ದಾವಣಗೆರೆ ಪೊಲೀಸರು ಪತ್ತೆ ಹಚ್ಚಿದ 1.5 ಕೋಟಿ ರೂ. ಮೌಲ್ಯದ ಕಳುವಾದ ಮೊಬೈಲ್‌ಗಳು: ವಾರಸುದಾರರಿಗೆ ಹಸ್ತಾಂತರ
ದಾವಣಗೆರೆ ಪೊಲೀಸರು ಪತ್ತೆ ಹಚ್ಚಿದ 1.5 ಕೋಟಿ ರೂ. ಮೌಲ್ಯದ ಕಳುವಾದ ಮೊಬೈಲ್‌ಗಳು: ವಾರಸುದಾರರಿಗೆ ಹಸ್ತಾಂತರ
ದಾವಣಗೆರೆ, ಅ.5 – ಜಿಲ್ಲೆಯಾದ್ಯಂತ ಕಳುವಾದ ಮತ್ತು ಕಳೆದುಹೋದ ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚುವಲ್ಲಿ ದಾವಣಗೆರೆ ಜಿಲ್ಲೆಯ ಪೊಲೀಸರು ಮಹತ್ವದ ಯಶಸ್ಸು ಕಂಡಿದ್ದಾರೆ. ಸುಮಾರು 1.5 ಕೋಟಿ ರೂ. ಮೌಲ್ಯದ 861 ಮೊಬೈಲ್‌ಗಳು ಪತ್ತೆಯಾಗಿದ್ದು, ಸಂತ್ರಸ್ತರಿಗೆ ಹಸ್ತಾಂತರಿಸಲಾಯಿತು.
2025ರ ಜನವರಿ 1ರಿಂದ ಇತ್ತೀಚೆಗೆ ತನಕ ಜಿಲ್ಲೆಯಲ್ಲಿ 2370 ಮೊಬೈಲ್ ಕಳವು ಮತ್ತು ನಷ್ಟದ ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಈ ಮೊಬೈಲ್‌ಗಳ ಪತ್ತೆಗೆ CEIR ಪೋರ್ಟಲ್ (https://www.ceir.gov.in
) ಮೂಲಕ IMEI ನಂಬರನ್ನು ಬ್ಲಾಕ್ ಮಾಡಲಾಗಿದೆ. ಈ ಮೂಲಕ ಕಳುವಾದ ಮೊಬೈಲ್‌ಗಳು ಉಪಯೋಗಕ್ಕದಾಗಿದ್ದು, ಪೊಲೀಸರಿಗೆ ಪತ್ತೆ ಹಚ್ಚಲು ಸಹಾಯವಾಯಿತು.
ಪೊಲೀಸ್ ಇಲಾಖೆಯು ಸಾರ್ವಜನಿಕರ ಸಹಕಾರದಿಂದ ಮತ್ತು ತಂತ್ರಜ್ಞಾನದ ಸಮರ್ಥ ಬಳಕೆ ಮೂಲಕ ಈ ಸಾಧನೆ ಸಾಧ್ಯವಾಗಿದೆ. ಜಿಲ್ಲಾ ಮಟ್ಟದ ವಿವಿಧ ಠಾಣೆಗಳ ಪೊಲೀಸರು ಈ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಕಳೆದುಹೋದ ಮೊಬೈಲ್‌ಗಳನ್ನು ಮತ್ತೆ ಮೂಲ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.
📢 ಸಾರ್ವಜನಿಕರಿಗೆ ಸೂಚನೆ:
ಮೊಬೈಲ್ ಕಳೆದುಹೋಗಿದರೆ ಅಥವಾ ಕಳ್ಳತನವಾದರೆ, ಸಾರ್ವಜನಿಕರು ಕೆಳಗಿನ ಕ್ರಮಗಳನ್ನು ಅನುಸರಿಸಬೇಕು:
KSP ಮೊಬೈಲ್ App ಡೌನ್‌ಲೋಡ್ ಮಾಡಿ, ‘e-lost’ ವಿಭಾಗದಲ್ಲಿ ದೂರು ಸಲ್ಲಿಸಿ.
ದೂರಿನ ಸ್ವೀಕೃತಿ ಪ್ರತಿಯನ್ನು ಡೌನ್‌ಲೋಡ್ ಮಾಡಿ.
CEIR ವೆಬ್‌ಸೈಟ್ (https://www.ceir.gov.in ) ಗೆ ಭೇಟಿ ನೀಡಿ.
ದೂರು ಪ್ರತಿ, ಗುರುತಿನ ಚೀಟಿ (ಆಧಾರ್/ಇತರೆ), IMEI ನಂಬರ್‌ಗಳನ್ನು ಅಪ್ಲೋಡ್ ಮಾಡಿ.
ನಿಮ್ಮ ಮೊಬೈಲ್ ಅನ್ನು ಬ್ಲಾಕ್ ಮಾಡಿ.
ಈ ಪ್ರಕ್ರಿಯೆಯಿಂದ ಕಳೆದುಹೋದ ಮೊಬೈಲ್‌ಗಳ ದುರ್ಬಳಕೆಯನ್ನು ತಡೆಯಲಾಗುವುದು ಮತ್ತು ಪತ್ತೆ ಹಚ್ಚಲು ಸುಲಭವಾಗುತ್ತದೆ.
ಇತರೆ ಸುದ್ದಿಗಳು