ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
02-12-2025
ಯುಪಿ ಸಂಸದನಿಗೆ ತಟ್ಟಿದ ಸಿಲಿಕಾನ್ ಸಿಟಿ ಸಂಚಾರ ದಟ್ಟಣೆ...
ಇತ್ತೀಚೆಗೆ ಬೆಂಗಳೂರಿನಿಂದ ದೆಹಲಿಗೆ ತೆರಳಬೇಕಿದ್ದ ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಸಂಸದರಿಗೆ ಬೆಂಗಳೂರಿನ ವಾಹನ ದಟ್ಟಣೆಯ ಬಿಸಿ ತಗುಲಿದೆ.
ಸಂಚಾರ ದಟ್ಟಣೆಯಿಂದ ಬೇಸತ್ತು ಹೋದ ಯುಪಿ ಸಂಸದ ರಾಜೀವ್ ಕುಮಾರ್ ರಾಯ್ ಕರ್ನಾಟಕ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ. ಇಂತಹ ಸುಂದರ ನಗರದಲ್ಲಿ ಸಂಚಾರ ದಟ್ಟಣೆಯ ಅವಸ್ಥೆ ಮತ್ತು ಅಸಮರ್ಪಕ ಸಂಚಾರಿ ಪೋಲಿಸರ ಕಾರ್ಯನಿರ್ವಹಣೆ ಕುರಿತು ಎಕ್ಸ ಖಾತೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಟ್ಯಾಗ್ ಮಾಡಿ ಪೋಸ್ಟ ಹಾಕಿದ್ದಾರೆ.
ಕರ್ನಾಟರ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳೆ ಕ್ಷಮೆ ಇರಲಿ. ನಿಮ್ಮ ನಗರದಲ್ಲಿ ಸಂಚಾರ ವ್ಯವಸ್ಥೆ ಅಧೋಗತಿಯಲ್ಲಿದೆ ಸಂಚಾರಿ ಪೋಲಿಸರು ಬೇಜವಬ್ದಾರಿತನದಿಂದ ಇದ್ದಾರೆಂದು ಟೀಕಿಸಿದ್ದಾರೆ . ಇದಕ್ಕೆ ಪ್ರತ್ಯುತ್ತರ ನೀಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಾನು ದೆಹಲಿ ಬಂದು ಅಲ್ಕಿನ ಸಂಚಾರಿ ಟ್ರಾಫಿಕ್ ವ್ಯವಸ್ಥೆ ಹೇಗಿದೆ ಎಂಬುದನ್ನ ನಿಮ್ಮನ್ನು ಭೇಟಿ ಮಾಡಿ ವಿವರಿಸುತ್ತೇನೆ ಎಂದು ತಿರುಗೇಟು ಕೊಟ್ಟಿದ್ದಾರೆ.
