ಹುಣಸೂರು ನಗರಸಭೆ: ಗೀತಾ ಮತ್ತು ಶ್ವೇತಾ ಅನರ್ಹ
ಹುಣಸೂರು, ಸೆಪ್ಟೆಂಬರ್ ೧೯: ಹುಣಸೂರು ನಗರಸಭೆಯ ಸದಸ್ಯೆಯರಾದ ಗೀತಾ ಕೋಂ ನಿಂಗರಾಜು — ವಾರ್ಡ್ ಸಂಖ್ಯೆ ೨೪ ಮತ್ತು ಶ್ವೇತಾ ಕೋಂ ಮಂಜುನಾಥ — ವಾರ್ಡ್ ಸಂಖ್ಯೆ ೨೮ ರವರು, ಸದಸ್ಯತ್ವದಿಂದ ಅನರ್ಹರಾಗಿದ್ದಾರೆ.
ಇವರನ್ನು ಅನರ್ಹಗೊಳಿಸಿರುವುದಾಗಿ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ ಅವರು ಆದೇಶ ಹೊರಡಿಸಿದ್ದಾರೆ.
ಈ ಇಬ್ಬರೂ ಸದಸ್ಯೆಯರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾಗಿ, ನಂತರ ಬಿಜೆಪಿಗೆ ಪಕ್ಷಾಂತರ ಮಾಡಿದ್ದರು. ಕಳೆದ ೨೦೨೫ರ ಮೇ ೩ರಂದು ನಡೆದ ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ, ತಮ್ಮ ಪಕ್ಷದ ವಿಪ್ ಅನ್ನು ಉಲ್ಲಂಘಿಸಿ, ಕಾಂಗ್ರೆಸ್ ಅಭ್ಯರ್ಥಿಗೆ ಬದಲಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಮತ ಹಾಕಿದ್ದರು.
ಈ ಕಾರಣದಿಂದ, ೪ನೇ ವಾರ್ಡ್ನ ಸದಸ್ಯೆ ಭವ್ಯಾ ಎಸ್.ಸಿ ಅವರು ದೂರು ಸಲ್ಲಿಸಿದ್ದು, ಅದನ್ನು ಆಧರಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಕಾನೂನು ಪ್ರಕಾರ — ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ ಪಕ್ಷಾಂತರ ನಿಷೇಧ ಕಾಯ್ದೆ ೧೯೮೭, ಸೆಕ್ಷನ್ ೩(೧)(ಬಿ) ಅನ್ನು ಉಲ್ಲಂಘಿಸಿರುವುದರಿಂದ, ಇಬ್ಬರ ಸದಸ್ಯತ್ವ ರದ್ದುಗೊಳಿಸಲಾಗಿದೆ. ಭವ್ಯಾ ಅವರ ಪರವಾಗಿ ವಕೀಲ ಚಂದ್ರಶೇಖರ್ ವಾದ ಮಂಡಿಸಿದ್ದರು.
ಇತರೆ ಸುದ್ದಿಗಳು