ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
03-12-2025
ಸಂಚಾರಿ ಸಾಥಿ ತಂತ್ರಾಶ..
ಕೇಂದ್ರ ಸರ್ಕಾರ ರೂಪಿಸಿರುವ ಸಂಚಾರಿ ಸಾಥಿ ತಂತ್ರಾಶದ ಬಳಕೆ ಕಡ್ಡಾಯವೇನಿಲ್ಲ ಎಂದು ಕೇಂದ್ರ ಸಂವಹನ ಖಾತೆ ಸಚಿವ ಜೋತಿರಾಧಿತ್ಯ ಸಿಂಧಿಯಾ ಹೇಳಿದ್ದಾರೆ.
ಸೈಬರ್ ಅಪರಾಧ ಮತ್ತು ಮೊಬೈಲ್ ಕಳುವು ಪ್ರಕರಣಗಳಿಂದ ಮೊಬೈಲ್ ಬಳಕೆದಾರರನ್ನು ರಕ್ಷಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಸಂಚಾರಿ ಸಾಥಿ ಎಂಬ ಹೆಸರಿನ ಆ್ಯಪ್ ನಿರ್ಮಿಸಿತ್ತು.
ಎಲ್ಲ ಮೊಬೈಲ್ ಫೋನ್ಗಳಲ್ಲಿ ಸಂಚಾರಿ ಸಾಥಿ ತಂತ್ರಾಶವನ್ನು ತಯಾರಿಕಾ ಹಂತದಲ್ಲೇ ಫ್ರೀ ಇನ್ಸ್ಟಾಲ್ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ನೀಡಿತ್ತು. ಇದರಿಂದ ಮೊಬೈಲ್ ಬಳಕೆದಾರರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂದು ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಸಂಚಾರಿ ಸಾಥಿ ತಂತ್ರಾಶ ಬಳಸಬೇಕೆ ಅಥವ ಬೇಡವೆ? ಎಂಬುದು ಗ್ರಾಹಕರಿಗೆ ಬಿಟ್ಟ ವಿಚಾರ ಎಂದು ಹೇಳಿದೆ.
