಾದುಂದಿ ಆಡಳಿತ ನಡೆಸುತ್ತಿದೆ ಎಂದು ಟೀಕಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅ‍ವರು ಹೈಕಮಾಂಡ್‌ ತೀರ್ಮಾನ ಕೈಗೊಳ್ಳುತ್ತದೆ ಎಂದು ಅಸಹಾಯಕತೆಯ ಹೇಳಿಕೆ ಕೊಟ್ಟಿದ್ದಾರೆ. ಅಂದರೆ ಕಾಂಗ್ರೆಸ್‌ನಲ್ಲಿ ಹೈಕಮಾಂಡ್‌ ಯಾರು? ಕೂಡಲೇ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಕೇಂದ್ರ ಯೋಜನೆಗಳ ಕಾಮಗಾರಿ ವಿಳಂಬ ಬೆಳಗಾವಿ- ಧಾರವಾಡ ಹೊಸ ರೈಲು ಯೋಜನೆಗೆ ದಿ.ಸುರೇಶ ಅಂಗಡಿ ₹927 ಕೋಟಿ ಅನುದಾನ ಮಂಜೂರು ಮಾಡಿಸಿದ್ದರು. ಭೂಸ್ಥಾದೀನ ಪ್ರಕ್ರಿಯೆ ಮುಗಿದಿದೆ. 406 ಎಕರೆ ಭೂಮಿ ಸ್ವಾಧೀನಕ್ಕಾಗಿ ₹129 ಕೋಟಿ ಪರಿಹಾರ ಹಣ ಬಿಡುಗಡೆ ಮಾಡಬೇಕು. ಆದರೆ, ಈವರೆಗೆ ಒಂದು ರುಪಾಯಿ ಹಣ ಬಿಡುಗಡೆ ‌ಆಗಿಲ್ಲ. ಭೂಸ್ವಾಧೀನದ ಹಣ ಏರಿಕೆಯಾಗಲಿದೆ. ಮುಖ್ಯಮಂತ್ರಿ ಸಹಾಯಕತೆ ತೋರಿಸಿದ ಮೇಲೆ ಬಹಿರಂಗ ಪತ್ರ ಬರೆಯುತ್ತೇನೆ. ಈ ವಿಚಾರದಲ್ಲಿ ಸರ್ಕಾರ ಮೌನ ವಹಿಸಿದೆ. ಸ್ಮಾರ್ಟ್‌ಸಿಟಿ-2 ಗೆ ₹130 ಕೋಟಿ ಮಂಜೂರು ಆಗಿದೆ ಎಂದರು.

ಘನತ್ಯಾಜ್ಯ ವಿಲೇವಾರಿಗೆ ಕೇಂದ್ರದಿಂದ ಹಣ ಬಿಡುಗಡೆ. ಹಣ ಉಪಯೋಗ ಮಾಡಿಲ್ಲ, ವಾಪಸ್ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಅಮೃತ-2 ಯೋಜನೆಯಲ್ಲಿ 7 ಕೆರೆ, 7 ಉದ್ಯಾನ ಅಭಿವೃದ್ಧಿಗೆ ₹ 40 ಕೋಟಿ ಬಿಡುಗಡೆ ಆಗಿದೆ. ಈ ಹಣವನ್ನು ಉಪಯೋಗ ಮಾಡುತ್ತಿಲ್ಲ. ಅಧಿಕಾರಿಗಳು ಈ ಬಗ್ಗೆ ಗಮನವೇ ಹರಿಸುತ್ತಿಲ್ಲ ಎಂದು ಹೇಳಿದರು. ಸವದತ್ತಿ ಯಲ್ಲಮ್ಮ ದೇವಾಲಯ ಅಭಿವೃದ್ಧಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ₹ 118ಕೋಟಿ ಕೇಂದ್ರ ಸರ್ಕಾರದಿಂದ ಬಂದಿದೆ. ₹ 300ಕೋಟಿ ರಾಜ್ಯ ಸರ್ಕಾರ ಹಣ ಘೋಷಣೆ ಮಾಡಿದೆ. ಈವರೆಗೆ ಒಂದು ರುಪಾಯಿಯನ್ನು ಬಿಡುಗಡೆ ಮಾಡಿಲ್ಲ. ಈ ಎಲ್ಲಾ ವಿಚಾರ ಮುಂದಿಟ್ಟು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆಯುವೆ. ಪ್ರವಾಸೋದ್ಯಮ, ಮುಜರಾಯಿ ಇಲಾಖೆ ಫೈಟ್ ನಡೆಯುತ್ತಿದೆ. ಸಿಎಂ, ಡಿಸಿಎಂ ಅಷ್ಟೇ ಇಲಾಖೆಯಲ್ಲಿಯೂ ಫೈಟ್ ನಡೆಯುತ್ತಿದೆ. ಒಂದು ಪೈಸಾದಷ್ಟು ಟೆಂಡರ್ ಕೆಲಸ ಆಗಿಲ್ಲ. ಸರ್ಕಾರ ಜೀವಂತ ಹೆಣವಾಗಿರುವುದರಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಆರೋಪಿಸಿದರು.

ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಖಂಡ ಕರ್ನಾಟಕ ಏಕೀಕರಣದ ಕುರಿತು ಬಹಿರಂಗ ಚರ್ಚೆಯಾಗಬೇಕಿದೆ. ಆಡಳಿತಾತ್ಮಕ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಬೇಕು. ಆಡಳಿತ ಜನತೆಯ ಬಳಿ ಹೋಗಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಂ.ಬಿ.ಜಿರಲಿ, ಸಂಜಯ ಪಾಟೀಲ, ಅನಿಲ ಬೆನಕೆ, ಹಣಮಂತ ಕೊಂಗಾಲಿ, ರಮೇಶ ದೇಶಪಾಂಡೆ ಇತರರು ಹಾಜರಿದ್ದರು.

ಇತರೆ ಸುದ್ದಿಗಳು

ಶಿವಭಕ್ತಿಗೆ ಹೊಸ ಆಯಾಮ: ಜಗತ್ತಿನ ಅತಿ ದೊಡ್ಡ ಶಿವಲಿಂಗ ನಿರ್ಮಿಸಿ ಇತಿಹಾಸ ಬರೆದ ಭಾರತ

Views : 49069+

ಇತಿಹಾಸದಲ್ಲೇ ಒಂದು ವಿಶೇಷ ರೆಕಾರ್ಡ್ ಅನ್ನು ಸೃಷ್ಟಿಸಿದ ನಟ ಕಿಚ್ಚ ಸುದೀಪ್ “

Views : 49103+

ರಿಲೇಷನ್ಶಿಪ್ ಹಾಗೂ ಜವಾಬ್ದಾರಿಗಳಿಂದ ವಿರಾಮ ಘೋಷಿಸಿದ ಗಾಯಕಿ “ನೆಹಾ ಕಕ್ಕರ್”

Views : 49103+

ತಾಂತ್ರಿಕ ಸಮಸ್ಯೆಗಳು ಹೆಚ್ಚಳ: ಇ-ಖಾತೆ ಪಡೆಯಲು ಜನರ ಸಂಕಷ್ಟ

Views : 49131+

ಹುಣಸೂರಿನ ಬ್ರಹ್ಮಕುಮಾರಿ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಬಾಬಾ ರವರ 57ನೇ ಸ್ಮೃತಿ ದಿನವನ್ನು ಆಚರಿಸ

Views : 49296+

ಶ್ರೀ ಮತಿ ಮಿನಾಕ್ಷಿ ಮದಾಪ್ಪಾ ಅವರ ಅಧ್ಯಕ್ಷತೆಯಲ್ಲಿ ಮಹಾಕವಿ ವೇಮನ್ ಅವರ ಜಂಯತೋತ್ಸವ ಆಚರಿಸಿದ ಆಣದೂರ ಗ್ರಾಮ ಪ�

Views : 49363+

ಮದ್ದೂರು | ಹೈಕೋರ್ಟ್ ನ್ಯಾಯಮೂರ್ತಿಗಳಿಂದ ಕಾಮಗಾರಿಗಳ ಪರಿಶೀಲನೆ

Views : 49484+

ಧೂಮಪಾನಕ್ಕೂ ಮೀರಿದ ಅಪಾಯ: ಪ್ರತಿದಿನ ಹೆಚ್ಚುತ್ತಿರುವ ಸಾವುಗಳು

Views : 49669+

ಅಮವಾಸ್ಯೆ ಮರುದಿನ ಹನೂರು ತಾಲ್ಲೂಕಿನಲ್ಲಿ ಬಸ್ ಕೊರತೆ: ಗ್ರಾಮೀಣ ವಿದ್ಯಾರ್ಥಿಗಳಿಗೆ ಶಾಲೆ–ಕಾಲೇಜು ಪ್ರಯಾಣ ದು�

Views : 49614+

ಹನುಮಂತ ಹೊತ್ತು ತಂದ ಪರ್ವತ ನೋಡಿ ಆಶ್ಚರ್ಯಚಕಿತರಾದರು!

Views : 49781+

4610 ದೇವಸ್ಥಾನಗಳು ನಾಪತ್ತೆಯಾಗಿದ್ದು ನಿಜಾನಾ? ಮುಜರಾಯಿ ಇಲಾಖೆ ಹೇಳಿದ್ದೇನು ಗೊತ್ತಾ?

