ಪ್ರಧಾನಿ ನರೇದ್ರ ಮೋದಿ ವಿದೇಶ ಪ್ರವಾಸದ ಕುರಿತ ಟೀಕೆಗೆ ಇಲ್ಲಿದೆ ಉತ್ತರ..!!
ಭಾರತದ ಪ್ರಧಾನಿ ನರೇಂದ್ರ ಮೋದಿ ಸದಾ ವಿದೇಶ ಪ್ರವಾಸದಲ್ಲಿರುತ್ತಾರೆ ಎಂಬ ಕುಹಕ ನುಡಿಗಳಿಗೆ ತಮ್ಮ ಕೆಲಸಗಳ ಮೂಲಕ ಉತ್ತರ ನೀಡಿದ್ದಾರೆ ಪ್ರಧಾನಿ ಮೋದಿ. ಇತ್ತೀಚೆಗೆ ಒಮನ್ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ, ಭಾರತ ಹಾಗೂ ಒಮನ್ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದರು.
ಈ ಒಪ್ಪಂದದಲ್ಲಿ ಒಮನ್ ಭಾರತದ ರಪ್ತು ಆಮದಿನ ಮೇಲೆ ಸುಂಕ ರಿಯಾಯ್ತಿಗಳನ್ನ ನೀಡಿದೆ. ಇದರಿಂದ ಅಮೆರಿಕ ಅಧ್ಯಕ್ಷ ಟ್ರಂಪ್ ವಿಧಿಸಿದ ಪ್ರತಿಸುಂಕದ ನಿಯಮಗಳಿಗೆ ಸೆಡ್ಡು ಹೊಡೆದಂತಾಗಿದೆ. ಇತ್ತೀಚಿಗಿನ ಬೆಳವಣಿಗೆಯಲ್ಲಿ ಒಮನ್ ಜೊತೆಗೆ ಪ್ರಧಾನಿ ಮೋದಿ ನಡೆಸಿದ ಒಪ್ಪಂದ ಪಶ್ಚಿಮ ಏಷ್ಯಾ ದಲ್ಲೇ ರಪ್ತು ಉದ್ಯಮಕ್ಕೆ ಹೊಸ ಆಯಾಮವನ್ನು ನೀಡಿದೆ.
ಮುಂಬರುವ ಎರಡು ವರ್ಷಗಳಲ್ಲಿ ಭಾರತ ಎರಡು ಶತಕೋಟಿ ಡಾಲರಗಿಂತ ಹೆಚ್ಚು ಉತ್ಪನ್ನಗಳನ್ನು ರಪ್ತು ಮಾಡಬಹುದಾಗಿದೆ.
ಒಮನ್ ರಾಜತಾಂತ್ರಿಕ ನಿರ್ಧಾರಗಳಲ್ಲಿ ಅಮೃತಶಿಲೆಯ ರಪ್ತಿಗೆ ನಿಷೇಧ ಹೇರಿತ್ತು. ಆದರೆ ಭಾರತದ ಮಟ್ಟಿಗೆ ಈ ನಿಷೇಧವನ್ನು ಸಡಿಲಿಸಲಾಗಿದೆ. ಇದರಿಂದ ಭಾರತದ ಆರ್ಥಿಕತೆಯ ಮಟ್ಟ ಏರಿಕೆಯಾಗುತ್ತದೆ. ಇದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸಗಳಿಂದ ದ್ವಿಪಕ್ಷೀಯ ಮಾತುಕತೆಗಳ ಮೂಲಕ ದೇಶದ ಆರ್ಥಿಕತೆಗೆ ಆದ ಪ್ರಯೋಜನಗಳಾಗಿವೆ.
ಇತರೆ ಸುದ್ದಿಗಳು