ವರದಿಗಾರರು :
ರುದ್ರೇಶ್ ||
ಸ್ಥಳ :
ತುಮಕೂರು
ವರದಿ ದಿನಾಂಕ :
29-11-2025
ಶ್ರೀ ವಂಕಟೇಶ್ವರ ಉಪ್ಪಾರ್ ಸಮಾಜದ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಕಲಕೇರಿ, ತಾಳಿಕೋಟಿ ತಾಲೂಕು
ಕಲಕೇರಿ ಗ್ರಾಮದಲ್ಲಿ ಅತಿ ಹೆಮ್ಮೆಯ ಘಟನೆಯೊಂದು ನಡೆದಿದೆ. ಶ್ರೀ ವಂಕಟೇಶ್ವರ ಉಪ್ಪಾರ್ ಸಮಾಜದ ಯುವಕರ ಸಂಘದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಸಮಾರಂಭವು ಸ್ಥಳೀಯ ಮುಖಂಡರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಸಂಘದ ಅಭಿವೃದ್ಧಿ ಮತ್ತು ಯುವಕರ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ, ಮುಖಂಡರಾದ: ಶರಣಪ್ಪ ಮೋಪಗಾರ ಇರುಗಂಟೆಪ್ಪ ಮೋಪಗಾರ ಸುರೇಶ್ ಮೋಪಗಾರ ಛತ್ರಪ್ಪ ಮೋಪಗಾರ ಹಳ್ಳೆಪ್ಪ ಮೋಪಗಾರ ಯುವಕರ ಸಂಘವನ್ನು ಮುಂದಿನ ಹಾದಿಯಲ್ಲಿ ನಡೆಸಲು ನಿರ್ಧರಿಸಿದರು.
ನೂತನ ನೇತೃತ್ವ: ಅಧ್ಯಕ್ಷ: ಮಹಾಂತೇಶ್ ಮೋಪಗಾರ ಉಪಾಧ್ಯಕ್ಷರು: ಬಸವರಾಜ್ ಮೋಪಗಾರ, ಆನಂದ್ ಇಸ್ಲಾಂಪುರ್ ಕಾರ್ಯದರ್ಶಿಗಳು: ಶ್ರೀನಿವಾಸ್ ಮೋಪಗಾರ (ಸಂ. ಕಾರ್ಯದರ್ಶಿ), ರಮೇಶ್ ಮೋಪಗಾರ (ಖಜಾಂಚಿ) ಸಂಘದ ಸದಸ್ಯರು: ರಾಘವೇಂದ್ರ ಮೋಪಗಾರ, ಬಲವಂತಪ್ಪ ಮೋಪಗಾರ, ದತ್ತಾತ್ರೇಯ ಮೋಪಗಾರ, ಮಡಿವಾಳಪ್ಪ ಮೋಪಗಾರ, ಸೋಮನಾಥ್ ಇಸ್ಲಾಂಪುರ್.
ಅಧ್ಯಕ್ಷನಾಗಿ ಆಯ್ಕೆಯಾಗಿರುವ ಮಹಾಂತೇಶ್ ಮೋಪಗಾರ ಅವರು ತಮ್ಮ ವಯಸ್ಸು ಕಡಿಮೆ ಆಗಿದ್ದರೂ ಸಹ ಹಿರಿಯರ ಮಾರ್ಗದರ್ಶನದಲ್ಲಿ ಸಂಘದ ಎಲ್ಲಾ ಕಾರ್ಯಗಳನ್ನು ಜವಾಬ್ದಾರಿಯಾಗಿ ನಿರ್ವಹಿಸುವಂತೆ ಹೇಳಿದರು. ಮುಖ್ಯ ಮುಖಂಡರು ಶರಣಪ್ಪ ಬಾಲಪ್ಪ ಮೋಪಗಾರ ಸೇರಿದಂತೆ ಸದಸ್ಯರಿಗೆ “ನೀವುಗಳು ಒಂದೇ ತಾಯಿಯ ಮಕ್ಕಳಂತೆ ಸಂಘದ ಅಭಿವೃದ್ಧಿಗೆ ಶ್ರಮಿಸಿ” ಎಂದು ಪ್ರೇರೇಪಿಸಿದರು. ರಮೇಶ್ ಮೋಪಗಾರ ಸಂಘದ ಸಂಪತ್ತು ಮತ್ತು ಕಾರ್ಯವೈಖರಿ ಬಗ್ಗೆ ಸದಸ್ಯರನ್ನು ಜಾಗೃತಗೊಳಿಸಿ, ಸಂಘದ ಅಭಿವೃದ್ಧಿಗೆ ಎಲ್ಲರೂ ಒಗ್ಗೂಡಬೇಕು ಎಂಬುದನ್ನು ದೃಢಪಡಿಸಿದರು.