Views : 49786+

ಅಕ್ರಮ ಮಣ್ಣು ಸಾಗಣೆ ಸೇರಿ ವಿವಿಧ ಆರೋಪಗಳ ಸಾಕ್ಷ್ಯಗಳೊಂದಿಗೆ ಪ್ರತಿಭಟನಾ ಮೆರವಣಿಗೆ, ಜ.19ಕ್ಕೆ ದಾವಣಗೆರೆ ಗ್ರಾಮ

Views : 49803+

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು: ಬಿಜೆಪಿ ಶಾಸಕ ಬಿ. ಪಿ. ಹರೀಶ್

Views : 49800+

ಗಾಂಧಿ ಗ್ರಾಮ ಪ್ರಶಸ್ತಿಯಲ್ಲಿ ತಾರತಮ್ಯ ಆರೋಪ ಜನವರಿ 19ರಂದು ಗ್ರಾಮಸ್ಥರಿಂದ ಜಿ.ಪಂ ಎದುರಗಡೆ ಧರಣಿ

Views : 49825+

ಇತಿಹಾಸಕ್ಕೆ ಸಾಕ್ಷಿಯಾದ ಕ್ಯಾಮೇನಹಳ್ಳಿ ರಾಸುಗಳ ಜಾತ್ರೆ.. ಕಮನೀಯ ಕ್ಷೇತ್ರದಲ್ಲಿ ಕಾಮಧೇನುಗಳ ಜಾತ್ರೆ ಹಬ್ಬ..

Views : 49846+

ದ್ವಿಚಕ್ರ ವಾಹನ ಸವಾರರಿಗೆ ಹೊಸ ನಿಯಮ: ಎಬಿಎಸ್ ಕಡ್ಡಾಯ ಎಂದ “ನಿತಿನ್ ಗಡ್ಕರಿ”

Views : 51304+

ವೇಗ ಬೇಡ, ಜೀವ ಬೇಕು: 10 ನಿಮಿಷ ಡೆಲಿವರಿ ವಿರುದ್ಧ ಕಾರ್ಮಿಕರ ಮನವಿ

Views : 51389+

ಕಾಲೋನಿಯ ಪ್ರತಿಯೊಂದು ಮನೆಗೆ ತೆರಳಿ ಸಿಹಿ ತಿಂಡಿ ತಿನಿಸುಗಳನ್ನು ನೀಡಿ ಹಿರಿಯರ ಆಶಿರ್ವಾದ ಪಡೆಯುವ ಮೂಲಕ ಮಕರ ಸ

Views : 51713+

ದರ್ಭಾಂಗ ರಾಜಮನೆತನದ ಕೊಂಡಿ ಕಳಚಿತು: ಕಾಮಸುಂದರಿ ದೇವಿ ನಿಧನ

Views : 51718+

ಕೆಂಪೇಗೌಡ ಯುವಶಕ್ತಿ ವೇದಿಕೆಯ 8ನೇ ವಾರ್ಷಿಕೋತ್ಸವ: ಯಲಿಯೂರಿನಲ್ಲಿ ಸಂಕ್ರಾಂತಿ ಸಂಭ್ರಮ

Views : 52151+

ಈ ಊರಲ್ಲಿ ಗ್ಯಾಸ್ ಇಲ್ಲ, ಕಟ್ಟಿಗೆಯೂ ಇಲ್ಲ! ಹಾಗಾದ್ರೆ ಅಡುಗೆ ಆಗೋದು ಹೇಗೆ? ತಿಳಿದ್ರೆ ಆಶ್ಚರ್ಯವಾಗುತ್ತೆ!

Views : 52137+

ವಿಧವೆ ಸೊಸೆಗೆ ನ್ಯಾಯ: ಮಾವನ ಆಸ್ತಿಯಿಂದ ಜೀವನಾಂಶ ನೀಡಲು ಸುಪ್ರೀಂಕೋರ್ಟ್ ಮಹತ್ವದ ತೀರ್ಪು

Views : 57096+

ನಮ್ಮ ಮೆಟ್ರೋ' ಪ್ರಯಾಣಿಕರಿಗೆ ಸಿಹಿ ಸುದ್ದಿ : QR ಕೋಡ್ ಆಧಾರಿತ ಅನ್'ಲಿಮಿಟೆಡ್ ಪಾಸ್ ನಾಳೆಯಿಂದಲೇ ಜಾರಿ

Views : 57079+

ಅರಳಿ ಮರವು ಎಲ್ಲಾ ಮರಗಳ ತಾಯಿ ಮರವಾಗಿದೆ” – ಡಾ. ಪಿ.ಎಸ್. ಲಕ್ಕಿ

Views : 57089+