ಗಂಗಾವತಿ ಸಂಘ ಶತಮಾನೋತ್ಸವದ ಗೃಹ ಸಂಪರ್ಕ ಅಭಿಯಾನ ಕ್ಕೆ ಕರೆ ಗಂಗಾವತಿ:- ನಿನ್ನೆಯ ದಿನ ಗಂಗಾವತಿ ನಗರದ ಆನೆಗುಂದಿ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ನಗರದಲ್ಲಿ ಗೃಹ ಸಂಪರ್ಕ ಅಭಿಯಾನಕ್ಕೆ ಸಾಂಕೇತಿಕ ಚಾಲನೆ ನಿನ್ನೆ ನಗರದ ಆನೆಗುಂದಿ ರಸ್ತೆಯ ಶ್ರೀ ಜ್ಞಾನ ಗಣಪತಿ ದೇವಸ್ಥಾನದಲ್ಲಿ ನೀಡಲಾಯಿತು. ಪ್ರಧಾನ ಅರ್ಚಕ ರಾಜೇಶ್ ಭಟ್ ಅವರು ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಅಭಿಯಾನ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದರು.
ನಗರದ ಎಲ್ಲಾ ವಾರ್ಡುಗಳಲ್ಲಿ ನವೆಂಬರ್ 15 ಮತ್ತು 16 ರಂದು ಸಂಘದ ಕಾರ್ಯಕರ್ತರು ಮನೆ–ಮನೆಗೆ ಭೇಟಿ ನೀಡಿ ಗೃಹ ಸಂಪರ್ಕ ಅಭಿಯಾನ ಕೈಗೊಳ್ಳಲಿದ್ದಾರೆ. ಹಿಂದು ಸಮಾಜದ ಯುವಕರು, ಹಿರಿಯರು ಮತ್ತು ತಾಯಂದಿರೂ ಈ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಘದ ಹಿರಿಯ ಸದಸ್ಯ ರವೀಂದ್ರ ಜೀ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಂದೀಪ್ ಮುತ್ತಿಗೆ (ಜಿಲ್ಲಾ ಕಾರ್ಯವಾಹ), ಹರೀಶ್ ಕುಲಕರ್ಣಿ, ವಿಠ್ಠಲ್ ಜೀ, ಶ್ರೀಕಾಂತ್ ಹೋಸ್ಕೆರ, ವೀರೇಶ್ ಬಲುಕುಂದಿ, ಅನೀಲ್ ಬಾಗಮರ್, ಗಿರೀಶ್ ರಾಯ್ಕರ್, ಸೋಮನಾಥ ಸ್ವಾಮಿ ಹಣವಾಳ್, ಸಂಗಮೇಶ್ ಅಯೋಧ್ಯ, ಅರ್ಜುನ್ ರಾಯ್ಕರ್ ಸೇರಿದಂತೆ ನಗರ ಮತ್ತು ಗ್ರಾಮಾಂತರ ಪ್ರದೇಶದ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
ಇತರೆ ಸುದ್ದಿಗಳು