ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
02-12-2025
ಒಂಟಿ ಬಾಳಿಗೆ ಗುಡ್ಬೈ ಹೇಳಿದ ಬಹುಭಾಷಾ ನಟಿ ಸಮಂತಾ....
ಅಕ್ಕಿನೇನಿ ನಾಗಚೈತನ್ಯ ಜೊತೆ ವಿವಾಹ ವಿಚ್ಛೇದನದ ನಂತರ ಸಮಂತಾ ಬದುಕಲ್ಲಿ ವೀಪರೀತ ಸಂಕಷ್ಟಗಳು ಎದುರಾಗಿದ್ದವು. ಅದರಲ್ಲೂ ಪ್ರಮುಖವಾಗಿ ಸಮಂತಾಗೆ ಕಾಡಿದ್ದು ಅನಾರೋಗ್ಯ......!!!!!!!
ಸತತ ನಾಲ್ಕು ವರ್ಷಗಳ ಕಾಲ ಒಂಟಿ ಜೀವನ ನಡೆಸುತ್ತಿದ್ದ ಸಮಂತ ಬಾಳಲ್ಲಿ ಬೆಳಕಾಗಿ ಬಂದವರು ರಾಜ್ ನಿಡುಮೋರಿ. ಹೌದು ಫ್ಯಾಮಿಲಿ ಮ್ಯಾನ್ ಎಂಬ ವೆಬ್ ಸೀರಿಸ್ ನಿರ್ದೇಶಕ ರಾಜ್ ನಿಡುಮೋರಿ ಜೊತೆ ಸಮಂತ ಹಸೆಮಣೆ ಏರಿದ್ದಾರೆ. ಚೈನೈನ ಕೊಯಮತ್ತೂರಿನಲ್ಲಿರುವ ಈಶಾ ಯೋಗ ಕೇಂದ್ರದಲ್ಲಿ ಡಿಸೆಂಬರ್ ಒಂದು ಸೋಮವಾರದಂದು ರಾಜ್ ಸಮಂತ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಹುದಿನಗಳಿಂದ ಇವರಿಬ್ಬರು ಸುತ್ತಾಡುತ್ತಿದ್ದ ಅನೇಕ ಗಾಸಿಪ್ ವದಂತಿಗಳಿಗೆ ಪೂರ್ಣವಿರಾಮವಿಟ್ಟು ಸತಿಪತಿಗಳಾದರು.
ಕೆಂಪು ವರ್ಣದ ಬ್ರೈಡಲ್ ಸೀರೆಯಲ್ಲಿ ಮದುವೆ ಮಂಟಪಕ್ಕೆ ಆಗಮಿಸಿದ ಸಮಂತ ಸರಳವಾಗಿ ರಾಜ್ ನಿಡುಮೋರಿಯೊಂದಿಗೆ ಭೂತ ಶುದ್ಧಿ ವಿವಾಹವಾದರು. ಭೂತ ಶುದ್ಧಿ ಎಂಬುದು ಯೋಗ ಸಂಪ್ರದಾಯದಲ್ಲಿ ಅಸ್ತಿತ್ವದಲ್ಲಿರುವ ಮದುವೆಯಾಗಿದೆ. ಇದು ವೈವಾಹಿಕ ಜೀವನದಲ್ಲಿ ಶುಧ್ದತೆ ದೈಹಿಕ ಬಂಧ ಹಾಗೂ ಲೌಕಿಕ ಬಯಕೆಯನ್ನು ಮೀರಿದ ಸಂಬಂಧವನ್ನು ಬೆಸೆಯುತ್ತದೆ. ಇದು ಲಿಂಗ ಭೈರವಿ ಅನುಗ್ರಹದಿಂದ ಸತಿಪತಿಗಳು ಅಲೌಕಿಕವಾದ ಅನುಬಂಧವನ್ನು ಪಡೆಯುತ್ತಾರೆ.
