ತುಮಕೂರು ನಗರದಲ್ಲಿನ ಮಳೆಕೋಟೆ ಪ್ರದೇಶದ ಉದ್ಯಮಿ ಇದಾಯತ್ ಉಲ್ಲಾ ಖಾನ್ ಅವರ PhonePe ಖಾತೆಯಿಂದ 7.87 ಲಕ್ಷ ರೂಪಾಯಿ ಅವರ
ಅವರ ಹೇಳಿಕೆಯ ಪ್ರಕಾರ, ಅವರು ತಮ್ಮ ಸ್ನೇಹಿತರಿಗೆ ಹಣ ವರ್ಗಾವಣೆ ಮಾಡುವ ವೇಳೆ PhonePe ಬಳಕೆ ಮಾಡಿರಲಿಲ್ಲ. ಆದರೆ ಪರಿಶೀಲಿಸಿದಾಗ, ಸೆಪ್ಟೆಂಬರ್ 18ರಿಂದ 23ರ ನಡುವೆ 137 ಬಾರಿ PhonePe ಮೂಲಕ ಹಣ ವರ್ಗಾವಣೆ ನಡೆದಿರುವುದು ಪತ್ತೆಯಾಗಿದೆ. ಈ ವ್ಯವಹಾರಗಳು ಮಧ್ಯರಾತ್ರಿ 12 ಗಂಟೆಯಿಂದ ಬೆಳಗಿನ 3.30ರವರೆಗೆ ನಡೆದಿದ್ದು, ಒಟ್ಟು 7,87,558 ರೂಪಾಯಿ ಕಡಿತವಾಗಿದೆ.
ಇದಾಯತ್ ಉಲ್ಲಾ ಖಾನ್ ಅವರು ಹಲವು ವಿಭಿನ್ನ ಯುಪಿಐ ಐಡಿ ಗಳಿಗೆ ಹಣ ವರ್ಗಾವಣೆ ನಡೆದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ
ಇತರೆ ಸುದ್ದಿಗಳು