ಬ್ಯಾಟಲ್ ಆಪ್ ಗುಲ್ವಾನ್ ಚಿತ್ರಕ್ಕೆ ಚೀನಾದ ಕ್ಯಾತೆ...!!
ಅಂದು 2020 ಭಾರತ ಮತ್ತು ಚೀನಾ ಸಂಬಂಧ ಹದಗೆಡಲು ಕಾರಣವಾದ ಈ ಗುಲ್ವಾನ್ ಸಂಘರ್ಷ. ಈ ವಿಷಯವನ್ನ ಕಥಾ ವಸ್ತುವಾಗಿ ರೂಪಿಸಿ ಬಾಲಿವುಡ್ ಅಂಗಳದಲ್ಲಿ ಬ್ಯಾಟಲ್ ಆಪ್ ಗುಲ್ವಾನ ಚಿತ್ರ ನಿರ್ಮಿಸಲಾಗಿತ್ತು.
ಇದರಲ್ಲಿ ಸಲ್ಮಾನ್ ಖಾನ್ ನಟಿಸಿದ್ದಾರೆ. ಗುಲ್ವಾನ್ ಚಿತ್ರದ ಟೀಸರ್ ರಿಲೀಜ್ ಆಗಿದ್ದ ಬೆನ್ನಲೇ ಚೀನಾ ಕ್ಯಾತೆ ತಗೆದಿದೆ. ಅಂದು ಚೀನಾ ಸೇನೆ ವಿರುದ್ಧದ ಕಾದಾಟದಲ್ಲಿ ಕರ್ನಲ್ ಸಂತೋಷ್ ಹುತಾತ್ಮರಾಗಿದ್ದರು. ಗುಲ್ವಾನ್ ಚಿತ್ರದಲ್ಲಿ ಸಲ್ಮಾನ್ ಖಾನ್ ಕರ್ನಲ್ ಸಂತೋಷ್ ಪಾತ್ರದಲ್ಲಿ ನಟಿಸಿದ್ದಾರೆ.
ಚೀನಾ ಇದೆಲ್ಲವೂ ಕಟ್ಟು ಕತೆ ಎಂದು ಅಪಸ್ವರ ಎತ್ತಿದೆ. ರಾಷ್ಡ್ರೀಯವಾದಿ ಭಾವನೆಯನ್ನ ಕೆರಳಿಸಲು ಭಾರತ ಚಿತ್ರರಂಗವನ್ನ ಬಳಸುತ್ತಿದೆ ಎಂದಿದೆ. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ಭಾರತ ಸರ್ಕಾರ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಜೊತೆಗೆ ಕಲಾತ್ಮಕ ಸ್ವಾತಂತ್ರ್ಯವೂ ಹೊಂದಿವೆ ಯಾವುದೇ ಸಮಸ್ಯೆ ಇದ್ದರೆ ರಕ್ಷಣಾ ಇಲಾಖೆಯನ್ನ ಸಂಪರ್ಕಿಸಬಹುದು ಅದಲ್ಲದೇ ಗುಲ್ವಾನ್ ಚಿತ್ರದಲ್ಲಿ ಭಾರತ ಸರ್ಕಾರ ಮದ್ಯಸ್ಥಿಕೆ ವಹಿಸಿಲ್ಲ ಎಂದು ಭಾರತ ಸರ್ಕಾರದ ಮೂಲಗಳು ಚೀನಾಗೆ ತಿರುಗೇಟು ನೀಡಿದೆ.
ಏನಿದು ಗುಲ್ವಾನ್ ಸಂಘರ್ಷ?
ಅಂದು ಜೂನ್ 15 2020. ರಾತ್ರಿಯ ಸಮಯ ಲಡಾಕ್ ಪ್ರದೇಶದ ಗುಲ್ವಾನ್ ಎಂಬ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ನಡೆದ ಸಂಘರ್ಷವಾಗಿದೆ.
ಸಂಘರ್ಷಕ್ಕೆ ಕಾರಣ ಗುಲ್ವಾನ್ ಕಣಿವೆ ಭಾರತ ಮತ್ತು ಚೀನಾ ಗಡಿಪ್ರದೇಶಕ್ಕೆ ಹತ್ತಿರವಾಗಿದೆ.
2020 ರಂದು ಚೀನಾ ಸೇನೆಯೂ ಗುಲ್ವಾನ್ ಕಣಿವೆ ಪ್ರದೇಶದಲ್ಲಿ ಶಿಬಿರಗಳು ಹಾಗೂ ನಿರ್ಮಾಣ ಕಾರ್ಯಗಳು ಆರಂಭಿಸಿವೆ ಎಂದು ಭಾರತ ಆರೋಪಿಸಿದ ಹಿನ್ನಲೆಯಲ್ಲಿ ಜೂನ್ 15 2020 ರಂದು ಭಾರತ ಚೀನಾ ಸೇನೆಗಳ ನಡುವೆ ವ್ಯಾಪಕ ಸಂಘರ್ಷ ನಡೆದಿತ್ತು
ಈ ಹೋರಾಟದಲ್ಲಿ ಭಾರತದ ಇಪ್ಪತ್ತು ಸೈನಿಕರು ಹುತಾತ್ಮರಾಗಿದ್ದರು. ಆದರೆ ಚೀನಾ ತನ್ನ ಸೈನಿಕರ ಸಾವಿನ ಕುರಿತು ಆರಂಭದಲ್ಲಿ ಮಾಹಿತಿ ನೀಡಿರಲಿಲ್ಲವಾದರೂ, ತದನಂತರ ಕೆಲ ಸೈನಿಕರು ಮೃತಪಟ್ಟಿದ್ದಾರೆ ಎಂದು ಒಪ್ಪಿಕೊಂಡಿತ್ತು...
ಈ ಘಟನೆಯ ಕುರಿತ ಕಥಾ ಹಂದರವಿರುವ ಚಿತ್ರ ಈ ಬ್ಯಾಟಲ್ ಆಪ್ ಗುಲ್ವಾನ್
ಇತರೆ ಸುದ್ದಿಗಳು