ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
06-12-2025
ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಬಳಕೆ ; ಸುಧಾ ಮೂರ್ತಿ ಕಳವಳ
ಇತ್ತೀಚಿನ ದಿನಗಳಲ್ಲಿ ಎಲ್ಲೆಂದರಲ್ಲಿ ಸಾಮಾಜಿಕ ಜಾಲತಾಣಗಳದ್ದೆ ಹಾವಳಿ. ಇದು ಉತ್ತಮ ಸದುದ್ದೇಶಗಳಿಂದ ಬಳಸಿದರೆ ಮಾತ್ರ ಅದರಿಂದ ಸಮಾಜಕ್ಕೆ ಒಳಿತು. ಆದರೆ ಹಲವು ಜಾಲತಾಣಗಳಲ್ಲಿ ಬಿತ್ತರಿಸುವ ಅನೇಕ ಚಟುವಟಿಕೆಗಳಿಗೆ ಮಕ್ಕಳನ್ನ ಬಳಸಿಕೊಳ್ಳುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿರುವ ರಾಜ್ಯ ಸಭಾ ಸಂಸದೆ ಸದಸ್ಯೆ ಸುಧಾಮೂರ್ತಿ ಮಕ್ಕಳ ಬಳಕೆಗೆ ನಿರ್ಬಂಧ ವಿಧಿಸಿ ಸೂಕ್ತ ನಿಯಮ ರೂಪಿಸಲು ಆಗ್ರಹಿಸಿದ್ದಾರೆ.
ರಾಜ್ಯಸಭೆಯ ಶೂನ್ಯ ವೇಳೆಯಲ್ಲಿ ಈ ವಿಚಾರ ಪ್ರಸ್ತಾಪಿಸಿ, ಮಕ್ಕಳ ಭವಿಷ್ಯ ಮೌಲ್ಯಯುತವಾಗಿರಬೇಕು. ಆದರೆ ಕೇವಲ ಜಾಲತಾಣಗಳಲ್ಲಿ ಲೈಕ್ಸ ಫಾಲೋವರ್ಸಗಳಿಗಾಗಿ ಪೋಷಕರೆ ಮಕ್ಕಳನ್ನು ತರವಲ್ಲದ ರೀತಿಯಲ್ಲಿ ಪ್ರದರ್ಶಿಸುವುದು ಸರಿಯಲ್ಲ ಎಂದರು.
ಪೋಷಕರಿಗೆ ಜಾಲತಾಣಗಳಲ್ಲಿ ಮಕ್ಕಳನ್ನು ಬಳಸಿ ಆದಾಯ ಪಡೆಯಬಹುದು, ಆದರೆ ಇದು ಮಕ್ಕಳ ಮನಃಸ್ಥತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮಕ್ಕಳು ತಮ್ಮ ಮುಗ್ದತೆಯನ್ನ ಕಳೆದುಕೊಳ್ಳುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
