ಭ್ರಷ್ಟರ ಎದೆ ನಡುಗಿಸಿದೆ ಲೋಕಾ ದಾಳಿ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಾಲ್ವರು ಸರ್ಕಾರಿ ಆಧಿಕಾರಿಗಳ ಮನೆ, ಕಛೇರಿ ಹಾಗೂ ಅವರ ಸಂಬಂಧಿಕರ ಮನೆಯ ಮೇಲೆ ಏಕಾಏಕಿ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಅಸಮತೋಲನ ಆಸ್ತಿ ಪತ್ತೆಹಚ್ಚಿದ್ದಾರೆ
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ ಪೋಲೀಸರು ಈ ಶೋಧಕಾರ್ಯ ನಡೆಸಿದರು.
ಮಂಡ್ಯ ಧಾರವಾಡ, ಶಿವಮೊಗ್ಗ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ನಾಲ್ಕು ಜನ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಅವರ ಸಂಬಂಧಿಕರ ಮನೆ ಸೇರಿ ಏಕಕಾಲಕ್ಕೆ ದಾಳಿ ನಡೆಸಿದರು. .
ಈ ಶೋಧ ಕಾರ್ಯದಲ್ಲಿ ಅಧಿಕಾರಿಗಳ ಜಮೀನು, ಚಿನ್ನಾಭರಣ, ಐಷರಾಮಿ ಮನೆಗಳು ಹಾಗೂ ನಗದು ಸೇರಿದಂತೆ ಒಟ್ಟೂ ಹದಿನೆಂಟು ಕೋಟಿ ರೂಪಾಯಿ ಮೌಲ್ಯದ ಆದಾಯದ ಮೀತಿಯಿಂದ ಹೊರಗೆ ಗಳಿಸಿದ ಆಸ್ತಿಗಳನ್ನು ಜಪ್ತಿ ಮಾಡಿದ್ದಾರೆ
ಲೋಕಾ ದಾಳಿಗೊಳಗಾದ ಅಧಿಕಾರಿಗಳ ವಿರುದ್ಧ ಈಗ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಇತರೆ ಸುದ್ದಿಗಳು